ETV Bharat / state

ಬಿಬಿಎಂಪಿ ಆಯುಕ್ತ ಅನಿಲ್​ ಕುಮಾರ್​ ವರ್ಗಾವಣೆಗೆ ಕಾರಣ ಏನು? - Anil Kumar has been transferred

ಸರ್ಕಾರವು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್​ರನ್ನು ದಿಢೀರ್ ಎತ್ತಂಗಡಿ ಮಾಡಿ, ಆ ಸ್ಥಾನಕ್ಕೆ ಮಂಜುನಾಥ್ ಪ್ರಸಾದ್ ರನ್ನು ಕೂರಿಸಿದೆ. ಅಷ್ಟಕ್ಕೂ ಈ ವರ್ಗಾವಣೆಯ ಹಿಂದಿರುವ ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

author img

By

Published : Jul 19, 2020, 12:13 AM IST

ಬೆಂಗಳೂರು: ಬಿಬಿಎಂಪಿ ಆಯುಕ್ತರಾಗಿದ್ದ ಅನಿಲ್ ಕುಮಾರ್ ಅವರನ್ನು ಏಕಾಏಕಿ ಎತ್ತಂಗಡಿ ಮಾಡಿ, ಆ ಸ್ಥಾನಕ್ಕೆ ಮಂಜುನಾಥ್ ಪ್ರಸಾದ್​ರನ್ನು ವರ್ಗಾವಣೆ ಮಾಡಲಾಗಿದೆ. ಬೆಂಗಳೂರಲ್ಲಿ ಕೋವಿಡ್-19 ಪ್ರಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ವರ್ಗಾವಣೆ ಮಾಡಲು ಕಾರಣ ಏನು ಎಂಬ ಬಗ್ಗೆ ಸಾಕಷ್ಟು ಅನುಮಾನ, ಪ್ರಶ್ನೆಗಳು ಮೂಡಿದೆ.

ಅನಿಲ್ ಕುಮಾರ್ ವರ್ಗಾವಣೆಗೆ ಕಾರಣ ಏನು?

ಬೆಂಗಳೂರಲ್ಲಿ ಗಣನೀಯ ಏರಿಕೆ ಕಂಡಿರುವ ಕೊರೊನಾ ಪ್ರಕರಣವನ್ನು ನಿಭಾಯಿಸುವಲ್ಲಿನ ವೈಫಲ್ಯವೇ ಅನಿಲ್ ಕುಮಾರ್ ಎತ್ತಂಗಡಿಗೆ ಪ್ರಮುಖ ಕಾರಣ. ಹೈಕೋರ್ಟ್ ಇತ್ತೀಚೆಗೆ ಕಂಟೈನ್ಮೆಂಟ್ ವಲಯದಲ್ಲಿನ ನಿರ್ವಹಣೆ ಸಂಬಂಧ ಬಿಬಿಎಂಪಿಗೆ ಚಾಟಿ ಬೀಸಿತ್ತು. ಈ ಕಾರಣಕ್ಕೆ ಸರ್ಕಾರ ಅನಿಲ್ ಕುಮಾರ್​‌ರನ್ನು ಎತ್ತಂಗಡಿ ಮಾಲಾಗಿದೆದೆ ಎಂದು ಹೇಳಲಾಗುತ್ತಿದೆ. ಆದರೆ ಇದರ ಹಿಂದೆ ರಾಜಕೀಯವೂ ಕೆಲಸ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇತ್ತ ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿರುವ ಕೋವಿಡ್ ಕೇರ್ ಕೇಂದ್ರಕ್ಕಾಗಿ ಬಿಬಿಎಂಪಿ ಹಾಸಿಗೆ ಬಾಡಿಗೆ ಪಡೆದಿರುವುದು ಸಾಕಷ್ಟು ವಿವಾದ ಎಬ್ಬಿಸಿತ್ತು. ಇದೇ ಸಂಬಂಧ ವಿರೋಧ ಪಕ್ಷ ಕೋವಿಡ್ ಕೇರ್ ಕೇಂದ್ರದಲ್ಲಿ ಹಗರಣ ನಡೆದಿದೆ ಆರೋಪ ಮಾಡಿತ್ತು. ಇದು ಸರ್ಕಾರಕ್ಕೆ ಸಾಕಷ್ಟು ಮುಜುಗರ ತಂದಿತ್ತು. ಈ ಸಂಬಂಧ ಸಿಎಂ ಖುದ್ದು ಬಿಬಿಎಂಪಿ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿದ್ದರು. ಬೆಂಗಳೂರು ಲಾಕ್‌ಡೌನ್ ವಿಸ್ತರಿಸುವುದು ಒಳಿತು ಎಂಬ ಬಗ್ಗೆನೂ ಅನಿಲ್ ಕುಮಾರ್ ಮೊನ್ನೆ ಬಹಿರಂಗ ಹೇಳಿಕೆ ನೀಡಿದ್ದರು.

