ಬೆಂಗಳೂರು: ರಾಜಧಾನಿಯ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಭೇಟಿ ಕೊಟ್ಟ ಎಡಿಜಿಪಿ ಭಾಸ್ಕರ್ ರಾವ್ ಪ್ರಯಾಣಿಕರಿಗೆ ಮಾಸ್ಕ್ ಕೊಡುವ ಮೂಲಕ ಜಾಗೃತಿ ಮೂಡಿಸಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿದ್ದ ಪ್ರಯಾಣಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಕಡ್ಡಾಯವಾಗಿ ಧರಿಸಲು ತಿಳಿಸಿ ರೈಲ್ವೆ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದರು. ಜನರಿಗೆ ಹೊರಗಡೆ ನಿಲ್ಲಲು ಸೌಲಭ್ಯವಿಲ್ಲ, ಹೀಗಾಗಿ ಒಳಗಡೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೂರಲು ತಿಳಿಸಿದರು.
ರೈಲ್ವೆ ಪೊಲೀಸರಿಗೆ ಕೂಡ ಕೆಲ ಸೂಚನೆ ನೀಡಿದ ಭಾಸ್ಕರ ರಾವ್ ಪ್ಲಾಟ್ಫಾರ್ಮ್ನಲ್ಲಿರುವ ಧ್ವನಿವರ್ಧಕಗಳಲ್ಲಿ ಮಾಸ್ಕ್ ಧರಿಸಲು ಸೂಚನೆ ನೀಡಬೇಕು, ಮಾಸ್ಕ್ ಹಾಕದಿದ್ದವರಿಗೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಬೇಕು ಎಂದು ಸೂಚಿಸಿದರು.