ETV Bharat / state

ವಿಷ್ಣುರೂಪದ ಅದೃಷ್ಟಕಲ್ಲು ಎಂದು ಹೇಳಿ 2 ಕೋಟಿ‌ಗೆ ಮಾರಾಟ ಮಾಡಲು ಯತ್ನ: ಇಬ್ಬರು ವಂಚಕರ ಬಂಧನ - ಸಾಲಿಗ್ರಾಮದ ಕಲ್ಲು

ವಿಷ್ಣು ರೂಪದ‌‌ ಕಲ್ಲು ಎಂದು ನಂಬಿಸಿ ಮಾರಾಟಕ್ಕೆ ಯತ್ನಿಸಿದ ಮಹಾರಾಷ್ಟ್ರ ಮೂಲದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Arrest of two fraudsters in bengaluru
ವಿಷ್ಣುರೂಪದ ಅದೃಷ್ಟಕಲ್ಲು ಎಂದು ಹೇಳಿ 2 ಕೋಟಿ‌ಗೆ ಮಾರಾಟ ಮಾಡಲು ಯತ್ನ: ಇಬ್ಬರು ವಂಚಕರ ಬಂಧನ
author img

By

Published : Mar 17, 2023, 3:48 PM IST

Updated : Mar 17, 2023, 5:35 PM IST

ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ

ಬೆಂಗಳೂರು: ದೇವರ ಮೇಲಿರುವ ನಂಬಿಕೆಯನ್ನು‌ ದುರುಪಯೋಗ ಪಡಿಸಿಕೊಂಡು ಜನರನ್ನು ವಂಚಿಸುತ್ತಿರುವ ಪ್ರಕರಣಗಳು ರಾಜಧಾನಿಯಲ್ಲಿ ದಿನೇ ದಿನೆ ಹೆಚ್ಚಾಗುತ್ತಿದೆ. ಇಂತಹದ್ದೇ ಮತ್ತೊಂದು ಪ್ರಕರಣ ನಡೆದಿದ್ದು, ದೈವದ ಕಲ್ಲು, ಅದೃಷ್ಟದ ‌ಕಲ್ಲು ಎಂದು ಜನರನ್ನು ನಂಬಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡಲು ಬಂದಿದ್ದ ಇಬ್ಬರು ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವಿಷ್ಣು ರೂಪದ‌‌ ಕಲ್ಲು ಎಂದು ಹೇಳಿ ರಾಜಧಾನಿಯಲ್ಲಿ‌ ಮಾರಾಟಕ್ಕೆ ಮುಂದಾಗಿದ್ದ ಮಹಾರಾಷ್ಟ್ರ ಮೂಲದ ಮನೋಜ್ ಹಾಗೂ ಆದಿತ್ಯ ಸಾಗರ್ ಎಂಬುವರನ್ನು ಬಂಧಿಸಲಾಗಿದೆ. ಬಂಧಿತರಿಂದ ಸಾಲಿಗ್ರಾಮದ ಎರಡು ಕಲ್ಲುಗಳು ಹಾಗೂ ಕೆಲ ರಾಸಾಯನಿಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ‌‌. ಆರೋಪಿಗಳ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚಕರಿಬ್ಬರು ರಾಜಾಜಿನಗರದ ರಾಜ್ ಕುಮಾರ್ ರಸ್ತೆಯಲ್ಲಿರುವ ಖಾಸಗಿ ಹೊಟೇಲ್​ಗೆ ಗಿರಾಕಿಗಳನ್ನು ಬರಮಾಡಿಕೊಂಡು ಮಾರಾಟಕ್ಕೆ‌‌ ಮುಂದಾಗಿದ್ದರು. ಗುಜರಾತಿನ ಗೋಮತಿ ನದಿಯಿಂದ ತಂದಿರುವ ಬೆಲೆಬಾಳುವ ಸಾಲಿಗ್ರಾಮದ ಎರಡು ಕಲ್ಲುಗಳನ್ನು ತಂದು ಇದು ವಿಷ್ಣುರೂಪದ ಅದೃಷ್ಟಕಲ್ಲು ಎಂದು ನಂಬಿಸಿ ಎರಡು ಕೋಟಿ ರೂಪಾಯಿಗೆ ಮಾರಾಟ ಮಾಡಲು ಯತ್ನಿಸಿದ್ದರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಎಸಿಪಿ‌ ಶಿವಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ.

