ಬೆಂಗಳೂರು: ಭಾರತ್ ಎಲೆಕ್ಟ್ರಾನಿಕ್ಸ್ ನೌಕರರ ಗೃಹ ನಿರ್ಮಾಣ ಮಹತ್ವದ ವಾರ್ಷಿಕ ಸರ್ವ ಸದಸ್ಯರ ಸಭೆ ಯಶವಂತಪುರದ ಖಾಸಗಿ ಹೋಟೆಲ್ನಲ್ಲಿ ದೇಶದ ಎಲ್ಲ ವಿಭಾಗಗಳ ಸದಸ್ಯರ ಜೊತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆಯಿತು.
ಅಧ್ಯಕ್ಷರಾದ ಅರವಿಂದ್ ಎಂ ಎ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುಮಾರು 13,300 ಸದಸ್ಯರಿರುವ ಸಂಘವು 59 ವರ್ಷ ಸೇವಾವಧಿ ಪೂರೈಸಿದೆ. ಇಲ್ಲಿಯವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿಯೇ 540 ಎಕರೆ ಭೂ ಪರಿವರ್ತಿತ ಜಮೀನು ಖರೀದಿಸಿ, ಬಡಾವಣೆ ಹಾಗೂ ಕಟ್ಟಡಗಳ ನಿರ್ಮಾಣ ಮಾಡಿದ್ದೇವೆ. ಸುಮಾರು 7,400 ಸದಸ್ಯರಿಗೆ ಈಗಾಗಲೇ ನಿವೇಶನಗಳನ್ನು ಹಂಚಿಕೆ ಮಾಡಿದ್ದೇವೆ ಎಂದರು.
ಕೋವಿಡ್ 19 ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದ ಸಭೆಯಲ್ಲಿ ಕಾರ್ಮಿಕ, ಅಧಿಕಾರಿಗಳ ಹಾಗೂ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ವಾರ್ಷಿಕ ಮಹಾಸಭೆಯಲ್ಲಿ ಉಪಸ್ಥಿತರಿದ್ದರು.