ETV Bharat / state

ಎಂಜಿ ರೋಡ್​​ಗೆ ಡಿಮ್ಯಾಂಡ್​ ಹೆಚ್ಚಿಸಿದ್ದ ಗಾಂಧಿ ಪ್ರತಿಮೆ.. ಹೋರಾಟಗಾರರಿಗೂ ಇದೇ ಲ್ಯಾಂಡ್​​​​​ ಮಾರ್ಕ್​​​​​ - ಗಾಂಧೀಜಿ ಹೋರಾಟ

ಬೆಂಗಳೂರಲ್ಲಿ ನೂರಾರು ಗಾಂಧಿ ಪ್ರತಿಮೆಗಳು ತಲೆಎತ್ತಿದ್ದು, ಕೆಲವೊಂದು ಐತಿಹಾಸಿಕ ಹಿನ್ನೆಲೆ ಹೊಂದಿದ್ದರೆ ಇನ್ನೂ ಕೆಲವು ಪ್ರವಾಸಿ ತಾಣವಾಗಿವೆ. ಈ ನಡುವೆ ಎಂಜಿ ರಸ್ತೆಯಲ್ಲಿನ ಗಾಂಧಿ ಪಾರ್ಕ್​​​ನ ಪ್ರತಿಮೆ ನೂರಾರು ಸಂಘಟನೆಗಳಿಗೆ ಹೋರಾಟ ಆರಂಭಿಸಲು ಲ್ಯಾಂಡ್ ಮಾರ್ಕ್ ಆಗಿದೆ.

-gandhi-statue in Park
ಗಾಂಧಿ ಪಾರ್ಕ್​​​ನಲ್ಲಿರುವ ಪ್ರತಿಮೆ
author img

By

Published : Oct 2, 2020, 2:19 PM IST

ಬೆಂಗಳೂರು: ಗಾಂಧೀಜಿ ಅಂದರೆ ಸೌಮ್ಯ ಸ್ವಭಾವದ ವ್ಯಕ್ತಿತ್ವ. ‌ನ್ಯಾಯಕ್ಕಾಗಿ ಸತ್ಯಾಗ್ರಹ ಎಂಬ ಅಮೂಲಾಗ್ರ ಪ್ರಖರ ನೀತಿ ಹುಟ್ಟುಹಾಕಿದ ಮಹನೀಯ. ಇಂದು ಬಾಪೂಜಿಯ ಜಯಂತಿ ಹಿನ್ನೆಲೆ ನಗರದ ಹಲವೆಡೆ ಇರುವ ಗಾಂಧಿ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ಸ್ಮರಿಸಲಾಗುತ್ತಿದೆ.

ಅಂದಹಾಗೇ, ಬೆಂಗಳೂರಿನಲ್ಲಿ ಸಾವಿರಾರು ಗಾಂಧಿ ಪ್ರತಿಮೆಗಳಿವೆ.‌ ಆದರೆ ಕೆಲವು ಏರಿಯಾಗಳು, ಸರ್ಕಲ್​ಗಳು ಪ್ರಸಿದ್ಧಿ ಪಡೆದಿದ್ದೇ ಈ ಗಾಂಧಿ ಪ್ರತಿಮೆಗಳಿಂದ.‌

ಎಂಜಿ ರಸ್ತೆಯ ಗಾಂಧಿ ಪಾರ್ಕ್​​​ನಲ್ಲಿರುವ ಪ್ರತಿಮೆ

ನಗರದಲ್ಲಿ ಜನತೆ ಅನ್ಯಾಯವನ್ನು ಪ್ರಶ್ನಿಸಬೇಕಾದರೂ, ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಬೇಕಾದರೂ ಮೊದಲಿಗೆ ಗುಂಪು ಸೇರೋದು ಗಾಂಧಿ ಪ್ರತಿಮೆ ಬಳಿ.‌ ಅದರಲ್ಲಿ ಪ್ರಮುಖ ಏರಿಯಾ ಅಂದರೆ ಮೌರ್ಯ ಸರ್ಕಲ್. ವಾರ್ಡ್ ನಂ 94 ಗಾಂಧಿನಗರದಲ್ಲಿ ಇರುವ ಗಾಂಧಿ ಪ್ರತಿಮೆಯನ್ನು 1997 ನವೆಂಬರ್ 7 ರಂದು ಅಂದಿನ‌‌ ಪಾಲಿಕೆ ಸದಸ್ಯ ಅಶೋಕ್‌‌. ಬಿ ದಾನಿ ನೇತೃತ್ವದಲ್ಲಿ ನಿರ್ಮಾಣ ಮಾಡಲಾಗಿತ್ತು.

