ETV Bharat / state

ಕೇರಳ‌ದ ಮಾಜಿ ಮಂತ್ರಿಯ ಪುತ್ರನ ಬಂಧಿಸಲು ಇಡಿ ಅಧಿಕಾರಿಗಳಿಗೆ ಮನವಿ - ಬೆಂಗಳೂರು ಸುದ್ದಿ

ಸದ್ಯ ಡ್ರಗ್ಸ್​​ ಪೆಡ್ಲಿಂಗ್ ಸಂಬಂಧ ಅನೂಪ್ ಬಂಧನವಾಗಿದ್ದು, ಅನೂಪ್ ಜೊತೆ ಸೇರಿ ಅವ್ಯಹಾರ ಮಾಡಿರುವ ಕಾರಣ ಈಗ ಬಿನೀಶ್ ಬಂಧನ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

appeals to ED officials to arrest Bineesh Kodiyeri
ಬಿನೀಶ್ ಕೊಡಿಯೇರಿಯನ್ನ ಬಂಧಿಸಲು ಇಡಿ ಅಧಿಕಾರಿಗಳಿಗೆ ಮನವಿ
author img

By

Published : Oct 6, 2020, 2:20 PM IST

ಬೆಂಗಳೂರು: ಡ್ರಗ್ಸ್​​ ಪೆಡ್ಲರ್​​ಗೆ ಸಹಾಯ ಮಾಡಿ ಅಕ್ರಮ ಹಣ ಸಂಪಾದನೆ ಮಾಡಿದ ಆರೋಪ ಹೊತ್ತಿರುವ ಕೇರಳ‌ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೇಶ್ ಕೊಡಿಯೇರಿಯನ್ನ ಬಂಧಿಸುವಂತೆ ಅಖಿಲ ಭಾರತ ಹಿಂದೂ ಮಹಾಸಭಾ ಇಡಿ ಅಧಿಕಾರಿಗಳಿಗೆ ಪತ್ರ ಬರೆದಿದೆ.

appeals to ED officials to arrest Bineesh Kodiyeri
ಅಖಿಲ ಭಾರತ ಹಿಂದೂ ಮಹಾಸಭಾದಿಂದ ಇಡಿ ಅಧಿಕಾರಿಗಳಿಗೆ ಬರೆದ ಪತ್ರ

ಅಕ್ರಮವಾಗಿ ಮಾದಕ ವಸ್ತುಗಳ ದಂಧೆಯ ರೂವಾರಿ ಎನ್ನುವ ಆರೋಪವಿದೆ. ಡ್ರಗ್ಸ್​​ ಪ್ರಕರಣದಲ್ಲಿ ಅಧಿಕ ಹಣವನ್ನು ಕೂಡ ಗಳಿಸಿದ್ದಾರೆ ಎನ್ನಲಾಗುತ್ತದೆ. ಹಾಗೆಯೇ ಕಮ್ಮನಹಳ್ಳಿ ಸಮೀಪ ಟೇಸ್ಟಿ ಟೀ ಅನ್ನೋ ರೆಸ್ಟೋರೆಂಟ್ ತೆರೆಯಲು ಅನೂಪ್​​ಗೆ 50 ಲಕ್ಷ ಹಣವನ್ನು ಬಿನೀಶ್ ನೀಡಿದ್ದ ಎನ್ನಲಾಗಿದೆ.

ಸದ್ಯ ಡ್ರಗ್ಸ್​​ ಪೆಡ್ಲಿಂಗ್ ಸಂಬಂಧ ಅನೂಪ್ ಬಂಧನವಾಗಿದ್ದು, ಅನೂಪ್ ಜೊತೆ ಸೇರಿ ಅವ್ಯಹಾರ ಮಾಡಿರುವ ಕಾರಣ ಈಗ ಬಿನೀಶ್ ಬಂಧನ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈತ ಕೇರಳದ ಪ್ರಭಾವಿ ರಾಜಕಾರಣಿ ಮಗ ಆದ ಕಾರಣ ಅಧಿಕಾರಿಗಳ ಮೇಲೆ ಒತ್ತಡ ಬರುವ ಸಾಧ್ಯತೆ‌ ಇದ್ದು,‌ ಅದಕ್ಕೆ ಇಡಿ ಅಧಿಕಾರಿಗಳು ಜಗ್ಗದೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.