ಬೆಂಗಳೂರು: ಅರಣ್ಯ ಇಲಾಖೆಯ ಎಡಿಜಿಪಿಯಾಗಿದ್ದ ಡಾ.ಪಿ.ರವೀಂದ್ರನಾಥ್ ರಾಜೀನಾಮೆ ಪತ್ರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಕೆಯಾಗಿದೆ.
ತಮ್ಮಗಿಂತ ಕಿರಿಯ ಅಧಿಕಾರಿಯಾದ ಸುನೀಲ್ ಕುಮಾರ್ ಅವರಿಗೆ ಎಡಿಜಿಪಿಯಿಂದ ಡಿಜಿಪಿ ಶ್ರೇಣಿಗೆ ಬಡ್ತಿ ನೀಡಿದಕ್ಕೆ ಐಪಿಎಸ್ ಅಧಿಕಾರಿ ರವೀಂದ್ರನಾಥ್ ಅಸಮಾಧಾನಗೊಂಡು ರಾತ್ರೋರಾತ್ರಿ ನಿಯಂತ್ರಣ ಕೊಠಡಿಗೆ ತೆರಳಿ ಸಿಬ್ಬಂದಿ ಕೈಗೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಆ ರಾಜೀನಾಮೆ ಪತ್ರ ಮುಖ್ಯ ಕಾರ್ಯದರ್ಶಿಗಳ ಕೈ ಸೇರಿದೆ.
ಇಲಾಖೆಯಲ್ಲಿ ಅಸಂವಿಧಾನಾತ್ಮಕ ನಡೆ ಆರೋಪಿಸಿ ಮುಖ್ಯ ಕಾರ್ಯದರ್ಶಿ ಹೆಸರಿಗೆ ರಾಜೀನಾಮೆ ಪತ್ರ ಬರೆದಿದ್ದರು. ಆ ಪತ್ರ ಪೊಲೀಸ್ ಪ್ರಧಾನ ಕಚೇರಿಯಿಂದ ಮುಖ್ಯ ಕಾರ್ಯದರ್ಶಿಗೆ ತಲುಪಿದ್ದು, ರಾಜೀನಾಮೆ ಪತ್ರದ ಬಗ್ಗೆ ಮುಖ್ಯ ಕಾರ್ಯದರ್ಶಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
ರಾಜೀನಾಮೆ ಪ್ರಕ್ರಿಯೆ ಹಂತವಾಗಿ ಡಿಪಿಎಆರ್‌ಗೆ ತಲುಪಲಿದೆ. ನಂತರ ಮುಖ್ಯಮಂತ್ರಿಗಳ ಬಳಿ ರವಾನೆಯಾಗುತ್ತದೆ. ಅಂತಿಮವಾಗಿ ರಾಜೀನಾಮೆ ಪತ್ರ ಕೇಂದ್ರಕ್ಕೆ ತಲುಪುತ್ತದೆ. ನಂತರ ಕೇಂದ್ರ ಗೃಹ ಇಲಾಖೆಯು ರಾಜೀನಾಮೆ ನೀಡಿರುವ ರವೀಂದ್ರನಾಥ್ ಅವರಿಗೆ ಒಂದು ತಿಂಗಳ ಗಡುವು ನೀಡುತ್ತದೆ. ಈ ಅವಧಿಯಲ್ಲಿ ರವೀಂದ್ರನಾಥ್ ಬಯಸಿದರೆ ತಮ್ಮ ರಾಜೀನಾಮೆ ಪತ್ರವನ್ನು ವಾಪಸ್ ಪಡೆದು ಸೇವೆಗೆ ಮರಳಬಹುದಾಗಿದೆ.