ಜೊತೆಗೆ ಅನಿಲ್ ಕುಮಾರ್ ಕಾರ್ಯ ವೈಖರಿ ಬಗ್ಗೆಯೂ ನಗರದ ಶಾಸಕರು ಸಿಎಂಗೆ ದೂರು ನೀಡಿದ್ದರು. ಇತ್ತ ಕೋವಿಡ್-19 ನಿಯಂತ್ರಣಕ್ಕಾಗಿ ವಲಯವಾರು ಉಸ್ತುವಾರಿ ಸಚಿವರುಗಳು ಅಸಮಾಧಾನ ವ್ಯಕ್ತಪಡಿಸಿದ್ದರು.‌ ಅವ​ರನ್ನು ವರ್ಗಾವಣೆ ಮಾಡುವಂತೆಯೂ ಆಗ್ರಹಿಸಿದ್ದರು ಎನ್ನಲಾಗಿದೆ. ಜನಪ್ರತಿನಿಧಿಗಳ ಜೊತೆ ಅನಿಲ್ ಕುಮಾರ್ ಸಮನ್ವಯತೆ ಸಾಧಿಸುವಲ್ಲಿ ವಿಫಲರಾಗಿದ್ದರು ಎಂಬ ಮಾತುಗಳೂ ಕೇಳಿಬಂದಿವೆ.

ಮಂಜುನಾಥ್ ಪ್ರಸಾದ್
ಮಂಜುನಾಥ್ ಪ್ರಸಾದ್

ಮಂಜುನಾಥ್ ಪ್ರಸಾದ್ ಏಕೆ?

ಕಂದಾಯ ಸಚಿವ ಆರ್.ಅಶೋಕ್ ಅವರು ಮಂಜುನಾಥ್ ಪ್ರಸಾದ್ ಪರ ಬಲವಾದ ಬ್ಯಾಟಿಂಗ್ ಮಾಡಿದ್ದರು ಎನ್ನಲಾಗಿದೆ. ಬಿಬಿಎಂಪಿಯಲ್ಲಿ ಹೆಚ್ಚು ಕಾಲ ಅಧಿಕಾರ ವಹಿಸಿಕೊಂಡಿದ್ದ ಮಂಜುನಾಥ್ ಪ್ರಸಾದ್ ಅವರನ್ನು ಪಾಲಿಕೆ ಆಯುಕ್ತರನ್ನಾಗಿ ಮಾಡುವಂತೆ ಆರ್.ಅಶೋಕ್ ಒತ್ತಡ ಹೇರಿದ್ದರು. ಆದರೆ ಸ್ವತಃ ಮಂಜುನಾಥ್ ಪ್ರಸಾದ್​ಗೆ ಬಿಬಿಎಂಪಿ ಆಯುಕ್ತರಾಗಿ ಹೋಗಲು ಮನಸ್ಸು ಇರಲಿಲ್ಲ ಎನ್ನಲಾಗಿದೆ. ಅವರೆ ಬಿಬಿಎಂಪಿ ಆಯುಕ್ತರಾಗಿ ಹೊಣೆ ಹೊರಲು ಹಿಂದೇಟು ಹಾಕಿದ್ದರು. ಹೀಗಾಗಿ ಸಚಿವ ಆರ್.ಅಶೋಕ್ ಬಳಿಕ ಹಿರಿಯ ಐಎಎಸ್ ಅಧಿಕಾರಿ ಕುಮಾರ್ ನಾಯಕ್ ಹೆಸರನ್ನು ಶಿಫಾರಸು ಮಾಡಿದ್ದರು ಎಂದು ಹೇಳಲಾಗುತ್ತಿದೆ.

ಬಿಬಿಎಂಪಿ ಹೊಣೆ ಹೊರಲು ಸಿಎಂ ಸೂಚನೆ :

ಸಿಎಂ ಸ್ವತಃ ಮಂಜುನಾಥ್ ಪ್ರಸಾದ್ ಅವರಿಗೆ ಬಿಬಿಎಂಪಿ ಆಯುಕ್ತರಾಗಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಬೆಂಗಳೂರಿನಲ್ಲಿನ ಕೊರೊನಾ ಅಟ್ಟಹಾಸವನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದಕ್ಕಾಗಿ ಜವಾಬ್ದಾರಿ ವಹಿಸಿಕೊಳ್ಳುವಂತೆ ತಿಳಿಸಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಬರುವವರೆಗೆ ಬಿಬಿಎಂಪಿ ಆಯುಕ್ತರಾಗಿ ಕಾರ್ಯನಿರ್ವಹಿಸುವಂತೆ ಸಿಎಂ ಖುದ್ದು ಮಂಜುನಾಥ್ ಪ್ರಸಾದ್​ಗೆ ಸೂಚಿಸಿದ್ದಾರಂತೆ.

ಸಿಎಂ ಒತ್ತಾಯದ ಹಿನ್ನೆಲೆ ಮಂಜುನಾಥ್ ಪ್ರಸಾದ್ ಬಿಬಿಎಂಪಿ ಆಯುಕ್ತರ ಹೊಣೆ ಹೊರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.