ETV Bharat / state

ಯೂಟ್ಯೂಬ್ ನೋಡಿ ಬುಲೆಟ್ ಬೈಕ್​ ಕದಿಯುವ ಖಯಾಲಿ.. ಏಳು ಮಂದಿ ಪದವೀಧರರು ಅರೆಸ್ಟ್ - ಯ್ಯೂಟೂಬ್ ನೋಡಿ ಬುಲೆಟ್ ಬೈಕ್​ಗಳ ಕದಿಯುತ್ತಿದ್ದ ಆರೋಪಿಗಳ ಬಂಧನ

ಕಳ್ಳತನ ಮಾಡುವುದನ್ನು ತೀರ್ಮಾನಿಸಿದ್ದ ಖದೀಮರು ಬೈಕ್ ಕಳ್ಳತನ ಹೇಗೆ ಮಾಡುವುದು ಎಂಬುದರ ಬಗ್ಗೆ ಯೂಟ್ಯೂಬ್​ನಲ್ಲಿ ನೋಡಿ ಕಲಿತುಕೊಂಡು ಫೀಲ್ಡ್​ಗೆ ಇಳಿದಿದ್ದರು. ಪಬ್ಲಿಕ್‌ ಪ್ಲೇಸ್​ನಲ್ಲಿ ನಿಲ್ಲಿಸಿದ್ದ ಬುಲೆಟ್ ಬೈಕ್​ಗಳನ್ನೇ ಟಾರ್ಗೆಟ್ ಮಾಡಿ ಕದ್ದು ಆಂಧ್ರಪ್ರದೇಶದಲ್ಲಿ‌‌ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಬಂದ ಹಣದಲ್ಲಿ ಸಮನಾಗಿ ಹಂಚಿಕೊಂಡು ಮೋಜಿ ಜೀವನ ನಡೆಸುತ್ತಿದ್ದರು.

accused-arrested-for-bike-theft-in-bengaluru
ಯ್ಯೂಟೂಬ್ ನೋಡಿ ಬುಲೆಟ್ ಬೈಕ್​ಗಳನ್ನ‌ ಕದಿಯುತ್ತಿದ್ದ ಏಳು ಮಂದಿ ಅಕ್ಷರಸ್ಥರು ಅರೆಸ್ಟ್
author img

By

Published : Apr 4, 2022, 9:58 PM IST

ಬೆಂಗಳೂರು: ಅವರು ಚೆನ್ನಾಗಿ ಓದಿಕೊಂಡ ವಿದ್ಯಾವಂತರು. ಕೆಲಸಕ್ಕಾಗಿ ಸತತ ಪರಿಶ್ರಮ ಪಟ್ಟಿದ್ದರೆ ಒಂದೊಳ್ಳೆ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡು ಕೈ-ತುಂಬಾ ಹಣ ಸಂಪಾದಿಸುತ್ತಿದ್ದರು. ಆದರೆ, ಕಷ್ಟಪಡದೆ ಸುಲಭವಾಗಿ ಹಣ ಗಳಿಸುವ ಉಮೇದಿಗೆ ಬಿದ್ದ ಆ ಏಳು ವಿದ್ಯಾವಂತರು ಕಳ್ಳತನ‌ ಪ್ರಕರಣದಲ್ಲಿ ಸಿಕ್ಕಿಬಿದ್ದು, ಕಂಬಿ ಹಿಂದೆ ನಿಂತಿದ್ದಾರೆ. ಸಿನಿಮಾಗಳಿಂದ ಪ್ರಭಾವಿತರಾಗಿ ಐಷಾರಾಮಿ ಲೈಫ್ ಲೀಡ್ ಮಾಡಲು ನಗರದಲ್ಲಿ ದುಬಾರಿ ಬೆಲೆಯ ಎನ್​ಫೀಲ್ಡ್ ಬೈಕ್​ಗಳನ್ನು ಕಳ್ಳತನ ಮಾಡುತ್ತಿದ್ದ ಏಳು ಮಂದಿ ಅಂತರಾಜ್ಯ ಖದೀಮರನ್ನು ಬಂಧಿಸುವಲ್ಲಿ ಬನಶಂಕರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಂಧ್ರ ಪ್ರದೇಶದ ಚಿತ್ತೂರು ಮೂಲದ ಆರೋಪಿಗಳಾದ ವಿಜಯ್, ಹೇಮಂತ್, ಗುಣಶೇಖರ್ ರೆಡ್ಡಿ, ಭಾನುಮೂರ್ತಿ, ಪುರುಷೋತ್ತಮ್, ಕಾರ್ತಿಕ್ ಹಾಗೂ ಕಿರಣ್‌ ಎಂಬುವರನ್ನು ಬಂಧಿಸಿ 68 ಲಕ್ಷ ಮೌಲ್ಯದ 30 ಬೈಕ್‌ಗಳನ್ನ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಬಂಧಿತರೆಲ್ಲರೂ ಎಂಬಿಎ, ಇಂಜಿನಿಯರಿಂಗ್​ ಪದವಿ ಸೇರಿ ಆರೋಪಿಗಳೆಲ್ಲರೂ ಒಂದೇ ಏರಿಯಾದವರಾಗಿದ್ದು, ಉನ್ನತ ಶಿಕ್ಷಣ ಪಡೆದವರೇ ಆಗಿದ್ದಾರೆ.

