ETV Bharat / state

ಏರೋ ಇಂಡಿಯಾ 2023: ಅತಿಗಣ್ಯ ವ್ಯಕ್ತಿಗಳ ಆಗಮನ- ಬೆಂಗಳೂರು ನಗರ ಸಂಪರ್ಕಿಸುವ ಮಾರ್ಗಗಳಲ್ಲಿ ಬದಲಾಣೆ

ವಾಹನ ಸಂಚಾರ ದಟ್ಟನೆ ತಪ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ನಗರ ಸಂಚಾರಿ ಪೊಲೀಸರು ಮಾರ್ಗಗಳ ಬದಲಾವಣೆ ಮಾಡಿ ಆದೇಶಿಸಿದ್ದಾರೆ.

Aero India 2023
ಏರೋ ಇಂಡಿಯಾ 2023
author img

By

Published : Feb 11, 2023, 12:51 PM IST

ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಫೆಬ್ರವರಿ 13 ರಿಂದ 5 ದಿನಗಳ ವರೆಗೂ ಏರೋ ಇಂಡಿಯಾ 2023 ನಡೆಯಲಿದೆ. ಕಾರ್ಯಕ್ರಮಕ್ಕೆ ಪ್ರಧಾನಿಗಳು ಸೇರಿದಂತೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗಣ್ಯ ವ್ಯಕ್ತಿಗಳು ಆಗಮಿಸಲಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವುದರಿಂದ ಕೆಂಪೇಗೌಡ ವಿಮಾನ ನಿಲ್ದಾಣದ ರಸ್ತೆಯಲ್ಲಿ ವಾಹನಗಳ ದಟ್ಟನೆ ಉಂಟಾಗಲಿದೆ. ಏರ್ ಶೋಗೆ ಬರುವ ಗಣ್ಯ ವ್ಯಕ್ತಿಗಳು, ತುರ್ತು ಸೇನಾ ವಾಹನಗಳು ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಾಹನಗಳ ಸುಗಮ ಸಂಚಾರಕ್ಕೆ ಬೆಂಗಳೂರು ನಗರ ಸಂಚಾರಿ ಪೊಲೀಸರು ತಾತ್ಕಾಲಿಕವಾಗಿ ಮಾರ್ಗಗಳ ಬದಲಾವಣೆ ಮಾಡಿದ್ದಾರೆ.

ನಾಲ್ಕು ಪ್ರಮುಖ ರಸ್ತೆಗಳಲ್ಲಿ ಮಾರ್ಗ ಬದಲಾವಣೆ ಮಾಹಿತಿ.. ಬೆಂಗಳೂರನ್ನು ಸಂಪರ್ಕಿಸುವ ನಾಲ್ಕು ಪ್ರಮುಖ ರಸ್ತೆಗಳಲ್ಲಿ ಮಾರ್ಗ ಬದಲಾಣೆ ಮಾಡಲಾಗಿದೆ. ಕೆಲವು ರಸ್ತೆಗಳಲ್ಲಿ ಸಂಚಾರ ನಿಷೇಧ ಮತ್ತು ಮಾರ್ಗ ಬದಲಾಣೆ ಮಾಡಲಾಗಿದೆ. ರಸ್ತೆ ಬದಿಗಳಲ್ಲಿ ವಾಹನಗಳ ನಿಲುಗಡೆ ಮತ್ತು ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಕೆಲವು ರಸ್ತೆಗಳಲ್ಲಿ ಲಾರಿ ಟ್ರಕ್, ಖಾಸಗಿ ಬಸ್, ಲಾರಿ, ಟ್ರ್ಯಾಕ್ಟರ್ ಸೇರಿದಂತೆ ಭಾರೀ ಮತ್ತು ಮಧ್ಯಮ ಸರಕು ಸಾಗಣೆ ವಾಹನಗಳಿಗೆ ನಿಷೇಧ ಮಾಡಿ ನಗರ ಸಂಚಾರಿ ಪೊಲೀಸರು ಆದೇಶಿಸಿದ್ದಾರೆ. ಫೆಬ್ರವರಿ 13ರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಕಾರ್ಯಕ್ರಮ ನಡೆಯುವ ದಿನದಂದು ನಿಯಮ ಜಾರಿಯಲ್ಲಿರುತ್ತದೆ.

