ETV Bharat / state

ಮನೆಗಳಲ್ಲೇ ಅಂಬೇಡ್ಕರ್​​ ಜಯಂತಿ ಆಚರಿಸಿ, ಅವರ ಜೀವನ ಚರಿತ್ರೆ ಓದಿ: ಕಟೀಲ್​​​​​ ಕರೆ - ನಳಿನ್ ಕುಮಾರ್ ಕಟೀಲ್​

ನಾಳೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ​ 129ನೇ ಜಯಂತಿ ಹಿನ್ನೆಲೆ ಯಾರೂ ಸಾರ್ವಜನಿಕವಾಗಿ ಜಯಂತಿ ಆಚರಣೆಯಲ್ಲಿ ಭಾಗಿಯಾಗದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮನವಿ ಮಾಡಿದ್ದಾರೆ.

Ambedkar jayanti should be celebrated in your house- Nalin kumar kateel
ಮನೆಗಳಲ್ಲೇ ಅಂಬೇಡ್ಕರ್ ಜಯಂತಿ ಆಚರಿಸಿ: ಜೀವನ ಚರಿತ್ರೆ ಓದಿ- ನಳಿನ್​ ಕುಮಾರ್ ಕಟೀಲ್​ ಕರೆ
author img

By

Published : Apr 13, 2020, 10:59 PM IST

ಬೆಂಗಳೂರು: ರಾಜ್ಯದ ನಾಯಕರು, ಶಾಸಕರು, ಸಂಸದರು ಹಾಗೂ ಎಲ್ಲಾ ಕಾರ್ಯಕರ್ತರು ತಮ್ಮ ತಮ್ಮ ಮನೆಗಳಲ್ಲಿಯೇ ನಾಳೆ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮತ್ತು ಪುಷ್ಪಾಂಜಲಿ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆ ನೀಡಿದ್ದಾರೆ.

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಏಪ್ರಿಲ್ 14ರಂದು ಆಚರಿಸಲಾಗುತ್ತದೆ. ಆದರೆ ಕೊರೊನಾ ವೈರಸ್ ಕಾರಣದಿಂದ ಸಾರ್ವಜನಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತರು ಸರಳವಾಗಿ ತಮ್ಮ ತಮ್ಮ ಮನೆಗಳಲ್ಲೇ ಅಂಬೇಡ್ಕರ್ ಜಯಂತಿ ಆಚರಿಸುವಂತೆ ಸಲಹೆ ನೀಡಿದ್ದಾರೆ.

ಕೇವಲ ಪುಷ್ಪಾರ್ಪಣೆ ಮಾಡಿದರೆ ಸಾಲುವುದಿಲ್ಲ, ಅಂಬೇಡ್ಕರ್ ಅವರ ಬಗ್ಗೆ ತಿಳಿಯುವ ಪ್ರಯತ್ನ ನಡೆಸಬೇಕು. ಜೊತೆಗೆ ಸಾಮಾಜಿಕ ಕಳಕಳಿಯನ್ನೂ ಮೆರೆಯಬೇಕು ಎಂದು ಸೂಚನೆ ನೀಡಿರುವ ಕಟೀಲ್, ನಾಳೆ ಕಾರ್ಯಕರ್ತರು ಮಾಡಬೇಕಿರುವ ಜವಾಬ್ದಾರಿಯನ್ನು ತಿಳಿಸಿದ್ದಾರೆ.

ಅಂಬೇಡ್ಕರ್ ಜಯಂತಿ ಆಚರಣೆ ಹೇಗೆ

•ಅನುಕೂಲ ಸ್ಥಳದಲ್ಲಿ ಕನಿಷ್ಠ ಒಂದು ಗಂಟೆ ಕಾಲ ಅಂಬೇಡ್ಕರ್ ಅವರ ಜೀವನ ಚರಿತ್ರೆ, ಅವರ ಬದುಕು ಸಾಧನೆಗಳ ಕುರಿತು ಪುಸ್ತಕವನ್ನು ಅಧ್ಯಯನ ಮಾಡಬೇಕು.

•ನಮ್ಮ ನಮ್ಮ ಮನೆಯಿರುವ ಕ್ಷೇತ್ರದಲ್ಲಿ ಬೀದಿಯಲ್ಲಿ ಸಾಮಾಜಿಕ ಅಂತರದೊಂದಿಗೆ ಸರ್ಕಾರದ ಕಾನೂನು ನಿಯಮಗಳನ್ನು ಭಂಗ ಮಾಡದೆ ಕೊರೊನಾ ಮುಕ್ತ ಕ್ಷೇತ್ರಕ್ಕೆ ಸಂಕಲ್ಪ ಮಾಡಬೇಕು.

•ನಾಳೆ ಸಂಜೆಯೊಳಗಾಗಿ ನಮ್ಮ ಕಾರ್ಯಕರ್ತರ ಸಾಮರ್ಥ್ಯಕ್ಕನುಸಾರವಾಗಿ ಬಡವರು, ಕಾರ್ಮಿಕರ ಮನೆಗಳಿಗೆ ತೆರಳಿ ಆಹಾರ ಪೊಟ್ಟಣ ಮತ್ತು ರೇಷನ್ ಕಿಟ್‌ಗಳನ್ನು ಹಾಗೂ ಮಾಸ್ಕ್​​ಗಳನ್ನು ತಲುಪಿಸಬೇಕು.

•ಸಂಜೆಯೊಳಗೆ ಯೋಜಿಸಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಅಂಬೇಡ್ಕರ್ ಅವರ ಬಗ್ಗೆ ಭಾಷಣ, ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಬಹುದು.

ಹೀಗೆ ಅಂಬೇಡ್ಕರ್ ಅವರ ಜಯಂತಿ ಕುರಿತ ಕಾರ್ಯಕ್ರಮಗಳನ್ನು ನಮ್ಮ ನಮ್ಮ ಬೂತ್‌ಗಳಲ್ಲಿರುವ ಮನೆಗಳಲ್ಲಿ ಆಚರಿಸಲು ಬಿಜೆಪಿ ರಾಜ್ಯಾಧ್ಯಕ್ಷರು ಕರೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.