ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು ಹಕ್ಕಿಗಳಾಗಿರುವ ನಟಿ ಸಂಜನಾ ಹಾಗೂ ರಾಗಿಣಿಯನ್ನ ಸದ್ಯ ಬೇರೆ ಬೇರೆ ಸೆಲ್ನಲ್ಲಿ ಇಟ್ಟಿದ್ದು, ಇತರೆ ಮಹಿಳಾ ಕೈದಿಗಳೊಂದಿಗೆ ಕಾಲ ಕಳೆಯುತ್ತಿದ್ದಾರೆ.
ನಟಿ ಸಂಜನಾ ಇರುವ ಸೆಲ್ನಲ್ಲಿ ಬೆಂಗಳೂರು ಮೂಲದ ಮಹಿಳಾ ವಿಚಾರಣಾಧೀನ ಕೈದಿ (ಕಳ್ಳತನ ಕೇಸ್) ಜೊತೆಗಿದ್ದಾರೆ. ಹಾಗೆ ರಾಗಿಣಿ ಇರುವ ಸೆಲ್ನಲ್ಲಿ ಬೆಂಗಳೂರು ಮೂಲದ ಸಜಾ ಕೈದಿ (ಚೀಟಿಂಗ್ ಕೇಸ್) ಜೊತೆಯಲ್ಲಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ದೊಡ್ಡ ಹೆಸರು ಮಾಡಿ ಮಿಂಚಿದ್ದ ನಟಿಮಣಿಯರು ಹೈಫೈ ಮನೆ, ಐಷಾರಾಮಿ ಹೋಟೆಲ್ನಲ್ಲಿ ವಾಸ ಮಾಡುತ್ತಿದ್ದರು. ಆದ್ರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಯಾವುದೇ ಹೈಫೈ ಬದುಕು ಇಲ್ಲದೆ ಆರೋಪಿಗಳ ಜೊತೆ ವಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೆ ಇಂದು ಭಾನುವಾರವಾಗಿದ್ದು, ವೀಕೆಂಡ್ ಬಂದ್ರೆ ಸಾಕು ಪಾರ್ಟಿ ಮೂಡ್ನಲ್ಲಿ ಇರುತ್ತಿದ್ದವರಿಗೆ ಜೈಲಿನಲ್ಲಿ ಕೊಡುವ ದಿನಚರಿ ಆಹಾರವೇ ಗತಿಯಾಗಿದೆ.