ವಂಚಕರನ್ನು ಖೆಡ್ಡಾಕ್ಕೆ ಬೀಳಿಸಿದ ಸಿಸಿಬಿ: ಸಾಲಿಗ್ರಾಮದ ಕಲ್ಲುಗಳನ್ನು ವಿಷ್ಣುರೂಪದ ಪವರ್ ಪುಲ್ ಕಲ್ಲು ಎಂದು ಸಾರ್ವಜನಿಕರನ್ನು ನಂಬಿಸಲು ಕಲ್ಲಿಗೆ ಬಟ್ಟೆ ಹಾಕಿ ಪ್ರತ್ಯೇಕವಾಗಿ ಕರ್ಪೂರ ಹಾಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ವಿದರೂ ಬಟ್ಟೆ ಸುಡುವುದಿಲ್ಲ ಎಂದು ನಂಬಿಸುತ್ತಿದ್ದರು‌. ಅಲ್ಲದೇ ಬಟ್ಟೆ ಸುಡದ ಹಾಗೆ ಕೆಮಿಕಲ್ ಬೆರೆಸಿ‌ ದೈವಶಕ್ತಿಯ ಕಲ್ಲೆಂದು ಬಿಂಬಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ತಂಡ ಗ್ರಾಹಕರ‌ ಸೋಗಿನಲ್ಲಿ ಎರಡು ಕೋಟಿ ನೀಡುವುದಾಗಿ ನಂಬಿಸಿ ಅವರನ್ನ ಖೆಡ್ಡಾಕ್ಕೆ ಬೀಳಿಸಿರುವುದಾಗಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ:ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ಪತಿ ನಾಪತ್ತೆ! ಪೊಲೀಸರಿಗೆ ದೂರು ನೀಡಿದ ಪತ್ನಿ

ಎಸ್​ಪಿ ಸೋಗಿನಲ್ಲಿ ₹1.75 ಕೋಟಿ ವಂಚನೆ: ಇತ್ತೀಚಿಗೆ ಬೆಂಗಳೂರಿನಲ್ಲಿ ನಕಲಿ ಪೊಲೀಸ್ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು. ಎಸ್​ಪಿ ಸೋಗಿನಲ್ಲಿ ವ್ಯಕ್ತಿಯೊಬ್ಬರಿಂದ 1.75 ಕೋಟಿ ರೂಪಾಯಿ ವಂಚಿಸಲಾಗಿತ್ತು, ವಂಚನೆಗೊಳಗಾದ ವೆಂಕಟನಾರಾಯಣ ಎಂಬುವರು ನೀಡಿದ ದೂರಿನ ಮೇರೆಗೆ ನಕಲಿ ಎಸ್​​ಪಿ ಶ್ರೀನಿವಾಸ್ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲವು ದಿನಗಳ ಹಿಂದೆ ಆರೋಪಿ ಶ್ರೀನಿವಾಸ್ ಮೈಸೂರಿನಲ್ಲಿರುವ ಲ್ಯಾಂಡ್ ಲಿಟಿಗೇಷನ್ ಹ್ಯಾಂಡಲ್ ಮಾಡುತ್ತಿದೇನೆ. ಸಕ್ಸಸ್ ಆದರೆ 450‌ ಕೋಟಿಯಲ್ಲಿ 250 ಕೋಟಿ ರೂ ಬರುತ್ತದೆ. ಎಲ್ಲಾ ಮುಗಿದರೆ ಕೇಸ್ ರೆವಿನ್ಯೂ ಡಿಪಾರ್ಟ್ಮೆಂಟ್ ಬಳಿ ಇದೆ. ಹೀಗಾಗಿ 2.5‌ ಕೋಟಿ ಹಣ ಬೇಕು, ಹೊಂದಿಸಿಕೊಡಿ ಎಂದು ವೆಂಕಟ ನಾರಾಯಣ ಬಳಿ ಕೇಳಿದ್ದನಂತೆ. ಇದನ್ನು ನಂಬಿದ ವೆಂಕಟ ನಾರಾಯಣ ತನ್ನ ಬಳಿ‌ ಹಾಗೂ ತನ್ನ ಸ್ನೇಹಿತರ ಬಳಿ ಹಣ ಪಡೆದು ಹಂತ ಹಂತವಾಗಿ ಹಣ ನೀಡಿದ್ದರು.

Last Updated : Mar 17, 2023, 5:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.