ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಬಂದಿಳಿಯುವುದು ವಿಳಂಭವಾದ ಕಾರಣ ಕಾರ್ಯಕ್ರಮ ಮೊಟಕುಗೊಳಿಸಲಾಗಿದೆ. ಸಂಜೆ 4 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ 6:30 ಆದರೂ ಆರಂಭವಾಗಿರಲಿಲ್ಲ.
ಅಮಿತ್ ಶಾ ತಡವಾಗಿ ಆಗಮಿಸಿದ ಕಾರಣ ವೇದಿಕೆ ಮೇಲೆ ಆಗಮಿಸಿ ಕಾರ್ಯಕರ್ತರ ಕಡೆ ಕೈ ಬೀಸಿ ಅಲ್ಲಿಂದ ತೆರಳಿದ್ದಾರೆ. ಒಂದೇ ನಿಮಿಷದಲ್ಲಿ ಕಾರ್ಯಕ್ರಮ ಅಂತ್ಯಗೊಂಡಿದ್ದು, ಅಮಿತ್ ಶಾ ಭಾಷಣಕ್ಕಾಗಿ ಕಾದಿದ್ದ ಕಾರ್ಯಕರ್ತರಿಗೆ ನಿರಾಸೆಯಾಗಿದೆ.
ಇದನ್ನೂ ಓದಿ: ಅಮಿತ್ ಶಾ ಸ್ವಾಗತ ಕಾರ್ಯಕ್ರಮ:ಗಂಟೆಗಟ್ಟಲೆ ಕಾದು ಮನೆಯತ್ತ ನಡೆದ ಕಾರ್ಯಕರ್ತರು