ಬೆಂಗಳೂರು: ಡಿಕೆಶಿ ಬಂಧನ ಕುರಿತು ಕೇಂದ್ರದ ವಿರುದ್ಧ ಪ್ರತಿಭಟನೆಗೆ ಮುಂದಾಗುವಂತೆ ಅನರ್ಹ ಶಾಸಕ ಭೈರತಿ ಬಸವರಾಜ ದೆಹಲಿಯಿಂದ ಕರೆ ಮಾಡಿ ತಿಳಿಸಿದ್ದಾರೆ ಎಂದು ಪಾಲಿಕೆ ಸದಸ್ಯ ಶ್ರೀಕಾಂತ ಗೌಡ, ಜಯಪ್ರಕಾಶ ಹೇಳಿದ ವಿಡಿಯೊ ತುಣುಕೊಂದು ವೈರಲ್ ಆಗಿದೆ.
ಇದರೊಟ್ಟಿಗೆ ಕಾಂಗ್ರೆಸ್ ಕಡೆ ಇದೀಗ ಭೈರತಿ ಬಸವರಾಜ್ ಮತ್ತೆ ಮುಖ ಮಾಡಿದ್ರಾ ಎಂಬ ಅನುಮಾನ ಸಹಜವಾಗಿಯೆ ಕಾಡಲು ಶುರುವಾಗಿದೆ.
ಡಿಕೆ ಪರವಾಗಿ ನಿಂತ್ರಾ?:
ತಮ್ಮ ಬೆಂಬಲಿಗರ ಮೂಲಕ ಪ್ರತಿಭಟನೆಗೆ ಕರೆ ನೀಡಿದ್ರಾ? ಅನ್ನುವ ಕುತೂಹಲ ಮೂಡಿಸಿದ್ದು, ಸಚಿವ ಸ್ಥಾನ ಆಕಾಂಕ್ಷಿಯಾಗಿರುವ ಭೈರತಿ ಬಸವರಾಜ್ ಇದೀಗ ಸುಪ್ರಿಂ ವಿಚಾರಣೆ ವಿಳಂಬವಾಗುತ್ತಿರುವ ಹಿನ್ನೆಲೆ ಬೇಸರಗೊಂಡಿದ್ದಾರೆ ಎನ್ನಲಾಗುತ್ತಿದೆ.