ಯ್ಯೂಟೂಬ್ ನೋಡಿ ಬುಲೆಟ್ ಬೈಕ್​ಗಳನ್ನ‌ ಕದಿಯುತ್ತಿದ್ದ ಏಳು ಮಂದಿ ಅಕ್ಷರಸ್ಥರು ಅರೆಸ್ಟ್

ಲಾಕ್​ಡೌನ್​ ವೇಳೆ ತಾವು ಅಂದುಕೊಂಡ ಕೆಲಸ ಸಿಗದಿದ್ದರಿಂದ ಹತಾಶೆಗೊಳಗಾಗಿದ್ದರು. ಅಲ್ಲದೆ, ಸಿನಿಮಾ ಹುಚ್ಚು ಬೆಳೆಸಿಕೊಂಡಿದ್ದ ಆರೋಪಿಗಳು ಸಿನಿಮಾ ಶೈಲಿಯಲ್ಲಿ ಕಡಿಮೆ ಅವಧಿಯಲ್ಲಿ ಬೇಗನೆ ಶ್ರೀಮಂತರಾಗುವ ಕನಸು ಕಂಡಿದ್ದರು‌. ಇದಕ್ಕಾಗಿ ಪ್ಲಾನ್ ಮಾಡಿಕೊಂಡ‌ ಖದೀಮರು ಬೈಕ್ ಕಳ್ಳತನಕ್ಕೆ ನಿರ್ಧರಿಸಿದ್ದರು.

ಯುಟ್ಯೂಬ್ ನೋಡಿ ಬೈಕ್ ಕಳ್ಳತನ ಮಾಡುತ್ತಿದ್ದ ಚೋರರು.. ಕಳ್ಳತನ ಮಾಡಲು ತೀರ್ಮಾನಿಸಿದ ಖದೀಮರು ಬೈಕ್ ಕಳ್ಳತನ ಹೇಗೆ ಮಾಡುವುದು ಎಂಬುದರ ಬಗ್ಗೆ ಯೂಟ್ಯೂಬ್​ ಚಾನಲ್​ನಲ್ಲಿ ನೋಡಿ ಕಲಿತುಕೊಂಡು ಫೀಲ್ಡ್​ಗೆ ಇಳಿದಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುವ ಬುಲೆಟ್ ಬೈಕ್​ಗಳನ್ನೇ ಟಾರ್ಗೆಟ್ ಮಾಡಿಕೊಂಡು ಕೈಚಳಕ ತೋರಿಸುತ್ತಿದ್ದರು. ಬಳಿಕ ಆಂಧ್ರ ಪ್ರದೇಶದಲ್ಲಿ‌‌ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಬಂದ ಹಣವನ್ನು ಸಮನಾಗಿ ಹಂಚಿಕೊಂಡು ಮೋಜಿನ ಜೀವನ ನಡೆಸುತ್ತಿದ್ದರು.

ಇತ್ತೀಚೆಗೆ ಬನಶಂಕರಿ‌‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ‌ ಪ್ರಕರಣ ದಾಖಲಿಸಿಕೊಂಡಿದ್ದ ಇನ್‌ಸ್ಪೆಕ್ಟರ್ ಪುಟ್ಟಸ್ವಾಮಿ ಹಾಗೂ‌ ಪಿಎಸ್ಐ ಮಂಜುನಾಥ್ ನೇತೃತ್ವದ ತಂಡ ಸತತ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ವಿಚಾರಣೆ ವೇಳೆ ಕಳೆದ‌‌‌ ಮೂರು ವರ್ಷಗಳಿಂದ ಸಂಘಟಿತರಾಗಿ ಬೈಕ್‌ ಕಳವು ಮಾಡುತ್ತಿರುವ ಬಗ್ಗೆ ಗೊತ್ತಾಗಿದೆ. ಬಂಧಿತರ ವಿರುದ್ಧ ಕೆ. ಆರ್ ಪುರಂ, ಬನಶಂಕರಿ, ಸಿ. ಕೆ ಅಚ್ಚುಕಟ್ಟು, ಜಯನಗರ, ಬಾಣಸವಾಡಿ, ಮಾರತ್ ಹಳ್ಳಿ, ಬೇಗೂರು, ಹೊಸಕೋಟೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 27 ಪ್ರಕರಣಗಳು ದಾಖಲಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸದ್ಯ ಆರೋಪಿಗಳ ವಿಚಾರಣೆಯನ್ನು ಬನಶಂಕರಿ ಪೊಲೀಸರು ತೀವ್ರಗೊಳಿಸಿದ್ದಾರೆ.

ಓದಿ: ರಾಜ್ಯದ ಜನರಿಗೆ ಕರೆಂಟ್‌ 'ಶಾಕ್‌'.. ಆತ್ಮಸಾಕ್ಷಿ ಇಲ್ಲದ ಸರ್ಕಾರಕ್ಕೆ ಹಣ ಮಾಡುವುದೇ ದಂಧೆ : ಹೆಚ್​​ಡಿಕೆ ಟ್ವೀಟೇಟು

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.