ETV Bharat / state

ಜಡ್ಜ್​ ಮನೆಯನ್ನೂ ಬಿಡದ ಖದೀಮರು ; 60ಕ್ಕೂ ಅಧಿಕ ಕಳ್ಳತನ ಪ್ರಕರಣದ ಇಬ್ಬರು ಆರೋಪಿಗಳು ಅರೆಸ್ಟ್​ - etv bharat kannada

ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ - ಜಡ್ಜ್​ ಮನೆಯನ್ನೂ ಬಿಡದೇ ಕೈಚಳಕ - ಅರವತ್ತಕ್ಕೂ ಅಧಿಕ ಕಳ್ಳತನದಲ್ಲಿ ಭಾಗಿಯಾಗಿದ್ದ ಖದೀಮರು ಅಂದರ್​

arrest of two notorious thieves in bengaluru
ಬೆಂಗಳೂರು:ಅರವತ್ತಕ್ಕೂ ಅಧಿಕ ಕಳ್ಳತನದಲ್ಲಿ ಭಾಗಿಯಾಗಿದ್ದ ಇಬ್ಬರು ಕುಖ್ಯಾತ ಕಳ್ಳರ ಸೆರೆ
author img

By

Published : Jan 25, 2023, 9:17 PM IST

ಬೆಂಗಳೂರು: ಅರವತ್ತಕ್ಕೂ ಅಧಿಕ ಕಳ್ಳತನದಲ್ಲಿ ಭಾಗಿಯಾಗಿದ್ದ ಇಬ್ಬರು ಕುಖ್ಯಾತ ಮನೆಗಳ್ಳರನ್ನ ಹೆಣ್ಣೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಫಯಾಜ್ ಅಹ್ಮದ್ ಹಾಗೂ ಪ್ರಸಾದ್ ಬಂಧಿತ ಆರೋಪಿಗಳು. ಬೆಂಗಳೂರಿನ ಹೆಣ್ಣೂರು, ರಾಮಮೂರ್ತಿ ನಗರದ ವಿವಿಧೆಡೆ ಮನೆಗಳ್ಳತನ, ಶಿವಮೊಗ್ಗದಲ್ಲಿ ಎಟಿಎಂ ದೋಚಲು ವಿಫಲ ಯತ್ನ ಮಾಡಿದ್ದ ಆರೋಪಿಗಳು, ಕೋಲಾರದ ಗಲ್ ಪೇಟ್ ಠಾಣಾ ವ್ಯಾಪ್ತಿಯಲ್ಲಿ ನ್ಯಾಯಾಧೀಶರೊಬ್ಬರ ನಿವಾಸದಲ್ಲಿ ಬೀಗ ಒಡೆದು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಇವರು ಕಳ್ಳತನ ಮಾಡಿದ ಬಳಿಕ ಕಾರಿನಲ್ಲಿ ಹೊರಡುತ್ತಿದ್ದ ಅರೋಪಿಗಳು ಎಲ್ಲಿಯೂ ಒಂದು ಕಡೆ ನಿಲ್ಲದೇ ಒಂದೊಂದು ಊರು ಅಲೆದಾಡಿ ಹೋದ ಊರುಗಳಲ್ಲಿ ಕದ್ದ ಚಿನ್ನವನ್ನು ಅಡವಿಟ್ಟು ಬಂದ ಹಣದಲ್ಲಿ‌ ಮಜಾ ಮಾಡುತ್ತಿದ್ದರು. ಪ್ರಕರಣವೊಂದರಲ್ಲಿ ಪೀಣ್ಯ ಪೊಲೀಸರಿಂದ ಬಂಧಿತನಾಗಿದ್ದ ಫಯಾಜ್ ಅಹ್ಮದ್ ಒಂದು ವಾರದ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಸದ್ಯ ಇಬ್ಬರೂ ಅರೋಪಿಗಳನ್ನು ಬಂಧಿಸಿರುವ ಹೆಣ್ಣೂರು ಠಾಣಾ ಪೊಲೀಸರು ಬಂಧಿತರಿಂದ ಒಟ್ಟು 6 ಪ್ರಕರಣಗಳಿಗೆ ಸಂಬಂಧಿಸಿದ 695 ಗ್ರಾಂ ಚಿನ್ನಾಭರಣ, ಒಂದು ಕಾರನ್ನು ವಶಕ್ಕೆ ಪಡೆದಿದ್ದಾರೆ.

