ETV Bharat / state

ಸಮುದಾಯಗಳ ಪ್ರಗತಿಗೆ ಶೈಕ್ಷಣಿಕ ಅಭಿವೃದ್ಧಿ ಅನಿವಾರ್ಯ: ಸಚಿವ ಅಶ್ವತ್ಥ ನಾರಾಯಣ

ಯಾವುದೇ ಸಮುದಾಯ ಕೇವಲ ತನ್ನ ಜನಸಂಖ್ಯೆಯಿಂದ ಬಲಾಢ್ಯವಾಗಲು ಸಾಧ್ಯವಿಲ್ಲ. ಶೈಕ್ಷಣಿಕ ಪ್ರಗತಿಯನ್ನು ಸಾಧಿಸಿದರೆ ಮಾತ್ರ 21ನೇ ಶತಮಾನದಲ್ಲಿ ಪ್ರಭಾವಿಯಾಗಬಹುದಷ್ಟೇ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಹೇಳಿದರು.

arya vaishya mahasabha pratibhotsava
ಸಚಿವ ಅಶ್ವತ್ಥ ನಾರಾಯಣ
author img

By

Published : Nov 20, 2022, 6:01 PM IST

Updated : Nov 20, 2022, 8:38 PM IST

ಬೆಂಗಳೂರು: ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ ಏರ್ಪಡಿಸಿದ್ದ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಡಾ. ಸಿ. ಎನ್​. ಅಶ್ವತ್ಥ ನಾರಾಯಣ ಜಾಗತೀಕರಣದ ಯುಗದಲ್ಲಿ ಶೈಕ್ಷಣಿಕ ಉನ್ನತಿ ಸಾಧಿಸುವವರು ಮಾತ್ರ ಉಜ್ವಲ ಅವಕಾಶಗಳನ್ನು ಪಡೆಯುತ್ತಾರೆ. ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟ ಮತ್ತು ಉತ್ಕೃಷ್ಟತೆಗಳು ಮಾತ್ರ ನಿಜವಾದ ಶಕ್ತಿಗಳಾಗಿವೆ ಎಂದು ಹೇಳಿದರು.

ಸಮಾಜದ ಎಲ್ಲಾ ಸಮುದಾಯಗಳ ಸಮಾನ ಅಭಿವೃದ್ಧಿ ಸಾಧ್ಯವಾಗಬೇಕು ಎನ್ನುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ. ಇದರ ಅನುಷ್ಠಾನದಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭಾಗಿಯಾಗಿ ಪ್ರತಿಭಾನ್ವಿತರಿಗೆ ಸನ್ಮಾನ ಮಾಡಿದರು.

ಸುಪ್ರೀಂ ಕೋರ್ಟ್ ಆರ್ಥಿಕವಾಗಿ ಹಿಂದುಳಿದಿರುವವರ ಮೀಸಲಾತಿ ಎತ್ತಿ ಹಿಡಿದಿದೆ: ಮೋದಿಯವರು ಆರ್ಥಿಕವಾಗಿ ಹಿಂದುಳಿದಿರುವವರಿಗೆ ಶೇ. ಹತ್ತರಷ್ಟು ಮೀಸಲಾತಿಯನ್ನು ಕೊಡುವ ನೀತಿಯನ್ನು ಘೋಷಿಸಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಇದನ್ನು ಎತ್ತಿ ಹಿಡಿದಿದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: ಬಿಜೆಪಿ ನವಶಕ್ತಿ ಸಮಾವೇಶ ವಿರುದ್ಧ ಕಾಂಗ್ರೆಸ್ ಐಕ್ಯತಾ ಸಮಾವೇಶಕ್ಕೆ ಸಿದ್ಧತೆ

Last Updated : Nov 20, 2022, 8:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.