ETV Bharat / state

ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ: ಅಪಾರ ಚಿನ್ನ-ಬೆಳ್ಳಿ, ಶ್ರೀಗಂಧ ಪತ್ತೆ- ಸಂಪೂರ್ಣ ವಿವರ ಇಲ್ಲಿದೆ.. - 18 ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಪ್ರಕರಣಗಳ ಮೇಲೆ ದಾಳಿ

ರಾಜ್ಯಾದ್ಯಂತ ಲಂಚಕೋರ ಸರ್ಕಾರಿ ಅಧಿಕಾರಿಗಳ ಮನೆಗಳು ಹಾಗೂ ಕಚೇರಿಗಳೂ ಸೇರಿದಂತೆ ಒಟ್ಟು 77 ಕಡೆಗಳಲ್ಲಿ 200ಕ್ಕೂ ಹೆಚ್ಚು ಎಸಿಬಿ ಅಧಿಕಾರಿ ಹಾಗೂ ಸಿಬ್ಬಂದಿಯ ತಂಡ ದಾಳಿ ನಡೆಸಿದ್ದು ಅಪಾರ ಪ್ರಮಾಣದ ಸ್ಥಿರ ಹಾಗೂ ಚರಾಸ್ಥಿಗಳನ್ನು ಪತ್ತೆ ಹಚ್ಚಿದ್ದಾರೆ.

ಎಸಿಬಿ ದಾಳಿ
ಎಸಿಬಿ ದಾಳಿ
author img

By

Published : Mar 16, 2022, 3:54 PM IST

Updated : Mar 17, 2022, 7:29 AM IST

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಇಂದು ಬೆಳಗ್ಗೆ ರಾಜ್ಯದ ವಿವಿಧೆಡೆ 18 ಮಂದಿ ಸರ್ಕಾರಿ ಅಧಿಕಾರಿಗಳ ಮನೆಗಳು ಹಾಗೂ ಕಚೇರಿಗಳು ಸೇರಿದಂತೆ ಒಟ್ಟು 77 ಕಡೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿ, ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.

ಅಧಿಕಾರಿಗಳ ಮನೆಗಳಲ್ಲಿ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಹಾಗು ಶ್ರೀಗಂಧದ ತುಂಡುಗಳು ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪತ್ರಗಳು ದೊರೆತಿವೆ.

1. ಬಿ.ಕೆ.ಶಿವಕುಮಾರ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ನಿರ್ದೇಶಕ: ಬೆಂಗಳೂರಿನ ಬಸವೇಶ್ವರ ನಗರದಲ್ಲಿ 2 ವಾಸದ ಮನೆಗಳು, ಅಂಜನಾಪುರದಲ್ಲಿ 1 ಬಿಡಿಎ ನಿವೇಶನ, ಕೆಂಗೇರಿಯಲ್ಲಿ 1 ನಿವೇಶನ, ಅಮೃತಹಳ್ಳಿಯಲ್ಲಿ 4 ಮಹಡಿಗಳ ವಾಣಿಜ್ಯ ಸಂಕೀರ್ಣ, 2.707 ಕೆ.ಜಿ. ಚಿನ್ನಾಭರಣ, 7 ಕೆ.ಜಿ. ಬೆಳ್ಳಿ, 2 ದ್ವಿಚಕ್ರ ವಾಹನ, 1 ಕಾರು, 52 ಸಾವಿರ ನಗದು, 4.50 ಲಕ್ಷ ರೂ. ಬೆಲೆಯ ವಿಮಾ ಪಾಲಿಸಿ, ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಮತ್ತು ಉಳಿತಾಯದ 19.50 ಲಕ್ಷ ರೂ.,17.90 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು.

