ETV Bharat / state

ಪ್ರತ್ಯೇಕ ಅಪಘಾತ: ಬೆಂಗಳೂರಲ್ಲಿ ಮೂವರು ಯುವಕರ ದಾರುಣ ಸಾವು - ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಎರಡು ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ

ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ದುರಂತದಲ್ಲಿ ಮುಂಜಾನೆ 5.45 ರ ಸಂದರ್ಭದಲ್ಲಿ ರಘುವೀರ್ (27) ಎಂಬುವವರು ಸ್ಕೂಟರ್‌ನಲ್ಲಿ ತೆರಳುವಾಗ ಆಯತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಕೆಳಕ್ಕೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡು ಅಸುನೀಗಿದ್ದಾರೆ.

Kiran is a young man who died
ಕಿರಣ್​ ಮೃತಪಟ್ಟ ಯುವಕ
author img

By

Published : Feb 27, 2022, 10:58 PM IST

ಬೆಂಗಳೂರು: ಇಂದು ನಗರದ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಎರಡು ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.

ಬುಲೆಟ್‌ನಲ್ಲಿ ತೆರಳುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಕಿರಣ್(23) ಮತ್ತು ಯತೀಶ್(22) ಎನ್ನುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬುಲೆಟ್ ಬೈಕ್‌ನಲ್ಲಿ ಅಮೃತಹಳ್ಳಿ ಕಡೆಯಿಂದ ಬ್ಯಾಟರಾಯನಪುರ ಸರ್ವೀಸ್ ರಸ್ತೆ ಕಡೆಗೆ ಹೋಗುವಾಗ ಕೊಡುಗೆಹಳ್ಳಿ ಜಂಕ್ಷನ್‌ನಿಂದ ಅತಿ ವೇಗವಾಗಿ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ರಸ್ತೆಗೆ ಉರುಳಿ ಬಿದ್ದು, ತಲೆಗೆ ತೀವ್ರವಾಗಿ ಪೆಟ್ಟು ಬಿದ್ದ ಇಬ್ಬರು ರಕ್ತದ ಮಡುವಿನಲ್ಲೇ ಕೊನೆಯುಸೆರೆಳೆದಿದ್ದಾರೆ ಎಂದು ಹೇಳಿದ್ದಾರೆ.

ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ದುರಂತದಲ್ಲಿ ಮುಂಜಾನೆ 5.45 ರ ಸಂದರ್ಭದಲ್ಲಿ ರಘುವೀರ್ (27) ಎಂಬುವರು ಸ್ಕೂಟರ್‌ನಲ್ಲಿ ತೆರಳುವಾಗ ಆಯತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಕೆಳಕ್ಕೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡು ಅಸುನೀಗಿದ್ದಾರೆ.

ಹೆಗಡೆ ನಗರದಲ್ಲಿ ಪರಿಚಯಸ್ಥರ ವಿವಾಹ ಆರತಕ್ಷತೆಗೆ ತೆರಳಿ ಬಗಲುಗುಂಟೆಯಲ್ಲಿರುವ ತಮ್ಮ ನಿವಾಸಕ್ಕೆ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ಬೈಕ್ ರಿಂಗ್ ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದು ರಘುವೀರ್ ಕೆಳಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆ್ಯಂಬುಲೆನ್ಸ್ ಮೂಲಕ ಬ್ಯಾಪ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಈ ಎರಡೂ ಅಪಘಾತ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: UP Polls: ಎಸ್‌ಪಿ ಅಭ್ಯರ್ಥಿ, ಬೆಂಬಲಿಗರ ವಿರುದ್ಧ ಅತ್ಯಾಚಾರ, ಹಲ್ಲೆ ಪ್ರಕರಣ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.