ETV Bharat / state

ಬೆಂಗಳೂರು: ಜನವರಿ 5ರಿಂದ ಅವರೆ ಮೇಳ; ವಿವಿಧ ಖಾದ್ಯ ಸವಿಯುವ ಅವಕಾಶ - ​ ETV Bharat Karnataka

ಬೆಂಗಳೂರಿನಲ್ಲಿ 24ನೇ ಅವರೆ ಮೇಳ ಆಯೋಜಿಸಲಾಗುತ್ತಿದೆ. ನೂರಕ್ಕೂ ಹೆಚ್ಚು ಅವರೆ ತಿನಿಸುಗಳನ್ನು ಸವಿಯಲು ಅವಕಾಶವಿದೆ.

ಬೆಂಗಳೂರಿನಲ್ಲಿ 24ನೇ ಅವರೆ ಮೇಳ
ಬೆಂಗಳೂರಿನಲ್ಲಿ 24ನೇ ಅವರೆ ಮೇಳ
author img

By ETV Bharat Karnataka Team

Published : Dec 7, 2023, 9:38 PM IST

ಬೆಂಗಳೂರು: ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ 24ನೇ ಆವೃತಿಯ ಅವರೆ ಬೇಳೆ ಮೇಳವನ್ನು ಜ.5ರಿಂದ 9ರವರೆಗೆ ಆಯೋಜಿಸಲಾಗಿದೆ. ವರ್ಷಾರಂಭದಲ್ಲೇ ಅವರೆ ಬೇಳೆಯ ವಿವಿಧ ಖಾದ್ಯಗಳನ್ನು ಸವಿಯುವ ಅವಕಾಶ ಜನರಿಗೆ ದೊರೆಯಲಿದ್ದು ಅವರೆ ದೋಸೆ, ಪಾಯಸ, ಮಂಚೂರಿಯನ್, ವಡೆ, ಕೋಡುಬಳೆ, ಐಸ್‌ಕ್ರೀಂ, ಹಲ್ವಾ ಸೇರಿದಂತೆ ನೂರಕ್ಕೂ ಹೆಚ್ಚು ತಿನಿಸುಗಳು ಮೇಳದಲ್ಲಿ ಲಭ್ಯವಿರಲಿದೆ.

ವಿ.ವಿ.ಪುರಂನಲ್ಲಿರುವ ಫುಡ್ ಸ್ಟ್ರೀಟ್ ಇಷ್ಟು ದಿನ ಬೇರೆ ಬೇರೆ ಮೇಳಗಳನ್ನು ನಡೆಸುವ ಸ್ಥಳವಾಗಿತ್ತು. ಕಳೆದ ವರ್ಷ ಫುಡ್ ಸ್ಟ್ರೀಟ್‌ ನವೀಕರಿಸಲ್ಪಟ್ಟಿದ್ದು ಹೆಚ್ಚಿನ ಜನಸಂದಣಿಯ ಕಾರಣ, ನ್ಯಾಷನಲ್ ಕಾಲೇಜು ಮೈದಾನಕ್ಕೆೆ ಸ್ಥಳಾಂತರಿಸಲಾಗಿದೆ. ಈ ಹಿಂದೆ ಅವರೆ ಬೇಳೆ ಮೇಳದಲ್ಲಿ ಸಾಕಷ್ಟು ಜನರು ಭಾಗವಹಿಸಿದ್ದರಿಂದ ಕಾಲ್ತುಳಿತ ಉಂಟಾಗಿತ್ತು. ಇದರಿಂದಾಗಿ ಸರತಿ ಸಾಲಿನಲ್ಲಿ ನಿಂತು ಬೇಕಾದ ಆಹಾರವನ್ನು ಸೇವಿಸಲು ಸಾದ್ಯವಾಗಿರಲಿಲ್ಲ. ಐದು ಲಕ್ಷಕ್ಕೂ ಹೆಚ್ಚು ಜನರು ಸ್ಥಳದಲ್ಲಿ ನೆರೆದಿದ್ದರು. ಆದರೆ, ಈ ವರ್ಷ ಅಂತಹ ಪರಿಸ್ಥಿತಿ ಮರುಕಳಿಸದಂತೆ ಆಯೋಜಕರು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.