2. ಜೆ.ಜ್ಞಾನೇಂದ್ರ ಕುಮಾರ್, ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ, ಶಾಂತಿನಗರ: ಬೆಂಗಳೂರಿನ ಬಸವೇಶ್ವರ ನಗರದಲ್ಲಿ 2 ವಾಸದ ಮನೆ ಹಾಗೂ ನಿರ್ಮಾಣ ಹಂತದಲ್ಲಿರುವ 1 ವಾಸದ ಮನೆ, ಬಿಎಂ ಕಾವಲುನಲ್ಲಿ 1 ವಾಸದ ಮನೆ, ಮೈಸೂರಿನ ವಿಜಯನಗರದಲ್ಲಿ 1 ಮನೆ, ಬಿಎಂ ಕಾವಲುನಲ್ಲಿ 3 ನಿವೇಶನಗಳು, ಹೆಬ್ಬಾಳ ಎಸ್ಟೀಮ್ ಮಾಲ್‌ನ ವಾಣಿಜ್ಯ ಸಂಕೀರ್ಣದಲ್ಲಿ 1 ಮಳಿಗೆ, ಕೋಗಿಲು ಕ್ರಾಸ್ ಬಳಿ ಅಪಾರ್ಟ್‌ಮೆಂಟ್‌ವೊಂದರಲ್ಲಿ 1 ಫ್ಲಾಟ್, 1.640 ಕೆ.ಜಿ. ಚಿನ್ನಾಭರಣ, 12.5 ಕೆ.ಜಿ. ಬೆಳ್ಳಿ, ಚಿತ್ರದುರ್ಗದ ಹಿರಿಯೂರು ತಾಲೂಕಿನನಲ್ಲಿ 9.9 ಎಕರೆ ಕೃಷಿ ಜಮೀನು, 1 ದ್ವಿಚಕ್ರ ವಾಹನ, 2 ಕಾರು, 2.24 ಲಕ್ಷ ನಗದು, 5 ವಿವಿಧ ಬ್ಯಾಂಕ್​​ಗಳಲ್ಲಿ ಉಳಿತಾಯ ಖಾತೆಗಳು, ಸಮಾರು 10 ಲಕ್ಷ ಠೇವಣಿ, 15 ಲಕ್ಷ ರು. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

3. ವಿ.ರಾಕೇಶ್ ಕುಮಾರ್, ಬಿಡಿಎ ನಗರ ಯೋಜನೆ ಉಪ ನಿರ್ದೇಶಕ: ಬೆಂಗಳೂರಿನ ನಾಗರಭಾವಿಯಲ್ಲಿ 1 ವಾಸದ ಮನೆ, ಅತ್ತಿಬೆಲೆ, ಮಾರುತಿ ಲೇಔಟ್, ಜಿಗಣಿ, ದಾಸನಪುರದಲ್ಲಿ ತಲಾ 1 ನಿವೇಶನ, 439 ಗ್ರಾಂ ಚಿನ್ನಾಭರಣ, 3.850 ಕೆ.ಜಿ. ಬೆಳ್ಳಿ, 5.1 ಎಕರೆ ಕೃಷಿ ಜಮೀನು, ವಿವಿಧ ಕಂಪನಿಗಳ 3 ದ್ವಿಚಕ್ರ ವಾಹನ, 1 ಕಾರು, 1,74,865 ನಗದು, ವಿವಿಧ ಬ್ಯಾಂಕ್​​ಗಳ ಉಳಿತಾಯ ಖಾತೆಗಳಲ್ಲಿ 6.60 ಲಕ್ಷ ರೂ., 15.50 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು.

4. ರಮೇಶ್ ಕನಕಟ್ಟೆ, ಆರ್‌ಎಫ್‌ಒ, ಸಾಮಾಜಿಕ ಅರಣ್ಯ, ಯಾದಗಿರಿ: ಬೀದರ್‌ನ ಉಡಬಾಳ ಗ್ರಾಮದಲ್ಲಿ 1 ವಾಸದ ಮನೆ, 2 ನಿವೇಶನ, ಕಲಬುರಗಿ ನಗರದಲ್ಲಿ 1 ನಿವೇಶನ, ಹುಮನಾಬಾದ್ ನಗರದಲ್ಲಿ 1 ನಿವೇಶನ, ಬೀದರ್ ನಗರದಲ್ಲಿ 1 ನಿವೇಶನ, 765 ಗ್ರಾಂ ಚಿನ್ನಾಭರಣ, 946 ಗ್ರಾಂ ಬೆಳ್ಳಿ, ವಿವಿದ ಕಡೆಗಳಲ್ಲಿ ಒಟ್ಟು 61.10 ಎಕರೆ ಕೃಷಿ ಜಮೀನು, 1 ದ್ವಿಚಕ್ರ ವಾಹನ, 1 ಅಶೋಕ್ ಲೈಲ್ಯಾಡ್ ಲಾರಿ, 82 ಸಾವಿರ ರೂ. ನಗದು, 2 ವಿಮಾ ಪಾಲಿಸಿಗಳು, 18 ಲಕ್ಷ ಬೆಲೆಯ 25 ಠೇವಣಿಗಳು, 9.5 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