ಅಂದಿನಿಂದ ಇಂದಿನವರೆಗೆ ಯಾವುದೇ ಮುಷ್ಕರ, ಪ್ರತಿಭಟನೆ ನಡೆದೂ ಇದೇ ಗಾಂಧಿ ಪ್ರತಿಮೆಯ ಹತ್ತಿರ ನಡೆಯುತ್ತಿದೆ. ‌ಇಂದಿಗೂ ಹಲವರ ಧ್ವನಿಯಾಗಿರುವ ಗಾಂಧಿ ಪ್ರತಿಮೆಗೆ ಹೂವಿನ ಹಾರ ಹಾಕಿ ನಂತರ ಮುಂದಿನ ಕಾರ್ಯಕ್ರಮ ಶುರುವಾಗುವುದು.

ಎಂಜಿ ರೋಡ್​​ಗೆ ಡಿಮ್ಯಾಂಡ್ ತಂದ‌ ಗಾಂಧಿ ಪಾರ್ಕ್:

ಮಹಾತ್ಮ ಗಾಂಧೀಜಿ ರಸ್ತೆ(ಎಂಜಿ ರೋಡ್) ಜನಸಂದಣಿಯಿಂದ ಕೂಡಿರುವ ಹೃದಯಭಾಗ. ದೇಶ-ವಿದೇಶದಿಂದ ಬರುವ ಅದೆಷ್ಟೂ ಮಂದಿ ಎಂಜಿ ರೋಡ್ ನತ್ತ ಹೆಜ್ಜೆ‌ಹಾಕದೇ ಇರೋದಲ್ಲ. ಇಂತಹ ಹೈಟೆಕ್‌ ಏರಿಯಾದಲ್ಲಿ ಗಾಂಧೀಜಿ ಪಾರ್ಕ್ ಕೂಡ ಇದೆ. ಇಲ್ಲಿ ಹತ್ತು ಹಲವು ಸಂಘಟನೆಗಳು ಪ್ರತಿಭಟನೆ, ಮೌನಾಚರಣೆ, ಧರಣಿ ನಡೆಸಲು ಮುಂದಾಗುತ್ತವೆ.

ಇಷ್ಟೇ ಅಲ್ಲದೆ ಈ ಜಾಗ ಪ್ರಮುಖ ಪ್ರವಾಸಿ ತಾಣವೂ ಹೌದು. ಇಲ್ಲನ ಪ್ರತಿಮೆ ನೋಡಲು ಜನ ಆಗಮಿಸುತ್ತಾರೆ. ಅಲ್ಲದೆ ಪಾರ್ಕ್​​​​ನಲ್ಲಿ ಸುತ್ತಾಡಿ ವಿಶ್ರಾಂತಿ ಪಡೆಯುತ್ತಾರೆ.

ಮೊದಲು ಈ ಜಾಗಕ್ಕೆ ಸೌತ್ ಪರೇಡ್ ಎಂಬ ಹೆಸರು ಇತ್ತು. 1948ರ ಫೆ.26 ರಂದು ಮಹಾತ್ಮಾ ಗಾಂಧಿ ರಸ್ತೆ ಎಂದು ಮರು ನಾಮಕರಣ ಮಾಡಲಾಯಿತು. ಇದೀಗ ಇದೇ ಗಾಂಧಿ ಪಾರ್ಕ್​​​​​ನಿಂದ‌ ಎಂಜಿ ರೋಡ್ ನೇಮ್ ಫೇಮಸ್​​ ಆಗಿದ್ದನ್ನು ನೆನೆಯಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.