Changed route map
ಮಾರ್ಗಗಳ ಬದಲಾವಣೆ

ಇದನ್ನೂ ಓದಿ; ಆರು ಬಾರಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ಫೇಲ್​; ಸೋಲೇ ಗೆಲುವಿನ ಮೆಟ್ಟಿಲೆಂದು ಏಳನೇ ಬಾರಿಗೆ ಐಪಿಎಸ್​ ಆದ ಸಾಧಕ

1. ಹೈದರಾಬಾದ್ ಮತ್ತು ಚಿಕ್ಕಬಳ್ಳಾಪುರದಿಂದ ಬರುವ ಲಾರಿ, ಟ್ರಕ್, ಖಾಸಗಿ ಬಸ್​ಗಳನ್ನು ದೇವನಹಳ್ಳಿ- ದಾಬಸ್ ಪೇಟೆ -ನೆಲಮಂಗಲ ಮೂಲಕ ಎನ್​ಹೆಚ್ 4 ತಲುಪಲು ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ದೇವನಹಳ್ಳಿ - ಸೂಲಿಬೆಲೆ - ಹೊಸಕೋಟೆ ಮೂಲಕ ಕೆ. ಆರ್. ಪುರಂ, ಹೊಸೂರು ತಲುಪಲು ವ್ಯವಸ್ಥೆ ಮಾಡಲಾಗಿದೆ.

2. ತುಮಕೂರು ರಸ್ತೆ ಗೊರಗುಂಟೆಪಾಳ್ಯ ಕಡೆಯಿಂದ ನಗರ ಪ್ರವೇಶಿಸುವ ಭಾರೀ ಸರಕು ವಾಹನಗಳು ಸಿ.ಎಂ.ಟಿ.ಐ ಜಂಕ್ಷನ್​ನಲ್ಲಿ ಬಲ ತಿರುವು ಪಡೆದು ರಿಂಗ್ ರಸ್ತೆಯಲ್ಲಿ ಎಫ್​ಟಿಎ ಫ್ಲೈ ಓವರ್ ಮೂಲಕ ಸುಮನಹಳ್ಳಿ ಮಾರ್ಗವಾಗಿ ನಾಯಂಡಹಳ್ಳಿ ಸರ್ಕಲ್ ಮೂಲಕ ನೈಸ್ ರಸ್ತೆಯಿಂದ ಕನಕಪುರ ತಲುಪುವ ವ್ಯವಸ್ಥೆ ಮಾಡಲಾಗಿದೆ.

3. ತೋಟಗೇರೆ ಬಸವಣ್ಣ ದೇವಸ್ಥಾನದಿಂದ ನಗರ ಪ್ರವೇಶಿಸುವ ವಾಹನಗಳು ದೊಡ್ಡಬಳ್ಳಾಪುರ ಕಡೆಯಿಂದ ಹೊಸಕೋಟೆಗೆ ತಲುಪುವ ವ್ಯವಸ್ಥೆ ಮಾಡಲಾಗಿದೆ. ನೆಲಮಂಗಲ ಕಡೆಯಿಂದ ಸೊಂಡೆಕೊಪ್ಪ ಮಾರ್ಗವಾಗಿ ನೈಸ್ ರಸ್ತೆ ಸಂಪರ್ಕಿಸುವ ವ್ಯವಸ್ಥೆ ಮಾಡಲಾಗಿದೆ.

4. ಚಿಕ್ಕಬಾಣಾವರ ಜಂಕ್ಷನ್​ನಿಂದ ನಗರ ಪ್ರವೇಶಿಸುವ ವಾಹನಗಳು ವಾಪಸ್ ಯೂ ಟರ್ನ್ ತೆಗೆದುಕೊಂಡು ತೋಟಗೇರೆ ಬಸವಣ್ಣ ದೇವಸ್ಧಾನದಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ಹೊಸಕೋಟೆ ತಲುಪುವ ವ್ಯವಸ್ಧೆ ಮಾಡಲಾಗಿದೆ.

ಇದನ್ನೂ ಓದಿ: ಏರೋ ಇಂಡಿಯಾ: ವಾಣಿಜ್ಯ ವಿಮಾನಗಳ ಹಾರಾಟ ವ್ಯತ್ಯಯ; ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಜನಜಾತ್ರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.