ETV Bharat / state

Unlock 2.0: ಮೈಮರೆತ ಜನ.. ವಾಣಿಜ್ಯ ಪ್ರದೇಶಗಳಲ್ಲಿ ಜನವೋ ಜನ

ಅನ್​ಲಾಕ್ 2.0 ಜಾರಿಯಾಗಿದ್ದು ಕೆ‌.ಆರ್ ಮಾರುಕಟ್ಟೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಮಲ್ಲೇಶ್ವರಂನಲ್ಲೂ ಮತ್ತೆ ವ್ಯಾಪಾರ ಚಟುವಟಿಕೆಗಳು ಗರಿಗೆದರಿವೆ. ಕಳೆದ 50 ದಿನಗಳಿಗೂ ಹೆಚ್ಚು ಕಾಲ ಬಂದ್ ಆಗಿದ್ದ ಅಂಗಡಿಗಳು ಮತ್ತೆ ಓಪನ್​ ಆಗಿವೆ.

unlock
ಅನ್​ಲಾಕ್ 2.0
author img

By

Published : Jun 22, 2021, 7:45 PM IST

ಬೆಂಗಳೂರು: ನಗರದಲ್ಲಿ ಅನ್​ಲಾಕ್ 2.0 ಜಾರಿಯಾಗಿದ್ದು, ಜನರು ಕೋವಿಡ್ ಇರುವುದನ್ನೂ ಮರೆತು ಬಿಂದಾಸ್ ಓಡಾಟ ನಡೆಸುತ್ತಿದ್ದಾರೆ. ಮಾಸ್ಕ್ ಸರಿಯಾಗಿ ಧರಿಸದೇ, ಗುಂಪು ಗುಂಪಾಗಿ ಹೊರಬಂದು ಕೋವಿಡ್ ಮತ್ತೆ ಹರಡುವ ಭೀತಿ ಹೆಚ್ಚಿಸುತ್ತಿದ್ದಾರೆ. ನಗರದ ಪ್ರಮುಖ ವ್ಯಾಪಾರಿ ಪ್ರದೇಶಗಳಾದ ಚಿಕ್ಕಪೇಟೆ, ಎಸ್ ಪಿ ರಸ್ತೆ, ನಗರಥ್​ಪೇಟೆ, ಕಾಟನ್ ಪೇಟೆ, ಅವೆನ್ಯೂ ರಸ್ತೆಗಳಲ್ಲಿ ಜನಸಂದಣಿ ಕಂಡು ಬಂದಿದೆ.

ಕೆ‌.ಆರ್ ಮಾರುಕಟ್ಟೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಮಲ್ಲೇಶ್ವರಂನಲ್ಲೂ ಮತ್ತೆ ವ್ಯಾಪಾರ ಚಟುವಟಿಕೆಗಳು ಗರಿಗೆದರಿವೆ. ಕಳೆದ 50 ದಿನಗಳಿಗೂ ಹೆಚ್ಚು ಕಾಲ ಬಂದ್ ಆಗಿದ್ದ ಎಲೆಕ್ಟ್ರಾನಿಕ್ ವಸ್ತುಗಳು, ಪಾತ್ರೆ, ಬಟ್ಟೆ, ಚಪ್ಪಲಿ, ಗೃಹೋಪಯೋಗಿ ಅಂಗಡಿಗಳು, ಉದ್ಯಮಗಳ ಅಂಗಡಿಗಳು ಮತ್ತೆ ಜನರಿಂದ ಕಿಕ್ಕಿರಿದು ತುಂಬಿವೆ.

ಸಂಜೆ ಐದು ಗಂಟೆಗೆ ವ್ಯಾಪಾರ- ವಹಿವಾಟು ಬಂದ್ ಮಾಡಬೇಕು ಎಂಬ ಆದೇಶವಿದ್ದರೂ ಪೊಲೀಸರು ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸಿದಾಗಷ್ಟೇ ಅಂಗಡಿ ಮಾಲೀಕರು ಎಚ್ಚೆತ್ತುಕೊಳ್ಳುತ್ತಿದ್ದಾರೆ.

ಹೋಟೆಲ್​ಗಳಲ್ಲಿ ಶೇ. 50ರಷ್ಟು ಮಾತ್ರ ಜನರಿಗೆ ಕುಳಿತು ತಿನ್ನಲು ಅವಕಾಶ ಕೊಡಬೇಕೆಂಬ ನಿಯಮವಿದ್ದರೂ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಜೊತೆಗೆ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಾರೆ.

ಇನ್ನು ನಗರದ ಬಹುತೇಕ ರಸ್ತೆಗಳಲ್ಲಿ ಕಾಮಗಾರಿಗಳು ನಡೆಯುತ್ತಿದ್ದು, ಧೂಳು ಹಾಗೂ ಸಂಚಾರ‌ದಟ್ಟಣೆಯಿಂದ ಜನ ಹೈರಾಣಾಗುತ್ತಿದ್ದಾರೆ. ರಸ್ತೆ ಕಾಮಗಾರಿಗಳು ಪೂರ್ಣಗೊಳ್ಳಲು ಇನ್ನೂ ಎರಡು ತಿಂಗಳು ಬೇಕಾಗಬಹುದು ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.

ದಂಡ ಸಂಗ್ರಹ: ಅನ್​ಲಾಕ್​​ ಬಳಿಕ ಕೋವಿಡ್ ಹರಡಬಹುದು ಎಂಬ ಹಿನ್ನೆಲೆಯಲ್ಲಿ ಜನ ಮಾರ್ಗಸೂಚಿ ಪಾಲಿಸುವಂತೆ ನೋಡಿಕೊಳ್ಳಲು ಹೆಚ್ಚುವರಿ ಮಾರ್ಷಲ್ಸ್, ಹೋಂಗಾರ್ಡ್ಸ್ ಸಿಬ್ಬಂದಿ ನೇಮಕ ಮಾಡಲಾಗಿದೆ. ಪೊಲೀಸರು ಈ ಬಗ್ಗೆ ಪರಿಶೀಲಿಸುತ್ತಿದ್ದು, ಮಾಸ್ಕ್ ಧರಿಸದೇ ಓಡಾಡುತ್ತಿರುವ ಜನರಿಗೆ ದಂಡ ಹಾಕುತ್ತಿದ್ದಾರೆ.

ನಿನ್ನೆ ಒಂದೇ ದಿನ ನಗರದಲ್ಲಿ 59,750 ರೂ. ದಂಡ ಸಂಗ್ರಹ ಆಗಿದೆ. 239 ಜನ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ. ಈ ಪೈಕಿ 232 ಮಂದಿ ಮಾಸ್ಕ್ ಧರಿಸದೇ ಓಡಾಡಿದ್ದು 58,000 ದಂಡ ವಿಧಿಸಲಾಗಿದೆ.

7 ಪ್ರಕರಣಗಳಲ್ಲಿ ಸಾಮಾಜಿಕ ಅಂತರ ಕಾಯದ ಹಿನ್ನೆಲೆ 1,750 ದಂಡ ವಿಧಿಸಲಾಗಿದೆ. ನಗರದ ಮಾರುಕಟ್ಟೆ ಪ್ರದೇಶಗಳು, ವಾಣಿಜ್ಯ ವಹಿವಾಟು ನಡೆಯುವ ಕಡೆ ಜನರು ಗುಂಪುಗುಂಪಾಗಿ ಓಡಾಟ ನಡೆಸುತ್ತಿದ್ದಾರೆ. ಸಂಜೆ 5 ಗಂಟೆ ವೇಳೆಗೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.