ಬೆಂಗಳೂರು : ಬೆಳ್ಳಂ ಬೆಳ್ಳಗೆ ವಾಕಿಂಗ್ ಮಾಡುತ್ತಿದ್ದ ಮಹಿಳೆಯನ್ನು ಮುಂದೆ ಪ್ಯಾಂಟ್ ಬಿಚ್ಚಿ ವಿಕೃತವಾಗಿ ವರ್ತಿಸಿದ್ದ ಕಾಮುಕನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.
ದತ್ತು ಅಲಿಯಾಸ್ ಚೋಟು ಬಂಧಿತ ಆರೋಪಿ. ಡಿ.ಜೆ.ಹಳ್ಳಿಯ ಮೋದಿ ಗಾರ್ಡನ್ ಬಳಿ ಇದೇ ತಿಂಗಳು 26 ರ ಮುಂಜಾನೆ 5 ಗಂಟೆಗೆ ಘಟನೆ ನಡೆದಿದೆ. ಆರೋಪಿ ಅಸಭ್ಯವಾಗಿ ವರ್ತಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪಾರ್ಕ್ನಲ್ಲಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯನ್ನು ಅಡ್ಡಗಟ್ಡಿದ ಕಾಮುಕ, ಪ್ಯಾಂಟ್ ಬಿಚ್ಚಿ ವಿಕೃತಿ ಮೆರೆದಿದ್ದಾನೆ. ಈ ವೇಳೆ ಮಹಿಳೆ ಚಪ್ಪಲಿಯಿಂದ ಆತನಿಗೆ ಹೊಡೆದಿದ್ದಾಳೆ. ಒದೆ ತಿಂದರೂ ಬಿಡದ ಆರೋಪಿ, ತನ್ನ ವರ್ತನೆಯನ್ನು ಮುಂದುವರೆಸಿ ಮಹಿಳೆಯ ಬಟ್ಟೆ ಎಳೆದಾಡಿ ಸ್ಥಳದಿಂದ ಪರಾರಿಯಾಗಿದ್ದ. ಈ ಬಗ್ಗೆ ಮಹಿಳೆ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಜೆ.ಪಿ ನಗರ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.