ಬೆಂಗಳೂರು: ದಿನದಿಂದ ದಿನಕ್ಕೆ ಒಮಿಕ್ರಾನ್ ಸೋಂಕಿತರ ಸಂಖ್ಯೆ ಏರಿಕೆ ಕಾಣ್ತಿದ್ದು ಇಂದು ಏಳು ಮಂದಿಗೆ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆ ಆಗಿದೆ. 76 ವರ್ಷ ವಯಸ್ಸಿನ ವೃದ್ಧರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ವೃದ್ಧ ದೆಹಲಿಯಿಂದ ಬಂದಿರುವ ಟ್ರಾವೆಲ್ ಹಿಸ್ಟರಿ ಇದೆ. ಈ ವೃದ್ಧನ ಪ್ರಾಥಮಿಕ ಸಂಪರ್ಕದ 3 ಜನರಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ದ್ವಿತೀಯ ಸಂಪರ್ಕಿತರು ಇಬ್ಬರು ಇದ್ದು, ಆ ಇಬ್ಬರಿಗೂ ಒಮಿಕ್ರಾನ್ ದೃಢಪಟ್ಟಿದೆ.
30 ವರ್ಷ ವಯಸ್ಸಿನ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಇವರು ಯುಎಸ್ಎ ಟ್ರಾವೆಲ್ ಹಿಸ್ಟರಿ ಹೊಂದಿದ್ದಾರೆ. ಪ್ರಾಥಮಿಕಹಾಗೂ ದ್ವಿತೀಯ ಸಂಪರ್ಕದಲ್ಲಿ 26 ಜನ ಇದ್ದು ಒಬ್ಬರಿಗೆ ಪಾಸಿಟಿವ್ ಬಂದಿದ್ದು, ಉಳಿದವರಿಗೆ ನೆಗಟಿವ್ ರಿಪೋಟ್ ಬಂದಿದೆ. ಇನ್ನು ಜಿಂಬಾಬ್ವೆಯಿಂದ ಬಂದಿದ್ದ 63 ವರ್ಷ ವಯಸ್ಸಿನ ವೃದ್ಧನಿಗೆ ಸೋಂಕು ತಗುಲಿದ್ದು, 6 ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರಾಗಿದ್ದಾರೆ.
ಓದಿ: BREAKING NEWS..ಜ.3ರಿಂದ ಮಕ್ಕಳಿಗೂ ಲಸಿಕೆ: ಮೋದಿ ಘೋಷಣೆ
ಯುಕೆ ಪ್ರಯಾಣಿಕರ ಸಂಪರ್ಕ ಹೊಂದಿದ್ದ 54 ವರ್ಷ ವಯಸ್ಸಿನ ವ್ಯಕ್ತಿಗೆ ಸೋಂಕು ದೃಢ ಪಟ್ಟಿದೆ. ಪ್ರಾಥಮಿಕವಾಗಿ 6 ದ್ವಿತೀಯ ಸಂಪರ್ಕ 7 ಜನರು ಹೊಂದಿದ್ದು, ಎಲ್ಲರ ಟೆಸ್ಟ್ ರಿಪೋರ್ಟ್ ನೆಗಟಿವ್ ಬಂದಿದೆ. ಯುಕೆಯಿಂದ ಬಂದಿದ್ದ 21 ವರ್ಷ ವಯಸ್ಸಿನ ಯುವಕನಲ್ಲಿ ಸೋಂಕು ತಗುಲಿದ್ದು, ಈತನ ಪ್ರಾಥಮಿಕ ಸಂರ್ಪಕಲ್ಲಿದ್ದ ಇಬ್ಬರಿಗೆ ಸೋಂಕು ತಗುಲಿದೆ. 13 ದ್ವಿತೀಯ ಸಂಪರ್ಕಿತರ ವರದಿ ನೆಗಟಿವ್ ಬಂದಿದೆ.
ದೆಹಲಿಯಿಂದ ಬಂದಿದ್ದ 62 ವರ್ಷ ವಯಸ್ಸಿನ ವೃದ್ಧನಿಗೆ ಸೋಂಕು ದೃಢಪಟ್ಟಿದೆ. ಇವರ ಸಂಪರ್ಕದಲ್ಲಿದ್ದ 6 ಮಂದಿಯಲ್ಲಿ ಒಬ್ಬರಿಗೆ ಪಾಸಿಟಿವ್ ದೃಢಪಟ್ಟಿದೆ. ಅಮೆರಿಕಾದಿಂದ ಬಂದಿದ್ದ 15 ವರ್ಷದ ಯುವಕನಿಗೂ ಸೋಂಕು ದೃಢಪಟ್ಟಿದ್ದು, ಇವ್ರ ಸಂಪರ್ಕಿತರ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಟ್ನಲ್ಲಿ ಇಂದು ಏಳು ಜನರಲ್ಲಿ ಒಮಿಕ್ರಾನ್ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಹೆಚ್ಚಿಸುತ್ತಿದೆ.