ETV Bharat / state

ಕೋವಿಡ್ ಹೋಯಿತು ಎಂದು ಮೈ ಮರೆಯುವಂತಿಲ್ಲ: ಇತರ ವೈರಸ್​ಗಳ ಅಪಾಯ ಎದುರಾಗಲಿದೆ ಎಚ್ಚರ - ಡಾ ರವೀಂದ್ರ ಎಂ ಮೆಹ್ತಾ

ಕೋವಿಡ್ ಮಹಾಮಾರಿಯ ಬದಲು ಬೇರೆ ವೈರಸ್​ಗಳಿಂದ ಹರಡುವ ರೋಗಗಳ ಪ್ರಮಾಣ ಬೆಂಗಳೂರು ನಗರ ಪ್ರದೇಶದಲ್ಲಿ ಹೆಚ್ಚಾಗಿದೆ.

ಬೆಂಗಳೂರು
ಬೆಂಗಳೂರು
author img

By

Published : Sep 27, 2022, 10:51 PM IST

ಬೆಂಗಳೂರು: ಕೋವಿಡ್ ಮಹಾಮಾರಿಯ ಅಬ್ಬರವೇನೋ ಕಡಿಮೆಯಾಗಿದೆ. ಅಂದಹಾಗೆ ಇಷ್ಟು ದಿನ ಮರೆತೇ ಹೋಗಿದ್ದ ಉಳಿದ ವೈರಸ್​ಗಳ ಬಗ್ಗೆ ಹೆಚ್ಚಿನ ಗಮನ ಹರಿಸುವ ಸಮಯ ಬಂದಿದೆ.

2020ರಲ್ಲಿ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಕೋವಿಡ್ ಮಹಾಮಾರಿ ಇದೀಗ ಸಾಕಷ್ಟು ತಣ್ಣಗಾಗಿದೆ. ಈ ಜಾಗತಿಕ ವೈರಸ್ ಮಹಾಮಾರಿಯ ದಾಳಿ ಸಂದರ್ಭ ವಿಶೇಷ ಗಮನಹರಿಸುವ ಸ್ಥಿತಿ ಎದುರಾದ ಹಿನ್ನೆಲೆ ಇತರ ವೈರಸ್ ಗಳಿಂದ ವ್ಯಾಪಿಸಬಹುದಾದ ರೋಗಗಳ ಬಗ್ಗೆ ಜನರ ಗಮನ ಕಡಿಮೆಯಾಗಿತ್ತು. ವೈದ್ಯಕೀಯ ಕ್ಷೇತ್ರ ಸಹ ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿರಲಿಲ್ಲ. ಆದರೆ ನಿಧಾನವಾಗಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ಮಹಾಮಾರಿಯ ಅಬ್ಬರವು ಕಡಿಮೆ ಆಗಿರುವ ಹಿನ್ನೆಲೆ ಶೇಕಡ 90ರಷ್ಟು ಮಂದಿ ಮಾಸ್ಕ್​ ಧರಿಸುವುದನ್ನು ಬಿಟ್ಟಿದ್ದಾರೆ. ಕೊರೊನಾ ವೈರಸ್ ದಾಳಿಯಿಂದ ತಪ್ಪಿಸಿಕೊಳ್ಳಲು ಮಾಸ್ಕ್​ ಧರಿಸುತ್ತಿದ್ದ ಜನ ಇದೀಗ ಕೊಂಚ ನಿರಾಳರಾಗಿದ್ದು ಅದನ್ನು ಮರೆತಿದ್ದಾರೆ. ಮಾಸ್ಕ್ ಧರಿಸುತ್ತಿದ್ದ ಕಾರಣಕ್ಕೆ ಕೊರೊನಾ ಸೇರಿದಂತೆ ಹಲವು ವೈರಸ್ ಗಳು ಮೂಗು ಹಾಗೂ ಬಾಯಿಯ ಮೂಲಕ ಶರೀರವನ್ನು ಸೇರುತ್ತಿರಲಿಲ್ಲ.

ಡಾ. ರವೀಂದ್ರ ಎಂ ಮೆಹ್ತಾ ಅವರು ಮಾತನಾಡಿದರು

ಭದ್ರತಾ ಕವಚದ ರೀತಿ ಮಾಸ್ಕ್ ಕಾರ್ಯನಿರ್ವಹಿಸುತ್ತಿದ್ದ ಹಿನ್ನೆಲೆ ಸಾಕಷ್ಟು ಜನ ಧೂಳು ಹೊಗೆ ಹಾಗೂ ಕಲುಷಿತ ಗಾಳಿಗೆ ತಮ್ಮನ್ನ ತಾವು ಓಡ್ಡಿಕೊಳ್ಳದೆ ಸುರಕ್ಷಿತವಾಗಿದ್ದರು. ಆದರೆ ಇದೀಗ ಮತ್ತೊಮ್ಮೆ ಸಣ್ಣಪುಟ್ಟ ವೈರಸ್ ಗಳ ಮೂಲಕ ಹರಡಬಹುದಾದ ರೋಗಭೀತಿ ಆರಂಭವಾಗಿದೆ.

