ಬೆಂಗಳೂರು: ಇಂದು ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರಿಗೆ ವಿಧಾನಸೌಧ, ವಿಕಾಸಸೌಧಲ್ಲಿ ಕೊಠಡಿ ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ.
ಸಚಿವ ಎಸ್. ಟಿ. ಸೋಮಶೇಖರ್ಗೆ ವಿಕಾಸಸೌಧ 38-39 ಕೊಠಡಿ ಹಂಚಲಾಗಿದ್ದರೆ, ಸಚಿವ ರಮೇಶ್ ಜಾರಕಿಹೊಳಿಗೆ ವಿಧಾನಸೌಧದ 342-342ಎ ಕೊಠಡಿಯನ್ನು ಹಂಚಲಾಗಿದೆ. ಇನ್ನು ಸಚಿವ ಆನಂದ ಸಿಂಗ್ಗೆ- ವಿಕಾಸಸೌಧದ 36-37 ನಂ. ಕೊಠಡಿಯನ್ನು ನೀಡಲಾಗಿದೆ. ಡಾ. ಸುಧಾಕರ್ಗೆ 339-339ಎ ಕೊಠಡಿ ನೀಡಲಾಗಿದೆ.
ಸಚಿವ ಭೈರತಿ ಬಸವರಾಜುಗೆ ವಿಧಾನಸೌಧದ 337-337ಎ ನಂ. ಕೊಠಡಿಯನ್ನು ಹಂಚಲಾಗಿದೆ. ಶಿವರಾಂ ಹೆಬ್ಬಾರ್ ಗೆ ವಿಧಾನಸೌಧದ 258-257ಎ ಕೊಠಡಿಯನ್ನು ಕೊಡಲಾಗಿದೆ. ಸಚಿವ ಬಿ.ಸಿ. ಪಾಟೀಲ್ ಗೆ ವಿಕಾಸಸೌಧದ 406-407 ಕೊಠಡಿಯನ್ನು ನೀಡಲಾಗಿದ್ದರೆ, ಸಚಿವ ಕೆ.ಗೋಪಾಲಯ್ಯ ಅವರಿಗೆ ವಿಧಾನಸೌಧದ 252-253ಎ ಕೊಠಡಿಯನ್ನು ಹಂಚಲಾಗಿದೆ.
ಇನ್ನು, ಸಚಿವ ನಾರಾಯಣಗೌಡಗೆ ವಿಕಾಸಸೌಧದ 234-235 ಕೊಠಡಿಯನ್ನು ನೀಡಲಾಗಿದ್ದರೆ, ಸಚಿವ ಶ್ರೀಮಂತ್ ಪಾಟೀಲ್ಗೆ ವಿಧಾನಸೌಧದ 301-301ಎ ಕೊಠಡಿಯನ್ನು ಹಂಚಲಾಗಿದೆ.