ಫುಡ್ ಡೆಲಿವರಿ ಸೋಗಿನಲ್ಲಿ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಆರೋಪಿಗಳು : ಫುಡ್ ಡೆಲಿವರಿ ನೆಪದಲ್ಲಿ ಮನೆಗಳನ್ನ ಗುರುತಿಸಿಕೊಂಡು ರಾತ್ರಿ ವೇಳೆ ಮನೆಗಳ್ಳತನ ಮಾಡುತ್ತಿದ್ದ ನೇಪಾಳ ಮೂಲದ ಮೂವರು ಕಳ್ಳರನ್ನ ರಾಮಮೂರ್ತಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಿರಣ್ ಕಡಕಾ, ಶಂಕರ್ ಥಾಪಾ, ಹಾಗೂ ಕರಣ್ ಧಮೆನಾ ಬಂಧಿತ ಆರೋಪಿಗಳು.

ಬಂಧಿತರ ಪೈಕಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಶಂಕರ್, ಕೆಲಸದ ಸಂದರ್ಭದಲ್ಲಿ ಮನೆಗಳನ್ನ ಗುರುತು ಮಾಡಿಕೊಂಡು ಉಳಿದ ಇಬ್ಬರು ಆರೋಪಿಗಳಿಗೆ ತಿಳಿಸುತ್ತಿದ್ದ. ರಾತ್ರಿ ವೇಳೆ ಕ್ಯಾಬ್ ಬುಕ್ ಮಾಡಿಕೊಂಡು ಆ ಮನೆಗಳ ಬಳಿ ಬರುತ್ತಿದ್ದ ಆರೋಪಿಗಳು ಬೀಗ ಮುರಿದು ಮನೆಯೊಳಗೆ ನುಗ್ಗಿ ಕಳ್ಳತನ ಮಾಡುತ್ತಿದ್ದರು. ಕೃತ್ಯದ ಬಳಿಕ ಕದ್ದ ವಸ್ತುಗಳನ್ನು ನೇಪಾಳಕ್ಕೆ ರವಾನಿಸುತ್ತಿದ್ದರು.

ಅದೇ ರೀತಿ ಮನೆಗಳ್ಳತನ ಮಾಡಿದ್ದ ಆರೋಪಿಗಳನ್ನ ಬಂಧಿಸಿರುವ ರಾಮಮೂರ್ತಿ ನಗರ ಠಾಣಾ ಪೊಲೀಸರು ಬಂಧಿತರಿಂದ 4 ಲಕ್ಷ 20 ಸಾವಿರ ಮೌಲ್ಯದ 64 ಗ್ರಾಂ ಚಿನ್ನಾಭರಣ 1.5 ಕೆ.ಜಿ‌ ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.

ಖೋಟಾನೋಟು ಮುದ್ರಿಸಿ ಚಲಾವಣೆಗೆ ಯತ್ನಿಸಿದ ಗ್ಯಾಂಗ್​ ಬಂಧನ: ಖೋಟಾನೋಟು ಮುದ್ರಿಸಿ ರಾಜಧಾನಿಯಲ್ಲಿ ಚಲಾವಣೆಗೆ ಯತ್ನಿಸುತ್ತಿದ್ದ ನಾಲ್ವರು ಅಂತಾರಾಜ್ಯ‌ ಆರೋಪಿಗಳನ್ನ ಸುಬ್ರಮಣ್ಯಪುರ ಪೊಲೀಸರು ಬಂಧಿಸಿ 11 ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಂಧ್ರಪ್ರದೇಶದ ಕಡಪ ಜಿಲ್ಲೆಯ ಚರಣ್ ಸಿಂಗ್, ಪುಲ್ಲಲರೇವು ರಾಜ, ರಜನಿ ಹಾಗೂ ಗೋಪಿನಾಥ್ ಬಂಧಿತ ಆರೋಪಿಗಳು. ಬಂಧಿತರಿಂದ 500 ಮುಖಬೆಲೆಯ 11 ಲಕ್ಷ ರೂಪಾಯಿ ನಕಲಿ ಹಣ, ಖೋಟಾನೋಟು ಪ್ರಿಂಟ್ ಮಾಡುವ ಉಪಕರಣಗಳನ್ನ‌ ವಶಕ್ಕೆ‌ ಪಡೆದುಕೊಳ್ಳಲಾಗಿದೆ.‌

ಇದನ್ನೂ ಓದಿ:ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.