ನೆಲಮಂಗಲ (ಬೆಂಗಳೂರು): ನಗರದ ಶಿವನಗರ ಮತ್ತು ಪ್ರಸನ್ನ ಆಂಜನೇಯ ಬಡಾವಣೆಯ ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಮೂರನೇ ಸಲ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಕಳೆದೊಂದು ವಾರದಿಂದ ಚಿರತೆ ಪ್ರತ್ಯಕ್ಷವಾಗುತ್ತಲೇ ಇದೆ, ಬಡಾವಣೆಯ ನಾಯಿಗಳು ನಾಪತ್ತೆಯಾಗಿರುವುದು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯರು ಆರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಆದರೆ ಆರಣ್ಯ ಇಲಾಖೆ ಸ್ಥಳದಲ್ಲಿ ಬೋನ್ ಇಟ್ಟು ಚಿರತೆ ಸೆರೆ ಹಿಡಿಯುವ ಪ್ರಯತ್ನ ಮಾಡಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಆಗಾಗ ಚಿರತೆ ಪ್ರತ್ಯಕ್ಷವಾಗುತ್ತಿರುವ ಭಯದಲ್ಲಿ ಜನರು ರಾತ್ರಿಯಿಡಿ ಚಿರತೆ ಹುಡುಕುವುದರಲ್ಲೇ ಜನ ತಲೆಕೆಡಿಸಿಕೊಂಡಿದ್ದಾರೆ. ಬಡಾವಣೆ ನಿವಾಸಿಗಳು ನಿದ್ದೆಗೆಟ್ಟು ರಾತ್ರಿಯಿಡಿ ಚಿರತೆಗಾಗಿ ಕಾದಿದ್ದಾರೆ. ಯಾವ ಮನೆಯ ಕಾಂಪೌಂಡ್‌ಗೆ ಚಿರತೆ ನುಗ್ಗಿದೆಯೋ ಎನ್ನುವ ಆತಂಕದಿಂದ ದೊಣ್ಣೆ ಹಿಡಿದು ಚಿರತೆ ಹುಡುಕಿದ್ದಾರೆ.
ಇದನ್ನೂ ಓದಿ: ತಾಯಿಗೊಂದಿಗೆ ಬಹಿರ್ದೆಸೆಗೆ ತೆರಳಿದ್ದ ಬಾಲಕಿಯನ್ನು ಬಲಿ ಪಡೆದ ಚಿರತೆ