5. ಬಸವರಾಜ ಶೇಖರ್ ರೆಡ್ಡಿ, ಕಾರ್ಯಪಾಲಕ ಎಂಜಿನಿಯರ್, ಕೌಜಲಗಿ ವಿಭಾಗ, ಗೋಕಾಕ್: ಧಾರವಾಡ ಸನ್ಮತಿ ನಗರದ 1 ವಾಸದ ಮನೆ, ಕಲಬುರಗಿ ಬಿದಾಲ್ಲಪುರ ಕಾಲೋನಿಯಲಿ 1 ವಾಸದ ಮನೆ, ಬೆಂಗಳೂರು ನಗರದ ತಿಂಡ್ಲು ಗ್ರಾಮದಲ್ಲಿ 1 ವಾಸದ ಮನೆ, ಯಾದಗಿರಿ ನಗರದಲ್ಲಿ 2 ಖಾಲಿ ನಿವೇಶನ, ಬೆಂಗಳೂರು ನಗರ ಸಪ್ತಗಿರಿ ಲೇಔಟ್‌ನ ಅಪಾರ್ಟ್‌ಮೆಂಟ್​​​ವೊಂದರಲ್ಲಿ 1 ಫ್ಲಾಟ್, 100 ಗ್ರಾಂ ಚಿನ್ನಾಭರಣ, 89 ಎಕರೆ ಕೃಷಿ ಜಮೀನು, 2 ದ್ವಿಚಕ್ರ ವಾಹನ, 3 ಕಾರುಗಳು, 6.63 ಲಕ್ಷ ನಗದು, ಕಲಬುರಗಿ ನಗರದ ಕೃಷ್ಣ ಗ್ರಾಮೀಣ ಬ್ಯಾಂಕ್‌ನಲ್ಲಿ 1 ಲಾಕರ್, ಸುಮಾರು 30.5 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

6. ಬಸವ ಕುಮಾರ್ ಎಸ್. ಅಣ್ಣಿಗೇರಿ, ಶಿರಸ್ತೇದಾರ್, ಡಿಸಿ ಕಚೇರಿ, ಗದಗ: ಗದಗ ಪಂಚಾಕ್ಷರಿ ನಗರದಲ್ಲಿ 1 ವಾಸದ ಮನೆ, ಗದಗ ನಗರದ ವಿವಿಧ ಬಡಾವಣೆಗಳಲ್ಲಿ 7 ಖಾಲಿ ನಿವೇಶನಗಳು, ಗದಗ ಕಳಸಾಪೂರದಲ್ಲಿ 2 ಖಾಲಿ ನಿವೇಶನಗಳು, 583 ಗ್ರಾಂ ಚಿನ್ನಾಾಭರಣ, 8.128 ಕೆ.ಜಿ. ಬೆಳ್ಳಿ, 21 ಎಕರೆ ಕೃಷಿ ಜಮೀನು, 1 ದ್ವಿಚಕ್ರ ವಾಹನ, 2 ಕಾರುಗಳು, 4.98 ಲಕ್ಷ ನಗದು, 10 ವಿಮಾ ಪಾಲಿಸಿಗಳು, ಉಳಿತಾಯ ಖಾತೆ ಹಾಗೂ ಠೇವಣಿಗಳಲ್ಲಿ 25 ಲಕ್ಷ ರೂ., 5 ವಿವಿಧ ದೇಶಗಳ ಕರೆನ್ಸಿಗಳು, 5 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

