ETV Bharat / state

ಸ್ನೇಹಿತನ ಪ್ರೇಯಸಿ ಮುಂದೆ ಬಿಲ್ಡಪ್: ಬಾರ್​ನಲ್ಲಿ ಪುಂಡಾಟಿಕೆ, ಮೂವರ ಬಂಧನ - ಆಡುಗೋಡಿ ಪೊಲೀಸ್​ ಠಾಣೆ ಪೊಲೀಸರು

ಬಾರ್​ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಮೂವರನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

Three Arrested Accused
ಬಾರ್​ನಲ್ಲಿ ಪುಂಡಾಟ ಮೆರೆದ ಮೂವರು ಆರೋಪಿಗಳ ಬಂಧನ
author img

By

Published : Mar 10, 2023, 1:02 PM IST

Updated : Mar 10, 2023, 1:23 PM IST

ಬಾರ್​ನಲ್ಲಿ ಪುಂಡಾಟಿಕೆ, ಮೂವರ ಬಂಧನ

ಬೆಂಗಳೂರು: ಸ್ನೇಹಿತನ ಪ್ರೇಯಸಿಯ ಬರ್ತ್ ಡೇ ಪಾರ್ಟಿ ಮಾಡಿ ನಂತರ ಮತ್ತೆ ಮದ್ಯ ಖರೀದಿಸಲು ಬಂದು ಕ್ಷುಲ್ಲಕ ವಿಚಾರಕ್ಕೆ ಬಾರ್​ನಲ್ಲಿ ಮಾರಕಾಸ್ತ್ರ ಬೀಸಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ರೌಡಿಸಹಿತ ಇಬ್ಬರು ಆರೋಪಿಗಳನ್ನು ಆಡುಗೋಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಂತೋಷ್, ರಾಮಾಂಜಿ ಹಾಗೂ ವಸೀಂ ಪಾಷಾ ಬಂಧಿತರು. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಉತ್ತರ ಪ್ರದೇಶ ಮೂಲದ ಅಫ್ತಾಬ್​ನ ಪ್ರೇಯಸಿ ಮೀಶೋ ಎಂಬಾಕೆಯ ಬರ್ತ್ ಡೇ ಇದ್ದುದರಿಂದ ಫೆಬ್ರವರಿ 25ರಂದು ಪಾರ್ಟಿ ಮಾಡಿದ್ದ ಆರೋಪಿಗಳು ಬಳಿಕ ಮದ್ಯ ಖರೀದಿಸಲು ಆಡುಗೋಡಿಯ 80 ಫೀಟ್ ರಸ್ತೆಯಲ್ಲಿರುವ ನೀಲಾ ಬಾರ್​ಗೆ ಬಂದಿದ್ದರು. ಮದ್ಯ ಖರೀದಿಯಲ್ಲಿದ್ದಾಗ ಕ್ಯಾಶ್ ಕೌಂಟರ್ ಬಳಿ ಅಡ್ಡ ನಿಂತಿದ್ದ ಮೀಶೋಳಿಗೆ ಬಾರ್ ಸಿಬ್ಬಂದಿಯಾಗಿರುವ ಪ್ರಸನ್ನ, ಪಕ್ಕಕ್ಕೆ ಸರಿಯುವಂತೆ ಹೇಳಿದ್ದನು. ಅಷ್ಟಕ್ಕೆ ರೊಚ್ಚಿಗೆದ್ದ ಆರೋಪಿಗಳು‌ ಬಾರ್​ ಸಿಬ್ಬಂದಿ ಜೊತೆ ಗಲಾಟೆ ಆರಂಭಿಸಿ ಬಾರ್​ನಲ್ಲಿದ್ದ ಗಾಜುಗಳ ಮೇಲೆ ಮಾರಕಾಸ್ತ್ರ ಬೀಸಿ, ಸಿಬ್ಬಂದಿ ಪ್ರಸನ್ನ, ಯತೀಶ್ ಹಾಗೂ ಮಂಜುನಾಥ ಎಂಬುವವರ ಮೇಲೆ ಹಲ್ಲೆ ಮಾಡಿ ಬಳಿಕ ಆ ಸ್ಥಳದಿಂದ ತೆರಳಿದ್ದಾರೆ. ಆರೋಪಿಗಳ ಪುಂಡಾಟದ ದೃಶ್ಯ ಬಾರ್​ನಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬಾರ್ ಸಿಬ್ಬಂದಿ ಯತೀಶ್ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಆಡುಗೋಡಿ ಪೊಲೀಸರು ಸದ್ಯ ಆರೋಪಿಗಳಾದ ಸಂತೋಷ್, ರಾಮಾಂಜಿ ಹಾಗೂ ವಸೀಂನನ್ನ ಬಂಧಿಸಿದ್ದಾರೆ‌. ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ ಎಂದು‌ ಪೊಲೀಸರು ತಿಳಿಸಿದ್ದಾರೆ.

