ETV Bharat / state

ರಿಯಲ್ ಎಸ್ಟೇಟ್​ ಉದ್ಯಮಿ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ! - ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್​ ಉದ್ಯಮಿ ಮೇಲೆ ಹಲ್ಲೆ

ಕಚೇರಿಯಲ್ಲಿ ಒಬ್ಬರೇ ಇರುವಾಗ ದುಷ್ಕರ್ಮಿಗಳು ಕೊಲೆಗೆ ಯತ್ನಿಸಿದ್ದಾರೆ. ಒಬ್ಬ ಗನ್ ಹಿಡಿದು ಫೈಯರಿಂಗ್ ಮಾಡಿದ್ದು, ಮತ್ತೊಬ್ಬ ಲಾಂಗ್​ನಿಂದ ಹಲ್ಲೆ ಮಾಡಿದ್ದಾನೆ. ದುಷ್ಕರ್ಮಿಗಳ ಕೈನಿಂದ ತಪ್ಪಿಸಿಕೊಂಡ ಬಾಬು ಹೊರಗೆ ಓಡಿ ಬಂದಿದ್ದಾರೆ.

attempted murder of a real estate businessman
ಪ್ರಾಣಾಪಾಯದಿಂದ ಪಾರಾದ ರಿಯಲ್ ಎಸ್ಟೇಟ್​ ಉದ್ಯಮಿ ಬಾಬು
author img

By

Published : Aug 23, 2020, 11:27 AM IST

Updated : Aug 23, 2020, 12:33 PM IST

ಬೆಂಗಳೂರು: ಹಳೇ ವೈಷಮ್ಯದಿಂದ ರಿಯಲ್ ಎಸ್ಟೇಟ್​ ಉದ್ಯಮಿ ಮೇಲೆ ಗುಂಡಿನ ದಾಳಿ ನಡೆಸಿ, ಕೊಲೆಗೆ ಯತ್ನಿಸಿದ ಘಟನೆ ನಗರದ ಹೊರ ವಲಯದ ದರ್ಗಾ ಮಹಲಾ ಬಳಿ ನಡೆದಿದೆ.

ಬಾಬು ಎಂಬವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಶನಿವಾರ ರಾತ್ರಿ ಸುಮಾರು 9:15 ವೇಳೆಗೆ ಎಲ್ಲರೂ ಗಣೇಶ ನಿಮಜ್ಜನಕ್ಕೆ ತೆರಳಿದ್ದರೆ, ಬಾಬು ಕಚೇರಿಯಲ್ಲಿ ಒಬ್ಬರೇ ಇದ್ದರು. ಈ ವೇಳೆ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಒಬ್ಬ ಗನ್ ಹಿಡಿದು ಫೈಯರಿಂಗ್ ಮಾಡಿದ್ದು, ಮತ್ತೊಬ್ಬ ಲಾಂಗ್​ನಿಂದ ಹಲ್ಲೆ ಮಾಡಿದ್ದಾನೆ. ದುಷ್ಕರ್ಮಿಗಳ ಕೈನಿಂದ ತಪ್ಪಿಸಿಕೊಂಡ ಬಾಬು ಹೊರಗೆ ಓಡಿ ಬಂದಿದ್ದಾರೆ. ಅವರ ಕಿರುಚಾಟ ಕೇಳಿ ಅಕ್ಕಪಕ್ಕದ ಜನ ಸೇರಿದ್ದು, ಈ ವೇಳೆ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಪ್ರಾಣಾಪಾಯದಿಂದ ಪಾರಾದ ರಿಯಲ್ ಎಸ್ಟೇಟ್​ ಉದ್ಯಮಿ ಬಾಬು

ಘಟನೆಯಲ್ಲಿ ಬಾಬು ಕೈ, ತಲೆ ಮತ್ತು ಭುಜಕ್ಕೆ ಗಂಭೀರ ಗಾಯಗಳಾಗಿದ್ದು, ಕೆ ಆರ್ ಪುರ ಭಟ್ಟರಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ, ಬಾಬು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಕೆ.ಆರ್. ಪುರಂ ಪೊಲೀಸರು ಹಾಗೂ ವೈಟ್ ಫೀಲ್ಡ್ ಡಿಸಿಪಿ ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರೆದಿದೆ. ಬಾಬು ಕೆ.ಆರ್. ಪುರಂ ಶಾಸಕ ಹಾಗೂ ಸಚಿವ ಭೈರತಿ ಬಸವರಾಜ್ ಅವರ ಆಪ್ತ ಎನ್ನಲಾಗ್ತಿದೆ.

Last Updated : Aug 23, 2020, 12:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.