7. ಗೋಪಿನಾಥ್ ಎನ್. ಮಾಲಜಿ, ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ, ವಿಜಯಪುರ: ವಿಜಯಪುರ ಶ್ರೀನಗರ ಉತ್ತರ ಕಾಲೋನಿಯಲ್ಲಿ 1 ವಾಸದ ಮನೆ, ವಿಜಯಪುರ ನಗರದ ವಿವಿಧ ಬಡಾವಣೆಗಳಲ್ಲಿ 8 ನಿವೇಶನ, 417 ಗ್ರಾಾಂ ಚಿನ್ನಾಾಭರಣ, 6.600 ಕೆ.ಜಿ. ಬೆಳ್ಳಿ, ಬಾಗಲಕೋಟೆ ತಾಲೂಕು ಹೊನ್ನಕಟ್ಟಿ ಗ್ರಾಮದಲ್ಲಿ 1 ಫಾರ್ಮ್ ಹೌಸ್, 41.04 ಎಕರೆ ಕೃಷಿ ಜಮೀನು, 1 ದ್ವಿಚಕ್ರ ವಾಹನ, 2 ಕಾರುಗಳು, 3.08 ಲಕ್ಷ ನಗದು, 22 ಲಕ್ಷ ಬೆಲೆಬಾಳುವ ವಿಮಾ ಪಾಲಿಸಿಗಳು, ಬ್ಯಾಂಕ್ ಉಳಿತಾಯ ಹಾಗೂ ಠೇವಣಿಗಳು ಸೇರಿ ಒಟ್ಟು 9.46 ಕೋಟಿ ರೂ., ಮ್ಯೂಚುವಲ್ ಫಂಡ್‌ನಲ್ಲಿ ಸುಮಾರು 1.31 ಕೋಟಿ ರೂ., ಒಂದು ಬ್ಯಾಂಕ್ ಲಾಕರ್, 10 ಲಕ್ಷ ಬೆಲೆಬಾಳುವ ಗೃಹೋಪಯೊಗಿ ವಸ್ತುಗಳು

8. ಶಿವಾನಂದ ಪಿ.ಶರಣಪ್ಪ ಕೇದಗಿ, ಬಾದಾಮಿ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ), ಬಾಗಲಕೋಟೆ: ಬಾಗಲಕೋಟೆ ನವನಗರದಲ್ಲಿ 1 ವಾಸದ ಮನೆ, ವಿಜಯಪುರದ ವಿವಿಧ ಬಡಾವಣೆಗಳಲ್ಲಿ 4 ಖಾಲಿ ನಿವೇಶನ, ಧಾರವಾಡ ನಗರದ ವಿವಿಧ ಬಡಾವಣೆಗಳಲ್ಲಿ 2 ಖಾಲಿ ನಿವೇಶನ, ಬಾಗಲಕೋಟೆ ನವನಗರದಲ್ಲಿ 1 ಎಲೆಕ್ಟ್ರಿಕ್ ಮಳಿಗೆ, 1.37 ಕೆ.ಜಿ. ಚಿನ್ನಾಭರಣ, 15.197 ಕೆ.ಜಿ. ಬೆಳ್ಳಿ, ಸಿಂದಗಿಯ ಮಲಗಾಣ ಗ್ರಾಾಮದಲ್ಲಿ 30 ಎಕರೆ ಕೃಷಿ ಜಮೀನು, 3 ದ್ವಿಚಕ್ರ ವಾಹನ, 2 ಕಾರುಗಳು, 1 ಮಹೀಂದ್ರಾ ಟ್ರೈಲರ್, 17.28 ಲಕ್ಷ ನಗದು, 16.5 ಲಕ್ಷ ಠೇವಣಿ, ಚಾಲ್ತಿ ಖಾತೆಯಲ್ಲಿ 1.46 ಕೋಟಿ ರೂ., 9 ಸಾವಿರ ರೂ. ಹಳೆಯ ನೋಟುಗಳ ನಗದು, 7.7 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