ಚಿಕ್ಕೋಡಿಯಲ್ಲಿ ಚಾಕು ಇರಿತ

ಚಿಕ್ಕೋಡಿಯಲ್ಲಿ ಚಾಕು ಇರಿತ: ಸ್ನೇಹಿತರ ಗುಂಪೊಂದು ಮಧ್ಯಪಾನ ಸೇವಿಸಿದ ಅಮಲಿನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದು, ಆ ಗುಂಪಿನಲ್ಲಿದ್ದ ಇಬ್ಬರಿಗೆ ಚಾಕು ಇರಿದಿರುವ ಘಟನೆ ನಿನ್ನೆ ತಡರಾತ್ರಿ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ. ನಂದು ಚವ್ಹಾಣ್, ಮೋಹನ್ ಹರಿಹರ ಎಂಬ ಇಬ್ಬರಿಗೆ ಸ್ನೇಹಿತನಾದ ಬಾಳಾ ಸಾಹೇಬ್ ಎಂಬಾತ ಚಾಕು ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ಮೂರು ಜನರು ಕೂಡ ಚಿಕ್ಕೋಡಿ ಪಟ್ಟಣದ ಇಂದ್ರಾ ನಗರದ ನಿವಾಸಿಗಳು ಎಂದು ತಿಳಿದು ಬಂದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಪದ್ಮಾ ಬಾರ್ ಮುಂದೆ ಹಣದ ವಿಚಾರವಾಗಿ ಮೂವರ ನಡುವೆ ಜಗಳ ಪ್ರಾರಂಭವಾಗಿದ್ದು, ಜಗಳ ಅತಿರೇಕವಾಗಿ ಇಬ್ಬರು ಸ್ನೇಹಿತರು ಬಾಳಾ ಸಾಹೇಬ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ತನ್ನ ಮೇಲೆ ದಾಳಿ ಮಾಡಿದ್ದಕ್ಕೆ ಆಕ್ರೋಶಗೊಂಡು ಆರೋಪಿ ಬಾಳಾ ಸಾಹೇಬ ತನ್ನಲ್ಲಿದ್ದ ಚಾಕುವಿನಿಂದ ಇಬ್ಬರು ಗೆಳೆಯರ ಮೇಲೆ ದಾಳಿ ಮಾಡಿದ್ದಾನೆ. ಚಾಕು ಇರಿತಕ್ಕೊಳಗಾದ ಇಬ್ಬರನ್ನೂ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಿ, ದಾಖಲಿಸಲಾಗಿದೆ. ಈ ಗಲಾಟೆಯಲ್ಲಿ ಆರೋಪಿ ಬಾಳಾ ಸಾಹೇಬ್​ಗೂ ಗಾಯಗಳಾಗಿದ್ದು, ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ: ಬಣ್ಣ ಎರಚಬೇಡಿ ಎಂದಿದ್ದಕ್ಕೆ ವೃದ್ಧೆಯನ್ನು ಹೊಡೆದು ಕೊಂದೇ ಬಿಟ್ಟರು: ಪಾನಮತ್ತ ಯುವಕರ ದುಷ್ಕೃತ್ಯ

Last Updated : Mar 10, 2023, 1:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.