ETV Bharat / state

ಅಡುಗೆ ಮನೆಯಲ್ಲಿ ವಾದ, ಆನ್​ಲೈನ್ ಕೋರ್ಟ್​​ ಕಲಾಪದಲ್ಲಿ ಅಸಭ್ಯ ಪದ ಬಳಕೆ: ವಕೀಲರ ಬಗ್ಗೆ ಪರಿಷತ್​ ಅಸಮಾಧಾನ

author img

By

Published : Sep 8, 2020, 9:58 PM IST

ಕೆಲ ವಕೀಲರು ನ್ಯಾಯಾಲಗಳ ಕಲಾಪಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದಾಗ ಅಖಿಲ ಭಾರತೀಯ ವಕೀಲರ ಪರಿಷತ್ತು ಮತ್ತು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ನಿಗದಿಪಡಿಸಿರುವ ಸಮವಸ್ತ್ರಗಳನ್ನು ಧರಿಸದೆ ಹಾಜರಾಗುತ್ತಿದ್ದಾರೆ. ಮತ್ತು ವೃತ್ತಿ ಘನತೆಯನ್ನು ಮರೆತು ನ್ಯಾಯಾಲಯದ ಕಲಾಪಗಳಿಗೆ ತೊಂದರೆ ಉಂಟು ಮಾಡಿದ್ದಾರೆ.‌

State Lawyers Council
ರಾಜ್ಯ ವಕೀಲರ ಪರಿಷತ್ತು

ಬೆಂಗಳೂರು: ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಕಲಾಪಕ್ಕೆ ಹಾಜರಾಗುವ ಕೆಲ ವಕೀಲರು ವಸ್ತ್ರ ಸಂಹಿತೆ ಪಾಲಿಸದಿರುವುದು, ವಿಚಾರಣೆ ವೇಳೆ ಅರಿವಿಲ್ಲದಂತೆ ಅಸಭ್ಯ ಪದಗಳನ್ನು ಬಳಸುವುದು, ಅಡುಗೆ ಮನೆ ಮತ್ತು ತೋಟಗಳಲ್ಲಿ ಕುಳಿತು ವಾದಿಸುವುದು, ಹಾಗೂ ವಾಹನಗಳಲ್ಲಿ ಪ್ರಯಾಣಿಸುತ್ತಾ ವಿಚಾರಣೆಗೆ ಹಾಜರಾಗುತ್ತಿರುವ ವಿಚಾರಕ್ಕೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಅಸಮಾಧಾನ ವ್ಯಕ್ತಪಡಿಸಿದೆ.

ಅಲ್ಲದೆ, ಈ ಇಂತಹ ಪ್ರಕರಣಗಳು ಮರುಕಳಿಸಿದಲ್ಲಿ ಮತ್ತು ಶಿಸ್ತು ಪಾಲಿಸದವರ ವಿರುದ್ಧ ವಕೀಲರ ಅಧಿನಿಯಮ ಕಲಂ 35ರ ಅಡಿಯಲ್ಲಿ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದೆ.

ಕೆಲ ವಕೀಲರು ನ್ಯಾಯಾಲಗಳ ಕಲಾಪಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದಾಗ ಅಖಿಲ ಭಾರತೀಯ ವಕೀಲರ ಪರಿಷತ್ತು ಮತ್ತು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ನಿಗದಿಪಡಿಸಿರುವ ಸಮವಸ್ತ್ರಗಳನ್ನು ಧರಿಸದೆ ಹಾಜರಾಗುತ್ತಿದ್ದಾರೆ. ಮತ್ತು ವೃತ್ತಿ ಘನತೆಯನ್ನು ಮರೆತು ನ್ಯಾಯಾಲಯದ ಕಲಾಪಗಳಿಗೆ ತೊಂದರೆ ಉಂಟು ಮಾಡಿದ್ದಾರೆ.‌

ಕೆಲವು ವಕೀಲರಂತೂ ಕಾರು, ಆಟೋಗಳಲ್ಲಿ ಪ್ರಯಾಣಿಸುತ್ತಾ, ಅಡುಗೆ ಮನೆ ಮತ್ತು ತೋಟದ‌ಲ್ಲಿ ಕೆಲಸ ಮಾಡುತ್ತಾ ವೀಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ ಕಲಾಪಗಳಿಗೆ ಹಾಜರಾಗುತ್ತಿರುವ ಪ್ರಕರಣಗಳು ಗಮನಕ್ಕೆ ಬಂದಿದೆ. ಕೋರ್ಟ್ ಕಲಾಪದಲ್ಲಿ ಪ್ರತಿನಿಧಿಸುತ್ತಿರುವ ಸಂದರ್ಭದಲ್ಲಿ ಕೆಲ ವಕೀಲರು ಆಡಿಯೋ ಮ್ಯೂಟ್ ಮಾಡದೆ ಕೆಟ್ಟ ಶಬ್ದಗಳನ್ನು ಮಾತನಾಡುತ್ತಾ ಕೋರ್ಟ್ ಕಲಾಪಗಳಿಗೆ ತೊಂದರೆ ಉಂಟು ಮಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಇಂತಹ ವಕೀಲರ ವಿರುದ್ಧ ಶಿಸ್ತು ಕ್ರಮ ಜರುಗಿಸಲಿದ್ದೇವೆ ಎಂದು ಪರಿಷತ್ ಕೈಗೊಂಡಿರುವ ನಿರ್ಣಯದಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.