ಬೆಂಗಳೂರು: ಸಿನಿಮಾದಲ್ಲಿ ನಾಯಕ ನಟ, ನಾಯಕ ನಟಿ ಸ್ಥಾನಕ್ಕೆ ಅವಕಾಶ ನೀಡುವುದಾಗಿ ವಂಚಿಸುತ್ತಿದ್ದ ಆರೋಪಿಯನ್ನು ರಾಜಾಜಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಫ್ಲೆಮಿಂಗೋ ಸೆಲೆಬ್ರಿಟೀಸ್ ವರ್ಲ್ಡ್ ಹೆಸರಿನ ಸಿನಿಮಾ ಇನ್ಸ್ಟಿಟ್ಯೂಟ್ ಸ್ಥಾಪಕ ಧವನ್ ಸೋಹಾ ಬಂಧಿತ ಆರೋಪಿ.
ನಟನಾ ತರಬೇತಿಗಾಗಿ ಫ್ಲೆಮಿಂಗೋ ಸೆಲೆಬ್ರಿಟೀಸ್ ವರ್ಲ್ಡ್ ಎಂಬ ಇನ್ಸ್ಟಿಟ್ಯೂಟ್ ತೆರೆದಿದ್ದ ಆರೋಪಿ, ಹಿರಿಯ ನಟಿಯೊಬ್ಬರನ್ನು ಇನ್ಸ್ಟಿಟ್ಯೂಟ್ ಪ್ರಾಂಶುಪಾಲರನ್ನಾಗಿ ನೇಮಿಸಿದ್ದರು. ಆರೋಪಿ ಅನೇಕ ಖ್ಯಾತ ನಟ, ನಟಿಯರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾ, ರೀಲ್ಸ್ ವಿಡಿಯೋ ಮಾಡಿ, ಅವುಗಳನ್ನೇ ವಂಚನೆಗೆ ಬಳಸಿಕೊಳ್ಳುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಬಳಿಕ ಇನ್ಸ್ಟಿಟ್ಯೂಟ್ಗೆ ಸೇರುವವರ ಬಳಿ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ 30 ರಿಂದ 50 ಸಾವಿರ ಪಡೆದು ವಂಚಿಸುತ್ತಿದ್ದನಂತೆ. ಬರೋಬ್ಬರಿ 58 ಜನರಿಗೆ ವಂಚಿಸಿದ್ದ ಆರೋಪ ಕುರಿತು ಧವನ್ ಸೋಹಾ ವಿರುದ್ಧ ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ನಕಲಿ ದಾಖಲೆ ಸೃಷ್ಟಿಸಿ ಫೈನಾನ್ಸ್ ಕಂಪನಿಗೆ ಟೋಪಿ ಹಾಕಿದ ವಂಚಕರು ಅಂದರ್