ETV Bharat / state

ಬೆಂಗಳೂರಲ್ಲಿ ಬೈಕ್-ಕ್ಯಾಂಟರ್ ನಡುವೆ ಡಿಕ್ಕಿ: ಸವಾರ ಸಾವು

author img

By

Published : Mar 24, 2022, 8:05 PM IST

ಕ್ಯಾಂಟರ್ ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್​ ಸವಾರ ಕ್ಯಾಂಟರ್ ಹಿಂಬದಿ ಟೈಯರ್​ಗೆ ಸಿಲುಕಿ, ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಕೇರಳ ಮೂಲದ ಜೋಸೆಫ್​ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

A terrible accident between a canter and a two-wheeler
ಬೈಕ್- ಕ್ಯಾಂಟರ್ ನಡುವೆ ಡಿಕ್ಕಿ

ಬೆಂಗಳೂರು: ಬೈಕ್ ಹಾಗೂ ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಘಟನೆ ಓಲ್ಡ್ ಏರ್​ಪೋರ್ಟ್ ರಸ್ತೆಯ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೇರಳ ಮೂಲದ ಜೀಜು ಟಿ ಮಾಥ್ಯೂ ಜೋಸೆಫ್ ಮೃತಪಟ್ಟ ವ್ಯಕ್ತಿ. ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಜೋಸೆಫ್ ಕಾಡುಬೀಸನಹಳ್ಳಿ ಬಳಿ ಬೈಕ್​ನಲ್ಲಿ ಬರುವಾಗ ಕ್ಯಾಂಟರ್​​ ಡಿಕ್ಕಿ ಹೊಡೆದಿದೆ. ಹಿಂಬದಿ ಟೈಯರ್​​ಗೆ ಸಿಲುಕಿ, ಜೋಸೆಫ್​​ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಟ್ರಾನ್ಸ್ ಫಾರ್ಮರ್ ಸ್ಫೋಟ ಪ್ರಕರಣ: ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ

ಈ ಘಟನೆ ಸಂಬಂಧ ಓಲ್ಡ್ ಏರ್ ಪೋರ್ಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.