ETV Bharat / state

ಬಿಬಿಎಂಪಿ ಕಚೇರಿಗಳ ಮೇಲಿನ ಎಸಿಬಿ ದಾಳಿ: ಎಲ್ಲ ವಿಭಾಗಗಳಲ್ಲಿ ಪರಿಶೀಲನೆ - ಬಿಬಿಎಂಪಿ ಕಚೇರಿಗಳ ಮೇಲಿನ ಎಸಿಬಿ ದಾಳಿ

ಎಸಿಬಿ ಅಧಿಕಾರ ತಂಡ ಇಂದು ಬಿಬಿಎಂಪಿ ಕಚೇರಿಗಳ ಮೇಲೆ ದಾಳಿ ನಡೆಸಿ ಎಲ್ಲ ವಿಭಾಗಗಳಲ್ಲಿ ಲೆಕ್ಕ ಪತ್ರಗಳ ಪರಿಶೀಲನೆ ನಡೆಸಿದೆ.

ACB Raid on BBMP Offices
ಬಿಬಿಎಂಪಿ ಕಚೇರಿಗಳ ಮೇಲಿನ ಎಸಿಬಿ ದಾಳಿ
author img

By

Published : Feb 25, 2022, 7:25 PM IST

ಬೆಂಗಳೂರು: ಬಿಡಿಎ ಕಚೇರಿ ಮೇಲೆ ದಾಳಿ ನಡೆಸಿ ಭ್ರಷ್ಟಾಚಾರವನ್ನು ಬಯಲಿಗೆಳೆದು ಸಂಚಲನ ಮೂಡಿಸಿದ್ದ ಬೆನ್ನಲ್ಲೇ ಎಸಿಬಿ ಇಂದು ಬಿಬಿಎಂಪಿ ಕಚೇರಿಗಳ ಮೇಲೆ ಮುಗಿಬಿದ್ದಿದೆ. ಎಲ್ಲ ಆಯಾಮಗಳಲ್ಲಿ ಪರಿಶೀಲನೆ ಮುಂದುವರೆದಿದೆ.

ಬಿಬಿಎಂಪಿ ಕಚೇರಿಗಳ ಮೇಲಿನ ಎಸಿಬಿ ದಾಳಿ

ಇಂದು ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ ಕಚೇರಿ ಸೇರಿದಂತೆ ನಗರ ಯೋಜನೆ, ಕೇಂದ್ರ ಕಚೇರಿ, ಟಿಡಿಆರ್‌, ವಲಯ ಕಚೇರಿ, ಜಂಟಿ ಆಯುಕ್ತರ ಕಚೇರಿ, ರೆವಿನ್ಯೂ ಕಚೇರಿ ಸೇರಿದಂತೆ 27 ಕಡೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ ಎಂದು ಎಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

ಡಿವೈಎಸ್‌ಪಿ, ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನೊಳಗೊಂಡ 200 ಅಧಿಕಾರಿಗಳನೊಳಗೊಂಡ ವಿವಿಧ ತಂಡಗಳು ಎಂಟು ವಲಯಗಳ ಜಂಟಿ ಆಯುಕ್ತರ ಕಚೇರಿ, ಬಿಬಿಎಂಪಿಗೆ ಸೇರಿದ ರೆವಿನ್ಯೂ ಕಚೇರಿ, ನಗರ ಯೋಜನೆ ವಿಭಾಗ, ಜಾಹೀರಾತು, ಟಿಡಿಆರ್, ಆರೋಗ್ಯ ವಿಭಾಗ, ರಸ್ತೆ ಮತ್ತು ಮೂಲ ಸೌಕರ್ಯ (ರಾಜ ಕಾಲುವೆ) ವಿಭಾಗಗಳ ಮೇಲೆ ದಾಳಿ ಮಾಡಿ ಶೋಧ ನಡೆಸಿದೆ.

ಈ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ತಮಗೆ ವಹಿಸಿಕೊಟ್ಟಿರುವ ಮತ್ತು ನಿಯಂತ್ರಣದಲ್ಲಿರುವ ಸರ್ಕಾರಿ ಸ್ವತ್ತನ್ನು ದುರುಪಯೋಗಪಡಿಸಿಕೊಂಡು ಮಧ್ಯವರ್ತಿಗಳು, ಫಲಾನುಭವಿಗಳು ಹಾಗೂ ಖಾಸಗಿ ವ್ಯಕ್ತಿಗಳನ್ನು ಸೇರಿಕೊಂಡು ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ.

ಅಕ್ರಮ ಲಾಭ ಮಾಡಿಕೊಳ್ಳುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿರುವ ಕುರಿತು ಮೌಖಿಕ ಮತ್ತು ಲಿಖಿತ ದೂರುಗಳು ಬಂದ ಹಿನ್ನೆಲೆಯಲ್ಲಿ ಎಸಿಬಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ನಗರದ 11 ಸ್ಥಳಗಳ 27 ಕಡೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಸಂಜೆಯ ನಂತರವೂ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರೆದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಸೀಮಂತ ಕಾರ್ಯಕ್ರಮದಲ್ಲಿ ಸಿಲಿಂಡರ್ ಸ್ಫೋಟ:12 ಮಕ್ಕಳು ಸೇರಿದಂತೆ 17 ಜನರಿಗೆ ಗಾಯ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.