ETV Bharat / state

ವಿಧಾನಸೌಧದಲ್ಲೇ ಛಾಪಾ ಕಾಗದ ಡೀಲ್: ಐವರು ಆರೋಪಿಗಳನ್ನು ಬಂಧಿಸಿದ ಎಸ್ಐಟಿ - ವಿಧಾನಸೌಧದಲ್ಲೇ ಚಾಪಾಕಾಗದ ಡೀಲ್

ಛಾಪಾ ಕಾಗದ ತಂದು ವಿಧಾನಸೌಧದ ಆವರಣದಲ್ಲೇ ಮಾರಟ ಮಾಡಿ ಹಣ ಗಳಿಸುತ್ತಿದ್ದ ಆರೋಪಿ, ಡೀಲ್ ಮಾಡುವವರ ಬಳಿ ವಿಧಾನಸೌದದಲ್ಲೇ ತನ್ನ ಕೆಲಸ ಎಂದು ಹೇಳಿಕೊಂಡಿದ್ದ. ಏನು ಕೆಲಸ ಎಂದು ಯಾರಿಗೂ ಬಾಬು ಹೇಳುತ್ತಾ ಇರಲಿಲ್ಲವಂತೆ .

ವಿಧಾನಸೌಧದಲ್ಲೇ ಚಾಪಾಕಾಗದ ಡೀಲ್
ವಿಧಾನಸೌಧದಲ್ಲೇ ಚಾಪಾಕಾಗದ ಡೀಲ್
author img

By

Published : Nov 23, 2021, 1:00 AM IST

ಬೆಂಗಳೂರು: ನಕಲಿ ಛಾಪಾ ಕಾಗದ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ವಿಧಾನಸೌಧ ಠಾಣೆಯ ಪೊಲೀಸರ ಸಹಾಯದಿಂದ ಬಂಧಿಸಲಾಗಿದೆ.

ವಿಧಾನಸೌದದಲ್ಲಿ ಕೆಲಸ ಮಾಡುತ್ತಾ ನಕಲಿ ಛಾಪಾ ಕಾಗದ ಡೀಲ್ ಮಾಡುತ್ತಿದ್ದ ಬಾಬು ಎನ್ನುವವನನ್ನು ಸೇರಿ ಐದು ಮಂದಿಯನ್ನು ಎಸ್ಐಟಿ ಬಂಧಿಸಿದೆ.ಬಾಬು ಛಾಪಾ ಕಾಗದದ ಡೀಲ್​ಗೆ ವಿಧಾನಸೌಧವನ್ನೇ ಅಡ್ಡೆ ಮಾಡಿಕೊಂಡಿದ್ದ. ಹೆಂಡತಿ ವಿಧಾನ ಪರಿಷತ್​​​ನಲ್ಲಿ ಕ್ಲೀನಿಂಗ್ ಕೆಲಸ ನಿರ್ವಹಣೆ ಮಾಡುತ್ತಿದ್ದಳು. ಈಗಾಗಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಸೀಮಾಳಿಂದ ಛಾಪಾ ಕಾಗದ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಛಾಪಾ ಕಾಗದ ತಂದು ವಿಧಾನಸೌಧದ ಆವರಣದಲ್ಲೇ ಮಾರಟ ಮಾಡಿ ಹಣ ಗಳಿಸುತ್ತಿದ್ದ ಆರೋಪಿ, ಡೀಲ್ ಮಾಡುವವರ ಬಳಿ ವಿಧಾನಸೌದದಲ್ಲೇ ತನ್ನ ಕೆಲಸ ಎಂದು ಹೇಳಿಕೊಂಡಿದ್ದ. ಏನು ಕೆಲಸ ಎಂದು ಯಾರಿಗೂ ಬಾಬು ಹೇಳುತ್ತಾ ಇರಲಿಲ್ಲ ಎಂದಿದ್ದಾರೆ.

63 ಲಕ್ಷ ರೂ ಮೌಲ್ಯದ ಛಾಪಾ ಕಾಗದ ವಶಕ್ಕೆ:

ಸದ್ಯ ಬಂಧಿತ ಆರೋಪಿಗಳಿಂದ 63 ಲಕ್ಷ ರೂ ಮೌಲ್ಯದ ಛಾಪಾ ಕಾಗದ ಎಸ್‌ಐಟಿ ವಶಕ್ಕೆ ಪಡೆದಿದೆ. ಆರೋಪಿ ಬಾಬು ಸೇರಿ ಐವರು ಆರೋಪಿಗಳನ್ನ ಹೆಚ್ವಿನ ವಿಚಾರಣೆ ನಡೆಸುತ್ತಿದೆ. ನಕಲಿ ಛಾಪಾ ಕಾಗದ ಪ್ರಕರಣ ತನಿಖೆಗೆಂದೇ ರಚನೆ ಆಗಿರುವ ಎಸ್ಐಟಿಯ ನೇತೃತ್ವವನ್ನು ಪೂರ್ವ ವಿಭಾಗದ ಡಿಸಿಪಿ ವಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.