9. ಹೆಚ್.ಎನ್. ಬಾಲಕೃಷ್ಣ ಗೌಡ, ಪೊಲೀಸ್ ಇನ್‌ಸ್‌‌ಪೆಕ್ಟರ್, ವಿಜಯನಗರ ಠಾಣೆ, ಮೈಸೂರು: ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ 2 ವಾಸದ ಮನೆ, ಮೈಸೂರು ನಗರ ಆಲನಹಳ್ಳಿಯಲ್ಲಿ 1 ನಿವೇಶನ, 299 ಗ್ರಾಂ ಚಿನ್ನಾಾಭರಣ, 2.100 ಕೆ.ಜಿ. ಬೆಳ್ಳಿ, 8.2 ಎಕರೆ ಕೃಷಿ ಜಮೀನು, 1 ದ್ವಿಚಕ್ರ ವಾಹನ, 35 ಸಾವಿರ ನಗದು, ವಿವಿಧ ಬ್ಯಾಾಂಕ್‌ಗಳಲ್ಲಿ 3 ಉಳಿತಾಯ ಖಾತೆಗಳು, 6.33 ಲಕ್ಷ ರು. ಮೌಲ್ಯದ ಗೃಹೋಪಯೋಗಿ ವಸ್ತುಗಳು.

10. ಚೆಲುವರಾಜ್, ಅಬಕಾರಿ ಇನ್ಸ್​​‌ಪೆಕ್ಟರ್, ಚಾಮರಾಜನಗರ: ಮೈಸೂರು ನಗರದ ಅಯೋಧ್ಯ ನಗರದಲ್ಲಿ 1 ವಾಸದ ಮನೆ, ರಾಮನಗರ ವಿನಾಯಕ ನಗರದಲ್ಲಿ 1 ವಾಸದ ಮನೆ, ಅರ್ಕೇಶ್ವರ ಕಾಲೋನಿಯಲ್ಲಿ 1 ವಾಸದ ಮನೆ, ಮೈಸೂರಿನಲ್ಲಿ 1 ನಿವೇಶನ, ರಾಮನಗರದಲ್ಲಿ 1 ನಿವೇಶನ, 650 ಗ್ರಾಾಂ ಚಿನ್ನಾಾಭರಣ, 1.127 ಕೆ.ಜಿ. ಬೆಳ್ಳಿಿ, 4 ದ್ವಿಿಚಕ್ರ ವಾಹನ, 2 ಕಾರು, 11,800 ನಗದು, 5 ವಿಮಾ ಪಾಲಿಸಿಗಳು, 12 ಲಕ್ಷ ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು.

11. ಮಂಜುನಾಥ್, ಉಪವಿಭಾಗಾಧಿಕಾರಿ, ರಾಮನಗರ: ಬೆಂಗಳೂರಿನ ಬ್ಯಾಟರಾಯನಪುರದಲ್ಲಿ 4 ಅಂತಸ್ತಿನ 1 ವಾಸದ ಮನೆ, ಸುಗ್ಗಘಟ್ಟದಲ್ಲಿ 2 ಖಾಲಿ ನಿವೇಶನ, ಯಲಹಂಕ ಬ್ಯಾಟರಾಯನಪುರದಲ್ಲಿ 7 ಬ್ಯಾಟ್‌ಮಿಂಟನ್ ಕೋರ್ಟ್‌ಗಳು, 710 ಗ್ರಾಂ ಚಿನ್ನಾಭರಣ, 3.5 ಕೆ.ಜಿ ಬೆಳ್ಳಿ, ಯಲಹಂಕದಲ್ಲಿ 1 ಫಾರ್ಮ್ ಹೌಸ್, 16 ಗುಂಟೆ ಜಮೀನು, ದೊಡ್ಡಬಳ್ಳಾಪುರದಲ್ಲಿ 1.29 ಎಕರೆ ಕೃಷಿ ಜಮೀನು, 3 ದ್ವಿಚಕ್ರ ವಾಹನ, 5 ಕಾರು, 19 ಲಕ್ಷ ನಗದು, ಎಸ್.ಬಿ. ಖಾತೆಯಲ್ಲಿ 60 ಲಕ್ಷ ರೂ. ದೊರೆತಿವೆ.

12. ಎ. ಶ್ರೀನಿವಾಸ್, ವ್ಯವಸ್ಥಾಪಕ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು: ಬೆಂಗಳೂರು ನಗರ ಬನಶಂಕರಿಯಲ್ಲಿ 1 ವಾಸದ ಮನೆ, 1 ದ್ವಿಚಕ್ರ ವಾಹನ, 322 ಗ್ರಾಾಂ ಚಿನ್ನಾಭರಣ, 1.7 ಕೆ.ಜಿ. ಬೆಳ್ಳಿ ತುಮಕೂರಿನ ಕೌತಮಾರನಹಳ್ಳಿ ಗ್ರಾಮದಲ್ಲಿ 1 ಪಾಲಿ ಹೌಸ್, 2.95 ಲಕ್ಷ ನಗದು, 1 ಲಕ್ಷ ಮೊತ್ತದ ವಿಮಾ ಪಾಲಿಸಿ, ಬ್ಯಾಂಕ್ ಉಳಿತಾಯ ಖಾತೆಯಲ್ಲಿ 26,01,426 ರು., 25 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ.

