ETV Bharat / state

ಕೊಲೆ ಮಾಡಿದ್ದು ಬೆಂಗಳೂರಿನಲ್ಲಿ ಸೆರೆಯಾಗಿದ್ದು ಗುಜರಾತ್ ನಲ್ಲಿ - murder accused arrested in Gujarat

ಹತ್ಯೆ ಬಳಿಕ ನಗ - ನಾನ್ಯ ದೋಚಿ ಬಿಜೋರಾಮ್ ಮನೆಯಿಂದ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅನುಮಾನಗೊಂಡ‌ ಪೊಲೀಸರು ಆತನ ಪತ್ತೆಗಾಗಿ ಮೂರು ವಿಶೇಷ ತಂಡ ರಚಿಸಿ ತನಿಖೆ ಚುರುಕುಗೊಳಿಸಿದ್ದರು. ಹತ್ಯೆ ಬಳಿಕ ಆರೋಪಿಯು ಬೆಂಗಳೂರಿನಿಂದ ನೇರವಾಗಿ ಹುಬ್ಬಳಿ ತೆರಳಿದ್ದಾನೆ. ಅಲ್ಲಿಂದ‌‌ ಮಹಾರಾಷ್ಟ್ರ ಮೂಲಕ ಗುಜರಾತ್ ಗೆ ಬಸ್ ಮೂಲಕ ತಲುಪಿದ್ದಾನೆ‌.

ಕೊಲೆ ಮಾಡಿದ್ದು ಬೆಂಗಳೂರಿನಲ್ಲಿ ಸೆರೆಯಾಗಿದ್ದು ಗುಜರಾತ್ ನಲ್ಲಿ

author img

By

Published : May 30, 2022, 9:18 PM IST

ಬೆಂಗಳೂರು: ಚಾಮರಾಜಪೇಟೆಯಲ್ಲಿ ಕಳೆದ ವಾರ ನಡೆದಿದ್ದ ವೃದ್ಧನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಲಕ್ಷಾಂತರ ರೂಪಾಯಿ ನಗನಾಣ್ಯ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ನಗರ‌ ಪೊಲೀಸರು ನೀಡಿದ ಮಾಹಿತಿ‌ ಮೇರೆಗೆ ಗುಜರಾತ್ ಪೊಲೀಸರು ಬಂಧಿಸಿದ್ದಾರೆ.‌

ರಾಜಸ್ಥಾನ ಮೂಲದ ಬಿಜೋರಾಮ್ ಗುಜರಾತ್ ಹಾಗೂ ರಾಜಸ್ಥಾನ ಗಡಿ‌ ಪ್ರದೇಶ ಆರ್ಮಿಘರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟ್ರಕ್​ನಿಂದ ತಪ್ಪಿಸಿಕೊಂಡು ಹೋಗುವಾಗ ಅಲ್ಲಿನ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಹತ್ಯೆಯಾದ ವೃದ್ಧ
ಹತ್ಯೆಯಾದ ವೃದ್ಧ

ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಾಡಿ ವಾರಂಟ್​ ಮೇರೆಗೆ ನಗರಕ್ಕೆ ನಾಳೆ ಸಂಜೆಯೊಳಗೆ ನಗರ ಪೊಲೀಸರು ಕರೆತರುತ್ತಿದ್ದಾರೆ. ಆರೋಪಿ ಚಾಮರಾಜಪೇಟೆಯಲ್ಲಿ ವಾಸ ಮಾಡಿಕೊಂಡಿದ್ದ 74 ವರ್ಷದ ಜುಗ್ಗರಾಜ್ ಜೈನ್ ಮನೆಯಲ್ಲಿ ಕಳೆದ ಆರು ತಿಂಗಳಿಂದ ಕೆಲಸ‌ ಮಾಡಿಕೊಂಡಿದ್ದ ಹಾಗೆ ಕಡಿಮೆ ಅವಧಿಯಲ್ಲಿ ಮಾಲೀಕನ ವಿಶ್ವಾಸಗಳಿಸಿಕೊಂಡಿದ್ದ.

ಎಲೆಕ್ಟ್ರಿಕಲ್ ಬಿಸಿನೆಸ್ ಮಾಡಿಕೊಂಡಿದ್ದ ಜುಗ್ಗರಾಜ್ ಮೇ 24 ರ ರಾತ್ರಿ ಮನೆಯಲ್ಲೇ ಹಗ್ಗದಿಂದ ಕೈ - ಕಾಲು‌ ಕಟ್ಟಿ ಪ್ಲಾಸ್ಟರ್​​ನಿಂದ ಬಾಯಿ ಮುಚ್ಚಿಸಿ ಕೊಲೆ ಮಾಡಿದ್ದ. ಬಳಿಕ ಮನೆಯಲ್ಲಿದ್ದ ಲಕ್ಷಾಂತರ‌ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೂರು ವಿಶೇಷ ತನಿಖಾ ತಂಡ ರಚಿಸಿ ಹಂತಕನ ಪತ್ತೆಗೆ ಶೋಧ ಕಾರ್ಯ ತೀವ್ರಗೊಳಿಸಿತ್ತು.

ಹತ್ಯೆ ಬಳಿಕ ನಗ - ನಾನ್ಯ ದೋಚಿ ಬಿಜೋರಾಮ್ ಮನೆಯಿಂದ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅನುಮಾನಗೊಂಡ‌ ಪೊಲೀಸರು ಆತನ ಪತ್ತೆಗಾಗಿ ಮೂರು ವಿಶೇಷ ತಂಡ ರಚಿಸಿ ತನಿಖೆ ಚುರುಕುಗೊಳಿಸಿದ್ದರು. ಹತ್ಯೆ ಬಳಿಕ ಆರೋಪಿಯು ಬೆಂಗಳೂರಿನಿಂದ ನೇರವಾಗಿ ಹುಬ್ಬಳಿ ತೆರಳಿದ್ದಾನೆ. ಅಲ್ಲಿಂದ‌‌ ಮಹಾರಾಷ್ಟ್ರ ಮೂಲಕ ಗುಜರಾತ್​​​ಗೆ ಬಸ್ ಮೂಲಕ ತಲುಪಿದ್ದಾನೆ‌.

ಆರೋಪಿ
ಆರೋಪಿ

ದಿಕ್ಕು ತಪ್ಪಿಸಲು ಹುಟ್ಟೂರಿಗೆ ಟ್ರಕ್​​ನಲ್ಲಿ ತೆರಳುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ ನಗರ ಪೊಲೀಸರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಲರ್ಟ್ ಆಗಿ ವಾಹನ ತಪಾಸಣೆ ನಡೆಸುವಾಗ ಆರ್ಮಿಘಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುಜರಾತ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಬಂಧಿತನಿಂದ 24 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಗುಜರಾತ್ ಪೊಲೀಸರಿಗೆ 50 ಸಾವಿರ ನಗದು ಬಹುಮಾನ‌ ಘೋಷಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ನೆಮ್ಮದಿ, ಶಾಂತಿಯುತ ನಿವೃತ್ತಿ ಜೀವನಕ್ಕಾಗಿ ಅನುಕೂಲಕರ ಈ ಪಾಲಿಸಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.