ETV Bharat / state

ಎಸಿಬಿಯಿಂದ ಲೋಕಾಯುಕ್ತಕ್ಕೆ 352 ಪ್ರಕರಣ ಹಸ್ತಾಂತರ - ಈಟಿವಿ ಭಾರತ ಕನ್ನಡ

ಎಸಿಬಿಯಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆಯಿದೆ. ತನಿಖಾ ಹಂತದಲ್ಲಿರುವ ಪ್ರಕರಣಗಳು ಹಾಗೆಯೇ ಇದ್ದವು. ಇದೀಗ ಲೋಕಾಯುಕ್ತಕ್ಕೆ ತನಿಖಾ ಫೈಲ್​ಗಳು ವರ್ಗಾವಣೆಯಾಗಿರುವುದರಿಂದ ಮುಂದಿನ ದಿನದಲ್ಲಿ ಕನ್ವಿಕ್ಷನ್ ರೇಟ್ ಕೂಡ ಹೆಚ್ಚಾಗುವ ಸಾಧ್ಯತೆಯಿದೆ.

acb-handed-over-352-cases-to-lokayukta
ಎಸಿಬಿಯಿಂದ ಲೋಕಾಯುಕ್ತಕ್ಕೆ 352 ಪ್ರಕರಣ ಹಸ್ತಾಂತರ
author img

By

Published : Oct 13, 2022, 10:54 PM IST

ಬೆಂಗಳೂರು: ಬೆಂಗಳೂರು ನಗರ ವಿಭಾಗದಲ್ಲಿ ದಾಖಲಾಗಿದ್ದ ಪ್ರಮುಖ ಪ್ರಕರಣ ಲೋಕಾಯುಕ್ತಕ್ಕೆ ಎಸಿಬಿ‌ ಹಸ್ತಾಂತರ ಮಾಡಿದ್ದು, ಇನ್ನೊಂದು ವಾರದಲ್ಲಿ ಎಲ್ಲ ಕೇಸ್ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಲೋಕಾಯುಕ್ತಕ್ಕೆ ಅಧಿಕಾರ ಬಂದ ಮೇಲೆ ಇದೀಗ ಎಸಿಬಿಯು ನಗರ ಘಟಕದಲ್ಲಿರುವ 352 ತನಿಖಾ ಹಂತದ ಕಡತ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿದೆ. ಅದರಲ್ಲೂ ಪ್ರಮುಖ ಪ್ರಕರಣಗಳಾದ ಶಾಸಕ ಜಮೀರ್ ಅಹಮ್ಮದ್ ಮನೆ ಮೇಲೆ ದಾಳಿ, ಬಿಬಿಎಂಪಿ ಕಚೇರಿಯ ಮೇಲೆ ದಾಳಿ, ಬಿಡಿಎ ಕಚೇರಿಯ ಮೇಲೆ ದಾಳಿ ಸೇರಿದಂತೆ ಪ್ರಮುಖ 37 ಕಡತಗಳು ಇದೀಗ ಲೋಕಾಯುಕ್ತ ಕೈ ಸೇರಿವೆ.

ಇದೀಗ ಪ್ರಮುಖ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿರುವ ಲೋಕಾಯುಕ್ತ ಅಧಿಕಾರಿಗಳು ಸಂಬಂಧಪಟ್ಟ ವ್ಯಕ್ತಿಗಳಿಗೆ ಅಗತ್ಯ ದಾಖಲೆ ಒದಗಿಸುವಂತೆ ನೋಟಿಸ್ ನೀಡಲು‌ ಮುಂದಾಗಿದ್ದಾರೆ. ಕಳೆದ ಒಂದು ವಾರದಿಂದಲೂ ಸತತವಾಗಿ ಫೈಲ್​ಗಳು ವರ್ಗಾವಣೆಯಾಗಿದ್ದು, ಎಲ್ಲ ಫೈಲ್​ಗಳ ಮೇಲುಸ್ತುವಾರಿಯನ್ನು ಲೋಕಾಯುಕ್ತ ಎಸ್​​ಪಿ ಅಶೋಕ್ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.

ಎಸಿಬಿಯಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆಯಿದೆ. ತನಿಖಾ ಹಂತದಲ್ಲಿರುವ ಪ್ರಕರಣಗಳು ಹಾಗೆಯೇ ಇದ್ದವು. ಇದೀಗ ಲೋಕಾಯುಕ್ತಕ್ಕೆ ತನಿಖಾ ಫೈಲ್​ಗಳು ವರ್ಗಾವಣೆ ಆಗಿರುವುದರಿಂದ ಮುಂದಿನ ದಿನದಲ್ಲಿ ಕನ್ವಿಕ್ಷನ್ ರೇಟ್ ಕೂಡ ಹೆಚ್ಚಾಗುವ ಸಾಧ್ಯತೆಯಿದೆ.

ಲೋಕಾಯುಕ್ತ ಅಧಿಕಾರಿಗಳ ಕೈ ಸೇರಿರುವ ಕಡತಗಳ ಪ್ರತಿ ವಿಷಯವನ್ನು ಆಳವಾಗಿ ಅಧ್ಯಯನ ಮಾಡಿ ಇದೀಗ ತ್ವರಿತಗತಿಯಲ್ಲಿ ಆರೋಪಿಗಳನ್ನು ಜೈಲಿಗಟ್ಟಿ ಶಿಕ್ಷೆ ಕೊಡಿಸುವಂತಹ ಕೆಲಸಕ್ಕೆ‌ ಕೈ ಹಾಕಿದ್ದಾರೆ. ಒಟ್ಟಿನಲ್ಲಿ ಎಸಿಬಿಯಿಂದ ನೂರಾರು ಕೇಸುಗಳು ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದ್ದು, ಮುಂದಿನ ದಿನದಲ್ಲಿ ಪ್ರಕರಣಗಳು ಯಾವ ಹಂತ ತಲುಪಲಿವೆ ಎಂಬುದನ್ನು ಕಾದುನೋಡಬೇಕು.

ಇದನ್ನೂ ಓದಿ: ನವೆಂಬರ್​​ನಲ್ಲಿ ಸಿಗಲಿದೆ ರಾಜ್ಯದ 60 ಸಾವಿರ ಜನರಿಗೆ ಸರ್ಕಾರದ ಬಂಪರ್ ಕೊಡುಗೆ!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.