13. ದಯಾಳು ಸುಂದರ್‌ರಾಜ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಮೆಸ್ಕಾಂ, ಮಂಗಳೂರು: ಮಂಗಳೂರು ನಗರದಲ್ಲಿ 1 ವಾಸದ ಮನೆ, ಮೈಸೂರಿನ ಶ್ರೀರಾಮಪುರದಲ್ಲಿ 1 ವಾಸದ ಮನೆ, 1 ಖಾಲಿ ನಿವೇಶನ, ಕೊಪ್ಪಲೂರು ಗ್ರಾಮದಲ್ಲಿ 2 ನಿವೇಶನ, 1.2 ಎಕರೆ ಜಮೀನು, ಮಂಗಳೂರು ನಗರ ಕದ್ರಿ ಕಂಬಳದಲ್ಲಿ 1 ಫ್ಲಾಟ್, 339 ಗ್ರಾಂ ಚಿನ್ನಾಭರಣ, 3 ಕೆ.ಜಿ. ಬೆಳ್ಳಿ 2 ದ್ವಿಚಕ್ರ ವಾಹನ, 1 ಕಾರು, 25,000 ನಗದು, 10 ಲಕ್ಷ ರೂ. ವಿಮಾ ಬಾಂಡ್‌ಗಳು, ಉಳಿತಾಯ ಖಾತೆಯಲ್ಲಿ 50,000 ರೂ., 4 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

14. ಡಿ.ಹೆಚ್. ಗವಿರಂಗಪ್ಪ, ಸಹಾಯಕ ಕಾರ್ಯನಿರ್ವಾಹ ಎಂಜಿನಿಯರ್, ಲೋಕೋಪಯೋಗಿ ಇಲಾಖೆ, ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ 1 ವಾಸದ ಮನೆ, 3.33 ಎಕರೆ ಕೃಷಿ ಜಮೀನು, 750 ಗ್ರಾ ಚಿನ್ನಾಭರಣ, 950 ಗ್ರಾಂ ಬೆಳ್ಳಿ, 1 ದ್ವಿಚಕ್ರ ವಾಹನ, 2 ಕಾರು, 2 ಲಕ್ಷ ನಗದು, 4 ವಿಮಾ ಪಾಲಿಸಿಗಳು, 10 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು, ವಿವಿಧ ಬ್ಯಾಂಕ್‌ಗಳಲ್ಲಿ ಉಳಿತಾಯ ಮತ್ತು ಠೇವಣಿ ದೊರೆತಿವೆ.

15. ಗಿರೀಶ್, ಸಹಾಯಕ ಎಂಜಿನಿಯರ್, ರಾಷ್ಟ್ರೀಯ ಹೆದ್ದಾಾರಿ ಉಪವಿಭಾಗ, ಕೊಪ್ಪಳ: ಕೊಪ್ಪಳ ಟೌನ್ ಶಾಮ್ ಕುಂಜ್ ಬಳಿ 1 ವಾಸದ ಮನೆ, ಬಾಗಲಕೋಟೆ ನಗರದಲ್ಲಿ ವಾಣಿಜ್ಯ ಸಂಕೀರ್ಣ, 100 ಗ್ರಾಾಂ ಚಿನ್ನಾಾಭರಣ, 1.5 ಕೆ.ಜಿ. ಬೆಳ್ಳಿ, 4 ದ್ವಿಚಕ್ರ ವಾಹನ, 1 ಕಾರು, 5,41,510 ನಗದು.

