ETV Bharat / state

ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನ.. ತಡವಾಗಿ ದೂರು ನೀಡಿದ‌ ಮಹಿಳೆ - ತನಿಖೆ ಚುರುಕು

ಮಹಿಳೆ ನೀಡಿದ ದೂರಿನ‌ ಮೇರೆಗೆ ಕೃತ್ಯವೆಸಗಿದ ಆರೋಪದಡಿ ತಲೆಮರೆಸಿಕೊಂಡಿರುವ ವಿಲಿಯಂ ಪ್ರಕಾಶ್ ವಿರುದ್ಧ ಪ್ರಕರಣ ದಾಖಲಿಕೊಂಡು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Accused William Prakash
ಆರೋಪಿ ವಿಲಿಯಂ ಪ್ರಕಾಶ್​
author img

By

Published : Sep 16, 2022, 3:14 PM IST

Updated : Sep 16, 2022, 3:36 PM IST

ಬೆಂಗಳೂರು: ಚಾಕು ತೋರಿಸಿ ಮಹಿಳೆ‌ ಮೇಲೆ ಅತ್ಯಾಚಾರ ಯತ್ನಿಸಿರುವ ಘಟನೆ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಲಾ ನಗರದಲ್ಲಿ ಬೆಳಕಿಗೆ ಬಂದಿದೆ‌. ಮಹಿಳೆ ನೀಡಿದ ದೂರಿನ‌ ಮೇರೆಗೆ ಕೃತ್ಯವೆಸಗಿದ ಆರೋಪದಡಿ ತಲೆಮರೆಸಿಕೊಂಡಿರುವ ವಿಲಿಯಂ ಪ್ರಕಾಶ್ ವಿರುದ್ಧ ಪ್ರಕರಣ ದಾಖಲಿಕೊಂಡು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಶಾಂತಲಾನಗರದಲ್ಲಿ ವಾಸವಾಗಿದ್ದ ಮಹಿಳೆ ಇದೇ ತಿಂಗಳು 10ರ ಸುಮಾರು 9.30ರ ವೇಳೆಗೆ ಆರೋಪಿ ಕೃತ್ಯವೆಸಗಿದ್ದಾನೆ. ಏರಿಯಾದಲ್ಲಿ ಕೂರಿಸಿದ್ದ ಗಣೇಶ ಮೂರ್ತಿ ನಿಮಜ್ಜನ ಮುಗಿದ ಬಳಿಕ ಮನೆಯ ಪಕ್ಕದಲ್ಲಿರುವ ಚರ್ಚ್ ಬಳಿ ಲೈಟ್ ಆಫ್ ಮಾಡಲು ಮಹಿಳೆ ಹೋಗಿದ್ದರು.‌ ಈ ವೇಳೆ ಹಿಂಬದಿಯಿಂದ ಬಂದ ಪ್ರಕಾಶ್, ಚಾಕು ತೋರಿಸಿ ಮೈ-ಕೈ ಮುಟ್ಟಿ ಲೈಂಗಿಕವಾಗಿ ದೌರ್ಜನ್ಯವೆಸಗಿದ್ದಾನೆ.

ಚಾಕು ತೋರಿಸಿ ಆತ್ಯಾಚಾರಕ್ಕೆ ಯತ್ನ

ಅಲ್ಲದೆ‌ ಕುತ್ತಿಗೆ ಮೇಲೆ ಚಾಕು ಇಟ್ಟು ಕೊಲೆ‌ ಮಾಡುವುದಾಗಿ ಬೆದರಿಕೆವೊಡ್ಡಿದ್ದಾನೆ. ಇದರಿಂದ ಆತಂಕಗೊಂಡ ಮಹಿಳೆ ಜೋರಾಗಿ ಕಿರುಚಿಕೊಂಡು ಆತನನ್ನು ತಳ್ಳಿ‌ ಓಡಿ ಬಂದಿದ್ದಾಳೆ. ಪತಿಗೆ ವಿಷಯ ತಿಳಿಸುವಷ್ಟರಲ್ಲಿ ಆರೋಪಿ ಎಸ್ಕೇಪ್ ಆಗಿದ್ದಾನೆ. ಭಯದಿಂದ ಸಂತ್ರಸ್ತೆ ದೂರು ನೀಡಿರಲಿಲ್ಲ ಎಂದು ಸಾಮಾಜಿಕ‌ ಕಾರ್ಯಕರ್ತ ಮಥಾಯಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೊಡಗು: ಚಾಕುವಿನಿಂದ ಇರಿದು ಮಹಿಳೆಯ ಹತ್ಯೆ, ಪೊಲೀಸರಿಗೆ ಶರಣಾದ ಆರೋಪಿ

Last Updated : Sep 16, 2022, 3:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.