ಕಳೆದ ವರ್ಷ ನ್ಯಾಷನಲ್ ಕಾಲೇಜು ಮೈದಾನದ ಒಂದು ಭಾಗವನ್ನು ಮಾತ್ರ ಮೇಳಕ್ಕೆೆ ಬಳಸಿಕೊಳ್ಳಲಾಗಿತ್ತು. ಆದರೆ ಈ ವರ್ಷ ಸಂಪೂರ್ಣ ಸ್ಥಳವನ್ನು ಬಳಸಿಕೊಳ್ಳುವುದರೊಂದಿಗೆ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗುತ್ತಿದೆ. ಕಳೆದ ವರ್ಷ ಸುಮಾರು 40 ಸ್ಟಾಲ್‌ಗಳಿದ್ದರೆ, ಈ ವರ್ಷ ಸುಮಾರು 80 ಸ್ಟಾಲ್‌ಗಳಿರಲಿವೆ. ದೋಸೆಯಂತಹ ಹೆಚ್ಚು ಬೇಡಿಕೆಯಿರುವ ತಿನಿಸುಗಳಿಗೆ ಸುಮಾರು ಐದು ಕೌಂಟರ್‌ಗಳು ಇರಲಿವೆ.

ಹಿರಿಯ ನಾಗರಿಕರಿಗಾಗಿ ವಿಶೇಷ ಕೌಂಟರ್ ಜೊತೆಗೆ ಪ್ರತ್ಯೇಕ ಆಸನ ವ್ಯವಸ್ಥೆೆಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಟಿಕೆಟ್ ಇದ್ದು, ಆನ್‌ಲೈನ್ ಫ್ಲಾಟ್‌ಪಾರಂನಲ್ಲಿ ಪ್ರತಿ ವ್ಯಕ್ತಿಗೆ ಸುಮಾರು 100 ರೂ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಇದು ಕುಟುಂಬ ಮತ್ತು ಮಕ್ಕಳೊಂದಿಗೆ ಬರುವ ಜನರಿಗೆ ಮತ್ತು ಸರದಿಯಲ್ಲಿ ನಿಲ್ಲಲು ಬಯಸದವರಿಗಾಗಿ ಇರುತ್ತದೆ.

ಕಳೆದ ವರ್ಷ ನಾವು ನಿರೀಕ್ಷಿಸದಷ್ಟು ಜನರು ಮೇಳಕ್ಕೆೆ ಭೇಟಿ ನೀಡಿದ್ದರು. ಮೆಟ್ರೋ ನಿಲ್ದಾಣದಿಂದ ಮೇಳದ ಸ್ಥಳಕ್ಕೆೆ ಸುಲಭವಾಗಿ ತಲುಪಲು ಸಹಕಾರಿಯಾಗಿದೆ. ಈ ವರ್ಷ ಮೇಳದಲ್ಲಿ ಖಾದ್ಯಗಳನ್ನು ಸವಿಯದೆ ಯಾರೂ ಮನೆಗೆ ಹೋಗದಂತೆ ಉತ್ತಮ ತಯಾರಿ ನಡೆಸುತ್ತಿದ್ದೇವೆ ಎಂದು ಆಯೋಜಕರಾದ ಶ್ರೀ ವಾಸವಿ ಕಾಂಡಿಮೆಂಟ್ಸ್ ಮಾಲೀಕರಾದ ಕೆ.ಎಸ್.ಸ್ವಾತಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೃಷಿಮೇಳ: ಸಿರಿಧಾನ್ಯಗಳಿಂದ ಬಗೆಬಗೆ ಆಹಾರ ಪದಾರ್ಥಗಳ ತಯಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.