ಬೆಂಗಳೂರು: ಶಂಕಿತ ಉಗ್ರನ ಬಂಧನ ಪ್ರಕರಣ ಕುರಿತ ಸಮ್ರ ಮಾಹಿತಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿದ ಬೊಮ್ಮಾಯಿ, ರಾಜ್ಯದಲ್ಲಿ ಭಯೋತ್ಪಾದಕ ಸಂಘಟನೆಗಳ ಜೊತೆ ನಂಟು ಹೊಂದಿರುವವರ ಶೋಧ ಕಾರ್ಯಕ್ಕೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಆಗಮಿಸಿದ್ದಾರೆ. ನಗರದ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನೇತ್ರ ತಜ್ಞನಾಗಿ ಕೆಲಸ ಮಾಡುತ್ತಿದ್ದ, ಅಬ್ದುಲ್ ರೆಹಮಾನ್ ಎನ್ನುವ ಶಂಕಿತ ಉಗ್ರನನ್ನು ವಶಕ್ಕೆ ಪಡೆದ ಸಂಬಂಧ ವಿವರ ನೀಡಿದರು.
ಮಹಾನಗರದಲ್ಲಿಯೇ ಶಂಕಿತ ಉಗ್ರ ವೈದ್ಯನಾಗಿ ಕೆಲಸ ಮಾಡುತ್ತಿದ್ದು, ಸಿರಿಯಾಗೆ ಭೇಟಿ ನೀಡಿ ಹಿಂದಿರುಗಿರುವ ಮಾಹಿತಿ ಇದೆ. ಈ ಸಂಬಂಧ ನಗರದಲ್ಲಿ ಕಟ್ಟೆಚ್ಚರ ವಹಿಸುವ ಕುರಿತು ಸಿಎಂ ಜೊತೆ ಮಾತುಕತೆ ನಡೆಸಿದರು. ಗುಪ್ತದಳದಿಂದ ಆಗಾಗ ಮಾಹಿತಿ ಪಡೆದು ನಗರದಾದ್ಯಂತ ಹೆಚ್ಚಿನ ಕಟ್ಟೆಚ್ಚರ ವಹಿಸುವ ಕುರಿತು ಗೃಹ ಸಚಿವರು ಚರ್ಚೆ ನಡೆಸಿದರು ಎನ್ನಲಾಗಿದೆ.