ETV Bharat / state

ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಬಿಬಿಎಂಪಿಯಿಂದ ಜಾಗೃತಿ ಅಭಿಯಾನ - ಬಿಬಿಎಂಪಿಯಿಂದ ಜಾಗೃತಿ ಅಭಿಯಾನ

ಈ ವರ್ಷದ ಆಚರಣೆಯ ಮುಖ್ಯ ಗಮನವು ತಂಬಾಕು ಹಾನಿಯಿಂದ ಪರಿಸರ ರಕ್ಷಿಸುವುದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ವರ್ಷ ಸುಮಾರು 3.5 ಮಿಲಿಯನ್ ಹೆಕ್ಟೇರ್ ಭೂಮಿ ತಂಬಾಕು ಬೆಳೆಯಲು ನಾಶವಾಗುತ್ತದೆ. ವಿಶೇಷವಾಗಿ ಅಭಿವೃದ್ಧಿಶೀಲ ಜಗತ್ತಿನಲ್ಲಿ ಬೆಳೆಯುತ್ತಿರುವ ತಂಬಾಕು ಅರಣ್ಯನಾಶಕ್ಕೆ ಕೊಡುಗೆ ನೀಡುತ್ತದೆ..

BBMP Awareness on Tobacco
ತಂಬಾಕು ನಿಷೇಧದ ಬಗ್ಗೆ ಬಿಬಿಎಂಪಿ ಅಭಿಯಾನ
author img

By

Published : May 31, 2022, 3:03 PM IST

ಬೆಂಗಳೂರು : ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ತಂಬಾಕು ಹಾಗೂ ಧೂಮಪಾನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಗೃತಿ ಅಭಿಯಾನಕ್ಕೆ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ವಿಶೇಷ ಆಯುಕ್ತ ಡಾ.ತ್ರಿಲೋಕ್ ಚಂದ್ರ ಚಾಲನೆ ನೀಡಿದರು.

'ತಂಬಾಕು : ನಮ್ಮ ಪರಿಸರಕ್ಕೆ ಮಾರಕ' ಎಂಬ ಘೋಷಣೆಯೊಂದಿಗೆ ತಂಬಾಕು ಸೇವನೆಯಿಂದ ಪರೋಕ್ಷ ಧೂಮಪಾನದಿಂದ ಉಂಟಾಗುವ ದುಷ್ಪರಿಣಾಮಗಳ‌ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ವಿಶೇಷ ಪ್ರಯತ್ನ ಮಾಡಲಾಗುತ್ತಿದೆ. ಜಾಗೃತಿ ಅಭಿಯಾನದ ಅಂಗವಾಗಿ ರೇಡಿಯೋ ಟಾಕ್ ಶೋ ಮತ್ತು ಕಿರುನಾಟಕ ಪ್ರಸರಣ ಜೊತೆಗೆ ಮೀಸಲಾದ ಸಂದೇಶವನ್ನು ಆಟೋ ಪ್ರಚಾರದ ಅಭಿಯಾನ ಯೋಜಿಸಲಾಗಿದೆ. ಪ್ರಚಾರವು 3 ವಾರಗಳ ಕಾಲ ನಗರದಾದ್ಯಂತ ನಡೆಯಲಿದೆ.

ತಂಬಾಕು ನಿಷೇಧದ ಬಗ್ಗೆ ಬಿಬಿಎಂಪಿ ಅಭಿಯಾನ..

ತಂಬಾಕು ಹಾನಿಗಳ ಮೇಲೆ ಕೇಂದ್ರೀಕರಿಸಿದ ಈ ಕಾರ್ಯಕ್ರಮದಲ್ಲಿ ಸಮಾಲೋಚಕರೊಂದಿಗೆ 10 ಆಟೋಗಳ ಮೂಲಕ ಸಾರ್ವಜನಿಕ ಪ್ರದೇಶ ಹಾಗೂ ಶಾಲಾ-ಕಾಲೇಜುಗಳ ಆವರಣದಲ್ಲಿ ಜಾಗೃತಿ ಮೂಡಿಸಲಾಗುತ್ತವೆ. ಆಯ್ದ ಪ್ರದೇಶಗಳಲ್ಲಿ 2 ವಾರಗಳವರೆಗೆ ಡಿ-ಅಡಿಕ್ಷನ್ ಸೇವೆಗಳ ಮಾಹಿತಿ ಒದಗಿಸಲಾತ್ತದೆ ಎಂದು ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ತಿಳಿಸಿದರು.

ಈ ವರ್ಷದ ಆಚರಣೆಯ ಮುಖ್ಯ ಗಮನವು ತಂಬಾಕು ಹಾನಿಯಿಂದ ಪರಿಸರ ರಕ್ಷಿಸುವುದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ವರ್ಷ ಸುಮಾರು 3.5 ಮಿಲಿಯನ್ ಹೆಕ್ಟೇರ್ ಭೂಮಿ ತಂಬಾಕು ಬೆಳೆಯಲು ನಾಶವಾಗುತ್ತದೆ. ವಿಶೇಷವಾಗಿ ಅಭಿವೃದ್ಧಿಶೀಲ ಜಗತ್ತಿನಲ್ಲಿ ಬೆಳೆಯುತ್ತಿರುವ ತಂಬಾಕು ಅರಣ್ಯನಾಶಕ್ಕೆ ಕೊಡುಗೆ ನೀಡುತ್ತದೆ.

ತಂಬಾಕು ಪ್ರತಿ ವರ್ಷ 8 ಮಿಲಿಯನ್ ಜನರನ್ನು ಕೊಲ್ಲುತ್ತದೆ ಮತ್ತು ನಮ್ಮ ಪರಿಸರವನ್ನು ನಾಶಪಡಿಸುತ್ತದೆ. ಕೃಷಿ, ಉತ್ಪಾದನೆ, ವಿತರಣೆ, ಬಳಕೆ ಮತ್ತು ನಂತರದ ಗ್ರಾಹಕ ತ್ಯಾಜ್ಯದ ಮೂಲಕ ಮಾನವನ ಆರೋಗ್ಯಕ್ಕೆ ಮತ್ತಷ್ಟು ಹಾನಿ ಮಾಡುತ್ತದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಮಠದಲ್ಲಿ ನೀರಿನ ಕೊರತೆ, ಆನೆಗೆ ಪ್ರತಿನಿತ್ಯ ಗ್ಯಾರೇಜ್‌ನಲ್ಲೇ ಸ್ನಾನ- ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.