ETV Bharat / state

ವಾಯುಪಡೆ ವಿದ್ಯಾರ್ಥಿ ಸಾವಿನ ಕೇಸ್: ಆರು ಪುಟದ ಡೆತ್​ನೋಟ್​ ಪತ್ತೆ.. ಕೊಲೆ ಎಂದು ಆರೋಪಿಸಿದ ಕುಟುಂಬ - ಏರ್ ಕಮಾಂಡರ್

ಬೆಂಗಳೂರಿನ ಏರ್​ಫೋರ್ಸ್ ಟೆಕ್ನಿಕಲ್ ಕಾಲೇಜಿನ ವಿದ್ಯಾರ್ಥಿ ಅಂಕಿತ್ ಕುಮಾರ್ ​ಸಾವಿಗೂ ಮುನ್ನ ಆರು ಪುಟಗಳ ಡೆತ್​ನೋಟ್ ಬರೆದಿಟ್ಟುರುವುದು ಬೆಳಕಿಗೆ ಬಂದಿದೆ.

air-force-technical-college-student-death-case-death-note-found
ವಾಯುಪಡೆ ವಿದ್ಯಾರ್ಥಿ ಸಾವಿನ ಕೇಸ್: ಆರು ಪುಟದ ಡೆತ್​ನೋಟ್​ ಪತ್ತೆ
author img

By

Published : Sep 25, 2022, 7:47 PM IST

Updated : Sep 25, 2022, 10:51 PM IST

ಬೆಂಗಳೂರು: ಇಲ್ಲಿನ ಜಾಲಹಳ್ಳಿಯಲ್ಲಿರುವ ಏರ್​ಫೋರ್ಸ್ ಟೆಕ್ನಿಕಲ್ ಕಾಲೇಜಿನ (AFTC) ಹಾಸ್ಟೆಲ್​ ಕೊಠಡಿಯಲ್ಲಿ ವಾಯುಪಡೆ ವಿದ್ಯಾರ್ಥಿ, ದೆಹಲಿ ಮೂಲದ ಅಂಕಿತ್ ಕುಮಾರ್ (27) ಸಾವಿನ ಕುರಿತಂತೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿದ್ದಾರೆ. ಅಂಕಿತ್​ನದ್ದು ಆತ್ಮಹತ್ಯೆಯಲ್ಲ, ಇದೊಂದು ಕೊಲೆಯೆಂದು ಮೃತ ವಿದ್ಯಾರ್ಥಿಯ ಕುಟುಂಬದವರು ಆರೋಪಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ವಾಯುಸೇನೆ ತರಬೇತಿ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಅಂಕಿತ್​ ಅವರನ್ನು ಯಾವುದೋ ಕಾರಣದ ಮೇಲೆ ಇತ್ತೀಚೆಗೆ ತರಬೇತಿಯಿಂದ ಅಧಿಕಾರಿಗಳು ಅಮಾನತು ಮಾಡಿ, ಶಿಸ್ತು ಕ್ರಮ ತೆಗೆದುಕೊಳ್ಳಲಾಗಿತ್ತು ಎನ್ನಲಾಗ್ತಿದೆ. ಇದರ ನಡುವೆ ಕಳೆದ ಬುಧವಾರ ಹಾಸ್ಟೆಲ್​ ಕೊಠಡಿಯಲ್ಲಿ ಸೀಲಿಂಗ್ ಫ್ಯಾನ್​ಗೆ ಅಂಕಿತ್ ಕುಮಾರ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಆಗ ಖಿನ್ನತೆಯಿಂದ ಅಂಕಿತ್​ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿತ್ತು.

ಇದೀಗ ಅಂಕಿತ್​ ಸಾವಿಗೂ ಮುನ್ನ ಆರು ಪುಟಗಳ ಡೆತ್​ನೋಟ್ ಬರೆದಿಟ್ಟುರುವುದು ಬೆಳಕಿಗೆ ಬಂದಿದೆ. ಅಲ್ಲದೇ, ಈ ಡೆತ್​ನೋಟ್​ನಲ್ಲಿ ಏರ್ ಕಮಾಂಡರ್, ಗ್ರೂಪ್ ಕ್ಯಾಪ್ಟನ್ ಮತ್ತು ವಿಂಗ್ ಕಮಾಂಡರ್ ಸೇರಿದಂತೆ ಆರು ಜನರ ಹೆಸರನ್ನು ಅಂಕಿತ್​ ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತ, ಮೃತನ ಕುಟುಂಬದವರು ಸಹ ಇದು ಆತ್ಮಹತ್ಯೆಯಲ್ಲ, ಕೊಲೆಯೆಂದು ಆರೋಪ ಮಾಡಿದ್ದಾರೆ.

ಸದ್ಯ ಅಂಕಿತ್​ ಸಾವಿಗೆ ಸಂಬಂಧಿಸಿದಂತೆ ಗಂಗಮ್ಮಗುಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 302ರಡಿ ಪ್ರಕರಣ ದಾಖಲಾಗಿದೆ. ಮೃತ ವಿದ್ಯಾರ್ಥಿಯ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿನ ರಹಸ್ಯ ಬಯಲಾಗಲಿದೆ.

ಇದನ್ನೂ ಓದಿ: ವಾಯುಸೇನೆ ತರಬೇತಿಗೆ ಬಂದಿದ್ದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ

Last Updated : Sep 25, 2022, 10:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.