ETV Bharat / state

ಸುಧಾರಣೆಯತ್ತ ಆಟೋಮೊಬೈಲ್ ಕ್ಷೇತ್ರ: ಹೆಚ್ಚಿದ ಬಿಡಿ ಭಾಗಗಳ ಉತ್ಪನ್ನಗಳ ಮಾರಾಟ

author img

By

Published : Nov 28, 2020, 4:49 PM IST

ಆಟೋಮೊಬೈಲ್ ವಲಯಕ್ಕೆ ಸಂಬಂಧಪಟ್ಟ ಮಷಿನ್ ಟೂಲ್ಸ್ ಕಾರ್ಖಾನೆಗಳ ಉತ್ಪನ್ನ ಪ್ರಮಾಣವೂ ಏರಿದೆ. ಮಾರ್ಚ್​​​​ ತಿಂಗಳಿಂದ ಇದ್ದ ಬಿಡಿ ಭಾಗಗಳು ಮಾರಾಟವಾಗಿರುವುದಲ್ಲದೆ ಕೇರಳ,ಆಂಧ್ರ ಹಾಗೂ ತಮಿಳುನಾಡು ರಾಜ್ಯಗಳಿಂದ ಹೊಸ ಆರ್ಡರ್​​​ಗಳು ಬರುತ್ತಿವೆ..

Automobile field towards improvement
ಆಟೋಮೊಬೈಲ್ ಕ್ಷೇತ್ರ

ಬೆಂಗಳೂರು : ಕೋವಿಡ್-19 ಭೀತಿಯಿಂದ ಪ್ರಯಾಣಕ್ಕೆ ಸ್ವಂತ ದ್ವಿಚಕ್ರ ವಾಹನ ಅಥವಾ ಕಾರುಗಳ ಆಯ್ಕೆ ಹಿನ್ನೆಲೆ ಆಟೋಮೊಬೈಲ್ ಬಿಡಿ ಉತ್ಪನ್ನಗಳ (ಸ್ಪೇರ್ ಪಾರ್ಟ್ಸ್) ಮಾರಾಟ ಹೆಚ್ಚಾಗಿದೆ ಎಂದು ಪೀಣ್ಯ ಕೈಗಾರಿಕಾ ವಲಯದ ಉದ್ಯಮಿಗಳು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಪೀಣ್ಯ ಕೈಗಾರಿಕಾ ಸಂಘದ ಕಾರ್ಯದರ್ಶಿ ವಿಜಯ್ ಕುಮಾರ್

ಇದನ್ನೂ ಓದಿ...ಅಬ್ಬಾ!.. ಭಾರತದಲ್ಲಿ ಹಬ್ಬದ ತಿಂಗಳಲ್ಲಿ 61,253 ಕೋಟಿ ರೂ.ಆನ್​​​​ಲೈನ್​ ವಹಿವಾಟು!!!

ಈ ಕುರಿತು ಮಾತನಾಡಿದ ಪೀಣ್ಯ ಕೈಗಾರಿಕಾ ಸಂಘದ ಕಾರ್ಯದರ್ಶಿ ವಿಜಯ್ ಕುಮಾರ್, ಅಗತ್ಯ ಸೇವೆಗಳಲ್ಲಿ ಏಳಿಗೆ ಕಂಡಿದ್ದಲ್ಲದೆ ಆಟೋಮೊಬೈಲ್ ವಲಯದಲ್ಲೂ ಏರಿಕೆ ಕಂಡಿದೆ. ಸಾರ್ವಜನಿಕ ಸೇವೆಗಳಾದ ಮೆಟ್ರೋ, ಬಿಎಂಟಿಸಿ ಹಾಗೂ ಕೆಎಸ್​ಆರ್​​ಟಿಸಿ ಸೇವೆಗಳ ಬಳಕೆ ಕಡಿಮೆಯಾಗಿದೆ. ಈ ಹಿನ್ನೆಲೆ ಸ್ವಂತ ಗಾಡಿಗಳ ಬಳಕೆ ಪ್ರಮಾಣ ಅಧಿಕವಾಗಿದ್ದು, ವಾಹನಗಳ ಬಿಡಿ ಭಾಗಗಳ ಉತ್ಪನ್ನ ಹಾಗೂ ಮಾರಾಟ ಹೆಚ್ಚಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಆಟೋಮೊಬೈಲ್ ವಲಯಕ್ಕೆ ಸಂಬಂಧಪಟ್ಟ ಮಷಿನ್ ಟೂಲ್ಸ್ ಕಾರ್ಖಾನೆಗಳ ಉತ್ಪನ್ನ ಪ್ರಮಾಣವೂ ಏರಿದೆ. ಮಾರ್ಚ್​​​​ ತಿಂಗಳಿಂದ ಇದ್ದ ಬಿಡಿ ಭಾಗಗಳು ಮಾರಾಟವಾಗಿರುವುದಲ್ಲದೆ ಕೇರಳ,ಆಂಧ್ರ ಹಾಗೂ ತಮಿಳುನಾಡು ರಾಜ್ಯಗಳಿಂದ ಹೊಸ ಆರ್ಡರ್​​​ಗಳು ಬರುತ್ತಿವೆ ಎಂದರು.

ಇದನ್ನೂ ಓದಿ...ಷೇರುಪೇಟೆಯಲ್ಲಿ ಇಂದು ಮೋಡ ಕವಿದ ವಾತಾವರಣ

ಮಾರುತಿ ಸುಜುಕಿ ಟೊಯೊಟಾ ಹಾಗೂ ಇನ್ನಿತರೆ ಆಟೋಮೊಬೈಲ್ ದಿಗ್ಗಜ ಕಂಪನಿಗಳು ತಮ್ಮ ಉತ್ಪನ್ನಗಳ ರಫ್ತಿಗೆ ಯೋಜನೆಗಳನ್ನು ರೂಪಿಸುತ್ತಿವೆ. ಜೊತೆಗೆ ತ್ರೈಮಾಸಿಕ ಫಲಿತಾಂಶಗಳಲ್ಲಿ ಆಟೋಮೊಬೈಲ್ ವಲಯದಲ್ಲೂ ಚೇತರಿಕೆ ಕಂಡಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.