16. ಅಶೋಕ ರೆಡ್ಡಿ ಪಾಟೀಲ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕೃಷ್ಣ ಭಾಗ್ಯ ಜಲ ನಿಗಮ, ರಾಯಚೂರು: ರಾಯಚೂರು ಟೌನ್‌ನ ಬಸವೇಶ್ವರನಗರದಲ್ಲಿನ 1 ವಾಸದ ಮನೆ, ಕದರಾಪುರದಲ್ಲಿ ನಿರ್ಮಾಣ ಹಂತದಲ್ಲಿರುವ 1 ವಾಸದ ಮನೆ, ಜತೆಗೆ 1 ವಾಸದ ಮನೆ, ಸೈದಾಪುರ ಗ್ರಾಮದಲ್ಲಿ 2 ಖಾಲಿ ನಿವೇಶನ, ರಾಯಚೂರು ನಗರ ಕಲ್ಲೂರು ಕಾಲೋನಿಯ ಅಪಾರ್ಟ್‌ಮೆಂಟ್‌ನಲ್ಲಿ 1 ಫ್ಲ್ಯಾಟ್, 830 ಗ್ರಾಂ ಚಿನ್ನಾಭರಣ, 950 ಗ್ರಾಾಂ ಬೆಳ್ಳಿ, 22 ಎಕರೆ ಕೃಷಿ ಜಮೀನು, 2 ದ್ವಿಚಕ್ರ ವಾಹನ, 1 ಕಾರು, 20.76 ಲಕ್ಷ ನಗದು.

17. ಮಹೇಶ್ವರಪ್ಪ, ಜಿಲ್ಲಾ ಪರಿಸರ ಅಧಿಕಾರಿ, ದಾವಣಗೆರೆ: ದಾವಣಗೆರೆ ರಂಗನಾಥ ಬಡಾವಣೆಯಲ್ಲಿ 2 ವಾಸದ ಮನೆ, ಬಾಡಿಗೆ ಉದ್ದೇಶದ 6 ಮನೆಗಳಿರುವ 1 ಸಣ್ಣ ಫ್ಲಾಟ್, ಶಾಮನೂರಿನಲ್ಲಿ 2 ನಿವೇಶನ, ಯರಗುಂಟೆಯಲ್ಲಿ 2 ನಿವೇಶನ, ಬೆಂಗಳೂರು ವಿಜಯನಗರದಲ್ಲಿ 2 ನಿವೇಶನ, 796 ಗ್ರಾಾಂ ಚಿನ್ನಾಾಭರಣ, 4 ಕೆ.ಜಿ. ಬೆಳ್ಳಿ 4 ಎಕರೆ ಕೃಷಿ ಜಮೀನು, 3 ದ್ವಿಚಕ್ರ ವಾಹನ, 1 ಕಾರು, 5. 59 ಲಕ್ಷ ನಗದು, 22 ವಿಮಾ ಪಾಲಿಸಿಗಳು, 75.96 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು.

18. ಕೃಷ್ಣ ಕೇಶಪ್ಪ ಆರೇರ, ಸಹಾಯಕ ಎಂಜಿನಿಯರ್, ಎಪಿಎಂಸಿ, ಹಾವೇರಿ: ಹಾವೇರಿ ಬಸವೇಶ್ವರನಗರದಲ್ಲಿ 1 ವಾಸದ ಮನೆ, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಡೊಳ್ಳೇಶ್ವರದಲ್ಲಿ 2 ವಾಸದ ಮನೆ, ಹಾವೇರಿ ನಗರ ಚೌಡೇಶ್ವರಿ ನಗರದಲ್ಲಿ 1 ಖಾಲಿ ನಿವೇಶನ, 750 ಗ್ರಾಾಂ ಚಿನ್ನಾಭರಣ, 2.5 ಕೆ.ಜಿ. ಬೆಳ್ಳಿ, 19 ಎಕರೆ ಕೃಷಿ ಜಮೀನು, 2 ದ್ವಿಚಕ್ರ ವಾಹನ, 1 ಕಾರು, 27 ವಿಮಾ ಪಾಲಿಸಿಗಳು, ವಿವಿಧ ಬ್ಯಾಂಕ್‌ಗಳಲ್ಲಿ 3 ಉಳಿತಾಯ ಖಾತೆಗಳು, 8.37 ಲಕ್ಷ ನಗದು, 48.5 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ದೊರೆತಿವೆ.

Last Updated : Mar 17, 2022, 7:29 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.