ETV Bharat / state

ರಾಮಮಂದಿರ ಉದ್ಘಾಟನೆಯಂದು ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ - Ayodhya Ram Mandir

ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. ಅಂದು ಕರ್ನಾಟಕ ಮುಜರಾಯಿ ಇಲಾಖೆಯಡಿ ಬರುವ ಎಲ್ಲಾ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ನಡೆಸಲು ಸರ್ಕಾರ ಸೂಚನೆ ನೀಡಿದೆ.

ಅಯೋಧ್ಯೆ
ಅಯೋಧ್ಯೆ
author img

By ETV Bharat Karnataka Team

Published : Jan 7, 2024, 6:49 AM IST

ಬೆಂಗಳೂರು: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಜನವರಿ 22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಜರುಗಲಿದೆ. ಈ ನಿಟ್ಟಿನಲ್ಲಿ ಅಂದು ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸುವಂತೆ ರಾಜ್ಯ ಸರ್ಕಾರ ನಿರ್ದೇಶನ‌ ನೀಡಿದೆ.

ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಈ ನಿರ್ದೇಶನ ನೀಡಿದ್ದಾರೆ. ಪ್ರಾಣ ಪ್ರತಿಷ್ಠಾಪನಾ ಸಮಯವಾದ ಹನ್ನೆರಡು ಗಂಟೆ 29 ನಿಮಿಷ 8 ಸೆಕೆಂಡ್​ನಿಂದ 12 ಗಂಟೆ 30 ನಿಮಿಷ 32 ಸೆಕೆಂಡ್ ಸಮಯದಲ್ಲಿ ಏಕಕಾಲದಲ್ಲಿ ಎಲ್ಲಾ ದೇವಸ್ಥಾನಗಳಲ್ಲಿ ಮಹಾಮಂಗಳಾರತಿ ನಡೆಸಿ ದೇಶ, ರಾಜ್ಯಕ್ಕೆ ಶ್ರೀರಾಮನ ರಕ್ಷಣೆ ಇರಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಜನವರಿ 22ರಂದು 51 ಇಂಚು ಎತ್ತರದ ರಾಮಲಲ್ಲಾ ವಿಗ್ರಹ ಸ್ಥಾಪನೆಯಾಗಲಿದೆ. ವಿಗ್ರಹಕ್ಕೆ ಜನವರಿ 16ರಿಂದ ಮಸ್ತಕಾಭಿಷೇಕ ಪ್ರಾರಂಭವಾಗಲಿದೆ. ಏಳು ದಿನಗಳ ಕಾಲ ಈ ಧಾರ್ಮಿಕ ಕೈಂಕರ್ಯ ನಡೆಯಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಈಗಾಗಲೇ ತಿಳಿಸಿದೆ.

ಇದನ್ನೂ ಓದಿ: ಜ.22ರಂದು ಅಯೋಧ್ಯೆಯ 'ರಾಮಲಲ್ಲಾ' ಮೂರ್ತಿ ಪ್ರಾಣ ಪ್ರತಿಷ್ಠಾಪನೆ: ಅದೇ ದಿನದಂದು ಹೆರಿಗೆಗೆ ಗರ್ಭಿಣಿಯರ ಬಯಕೆ!

ನಾಗರ ಶೈಲಿಯ ಭವ್ಯ ಮಂದಿರ: ಭವ್ಯ ರಾಮ ಮಂದಿರ ಸಾಂಪ್ರದಾಯಿಕ ನಾಗರ ಶೈಲಿಯಲ್ಲಿದೆ. 380 ಅಡಿ ಉದ್ದ (ಪೂರ್ವ-ಪಶ್ಚಿಮ), 250 ಅಡಿ ಅಗಲ ಮತ್ತು 161 ಅಡಿ ಎತ್ತರ ಹೊಂದಿದೆ. ಶಿಖರಗಳೆಂದು ಕರೆಯಲ್ಪಡುವ ಎತ್ತರದ ಗೋಪುರಗಳಿವೆ. ಮೇಲ್ಭಾಗದಲ್ಲಿ ಕಳಶವಿದೆ. ದೇವಾಲಯಗಳ ಕಂಬಗಳನ್ನು ಸಂಕೀರ್ಣ ವಿನ್ಯಾಸಗಳಿಂದ ಆಕರ್ಷಕವಾಗಿ ಕೆತ್ತಲಾಗಿದೆ. ಗೋಡೆಗಳನ್ನು ಶಿಲ್ಪಗಳು ಮತ್ತು ಉಬ್ಬು ಶಿಲ್ಪಗಳಿಂದ ಅಲಂಕರಿಸಲಾಗಿದೆ. ಮಂದಿರ ಮೂರು ಅಂತಸ್ತಿನಲ್ಲಿದೆ. ಪ್ರತಿ ಮಹಡಿ 20 ಅಡಿ ಎತ್ತರವಿದೆ. ದೇಗುಲವು ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ.

ಮುಖ್ಯ ಗರ್ಭಗುಡಿಯಲ್ಲಿ ಭಗವಾನ್ ಶ್ರೀರಾಮನ ಬಾಲ್ಯದ ರೂಪವಿದೆ. (ಶ್ರೀರಾಮ ಲಲ್ಲಾನ ವಿಗ್ರಹ) ಮೊದಲ ಮಹಡಿಯಲ್ಲಿ ಶ್ರೀರಾಮನ ದರ್ಬಾರ್ ಇರುತ್ತದೆ. ದೇವಾಲಯವು 5 ಮಂಟಪಗಳನ್ನು ಒಳಗೊಂಡಿದೆ. ಅವುಗಳೆಂದರೆ, ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನೆ ಮತ್ತು ಕೀರ್ತನಾ ಮಂಟಪಗಳು. ಆವರಣದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಂದಿರಗಳಿವೆ. ಇವು ಸೂರ್ಯ ದೇವ, ದೇವಿ ಭಗವತಿ, ಗಣೇಶ್ ಭಗವಾನ್ ಮತ್ತು ಭಗವಾನ್ ಶಿವನಿಗೆ ಸಮರ್ಪಿತವಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.