ವೈರಸ್​ ಪ್ರೇರಿತ ದಾಳಿ: ಕೋವಿಡ್ ಮಹಾಮಾರಿಯ ಬದಲು ಬೇರೆ ವೈರಸ್ ಗಳಿಂದ ಹರಡುವ ರೋಗಗಳ ಪ್ರಮಾಣ ನಗರ ಪ್ರದೇಶದಲ್ಲಿ ಹೆಚ್ಚಾಗಿದೆ. ವ್ಯಾಕ್ಸಿನೇಷನ್ ನೀಡಿಕೆಯಿಂದಾಗಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಆದರೆ ಉಳಿದ ಸಮಸ್ಯೆಗಳು ಈಚೆಗೆ ಹೆಚ್ಚಾಗುತ್ತಿದೆ.

ಸಾಮಾನ್ಯ ಪ್ಲೂ, ಎಚ್1ಎನ್1 ಪ್ಲೂ ಹಾಗೂ ಇತರ ವೈರಸ್​ಗಳ ದಾಳಿ ಹೆಚ್ಚಾಗುತ್ತಿದೆ. ಮಳೆ ವಾತಾವರಣದ ಹಿನ್ನೆಲೆ ಕಳೆದ ಒಂದೆರಡು ತಿಂಗಳಿಂದ ಸಾಕಷ್ಟು ವೈರಸ್ ಪ್ರೇರಿತ ರೋಗಗಳು ನಗರವನ್ನು ಕಾಡಿವೆ. ಮುಂದಿನ ಕೆಲದಿನಗಳು ಸಹ ಇವು ಇರಲಿವೆ.

ಬೆಂಗಳೂರಿನ ಅಪೋಲೋ ಹಾಸ್ಪಿಟಲ್‌ನ ಪಲ್ಮನಾಲಜಿ ಎಂಡ್ ಕ್ರಿಟಿಕಲ್ ಕೇರ್ ವಿಭಾಗದ ಮುಖ್ಯಸ್ಥರಾದ ಡಾ ರವೀಂದ್ರ ಎಂ ಮೆಹ್ತಾ ಪ್ರಕಾರ, ಮಾಲಿನ್ಯ ಸಹ ಇದೀಗ ವೈರಸ್ ಸಮಸ್ಯೆಯ ಜೊತೆ ಸೇರ್ಪಡೆ ಆಗುತ್ತಿದೆ. ನಗರ ಸಹಜ ಸ್ಥಿತಿಗೆ ಮರಳುತ್ತಿದ್ದು, ವಾಹನ ಸಂಚಾರ ದಟ್ಟಣೆ ಮುಂಚಿನಂತೆ ಗೋಚರಿಸುತ್ತಿದೆ.

ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ: ಇದೊಂದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆಯಾಗಿದ್ದು, ವೈರಸ್ ಜೊತೆ ಮಾಲಿನ್ಯವೂ ಬೆರೆತು ಒಂದಿಷ್ಟು ಹೊಸ ಸಮಸ್ಯೆಗಳನ್ನ ಹುಟ್ಟುಹಾಕಲಿದೆ. ಕಳೆದ ಎರಡು ವರ್ಷಗಳಿಂದ ನಗರದಲ್ಲಿ ಇದ್ದ ವಾತಾವರಣ ಸಹ ಇದೀಗ ಬದಲಾಗುತ್ತಿದ್ದು ಜನರಿಗೆ ಹೊಂದಿಕೊಳ್ಳುವುದು ಕಷ್ಟವಾಗಲಿದೆ.

ಕೋವಿಡ್ ಹೋಯಿತು ಎಂದು ಜನ ಹಾಗೂ ಆಸ್ಪತ್ರೆಗಳು ನಿರಾಳವಾಗಲು ಸಾಧ್ಯವಿಲ್ಲ. ನ್ಯುಮೋನಿಯಾ ಹಾಗೂ ಇತರೆ ಜ್ವರಗಳು ಹಾಗೂ ಇತರೆ ಪ್ಲೂ ಸಂಬಂಧಿ ಜ್ವರಗಳು ಕಾಡಬಹುದು. ಈ ಹಿನ್ನೆಲೆ ಆಸ್ಪತ್ರೆಗಳು ಹಾಗೂ ಮಾಧ್ಯಮಗಳು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಓದಿ: ರಕ್ಷಣಾ ಪಡೆಗಳಿಗೆ ಹೆಚ್ಎಎಲ್ ದೊಡ್ಡ ಶಕ್ತಿ..ಇಸ್ರೋ ಕೊಡುಗೆಯೂ ಶ್ಲಾಘನೀಯ : ರಾಷ್ಟ್ರಪತಿ ಮುರ್ಮು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.