ETV Bharat / state

ಕೊರೊನಾ ನಿರ್ವಹಣೆಯ ಆಡಳಿತ ಯಂತ್ರದಲ್ಲಿ ಬಿಜೆಪಿ ಶಾಸಕರು - ಮಂತ್ರಿಗಳ ಹಸ್ತಕ್ಷೇಪ - ಶರತ್ ಖಾದ್ರಿ ಆಕ್ರೋಶ - ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಸುದ್ದಿಗೋಷ್ಟಿ

ಸರ್ಕಾರವು ಯಾವುದೇ ರಾಜಕಾರಣಿಯು ಸರ್ಕಾರದ ಆಡಳಿತ ಯಂತ್ರದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವುದು ಶಿಕ್ಷಾರ್ಹ ಅಪರಾಧ ಎಂಬ ಆದೇಶವನ್ನು ಹೊರಡಿಸಿ, ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

sharat
sharat
author img

By

Published : May 8, 2021, 9:05 PM IST

ಬೆಂಗಳೂರು : ಕೊರೊನಾ ಎರಡನೇ ಅಲೆಯ ಮಹಾ ದುರಂತದ ಸಂದರ್ಭದಲ್ಲಿ ಕಳೆದ ಕೆಲವು‌ ದಿನಗಳಿಂದ ಬಿಜೆಪಿ ಶಾಸಕರು ಹಾಗೂ ಮಂತ್ರಿಗಳು ರಾಜ್ಯದ ಕೊರೊನಾ ನಿರ್ವಹಣೆಯ ಆಡಳಿತ ಯಂತ್ರದಲ್ಲಿ ಹಸ್ತಕ್ಷೇಪವನ್ನು ನಡೆಸಿರುವುದು ಸ್ಪಷ್ಟವಾಗಿದೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಹೇಳಿದ್ರು.

ಕೆಲ ದಿನಗಳ ಹಿಂದೆ ಕಲ್ಬುರ್ಗಿ ಸಂಸದ ಉಮೇಶ್ ಜಾಧವ್ ರಾತ್ರೋ ರಾತ್ರಿ ಬೆಂಗಳೂರಿನ ಔಷಧ ನಿಯಂತ್ರಣ ಇಲಾಖೆಯ ವಾರ್ ರೂಮ್ ಗೆ ನುಗ್ಗಿ ತಮಗೆ ಬೇಕಾದಷ್ಟು ರೆಮ್ಡೆಸಿವಿರ್ ಔಷಧಿಗಳನ್ನು ತೆಗೆದುಕೊಂಡು ಹೋಗಿದ್ದರು.. ಇದೇ ರೀತಿ ಚಾಮರಾಜನಗರಕ್ಕೆ ಆಮ್ಲಜನಕ ಪೂರೈಕೆಯ ವಿಚಾರದಲ್ಲಿ ಮೈಸೂರಿನ ಜಿಲ್ಲಾಧಿಕಾರಿಗಳೊಂದಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಸಾಕಷ್ಟು ಮಾತನಾಡಿರುವುದು ಹಾಗೂ ಹಸ್ತಕ್ಷೇಪ ನಡೆಸಿರುವುದು ಅವರ ಹೇಳಿಕೆಗಳಲ್ಲಿ ತಿಳಿದು ಬರುತ್ತದೆ.. ಇದರ ಪರಿಣಾಮವಾಗಿ 28ಕ್ಕೂ ಹೆಚ್ಚು ಅಮಾಯಕರು ಬಲಿಯಾಗಿರುವುದು ಕಣ್ಣ ಮುಂದೆ ಇದೆ..ನಿನ್ನೆ ಮಂಡ್ಯದ ಮಂತ್ರಿ ನಾರಾಯಣಗೌಡ ರಾತ್ರೋರಾತ್ರಿ ಮೈಸೂರಿನ ಆಮ್ಲಜನಕ ತಯಾರಿಕಾ ಘಟಕಕ್ಕೆ ನುಗ್ಗಿ ತಮಗೆ ಬೇಕಾದಷ್ಟು ಸಿಲಿಂಡರ್‌ಗಳನ್ನು ಪೊಲೀಸರ ಬೆಂಗಾವಲಿನ ಸಮೇತ ಹೊತ್ತೊಯ್ದ ಘಟನೆ ಈಗಷ್ಟೇ ತಿಳಿದು ಬಂದಿದೆ.. ಈ ಬಗ್ಗೆ ಮೈಸೂರಿನ ಸಂಸದ ಪ್ರತಾಪ್ ಸಿಂಹ ಇನ್ನು ಮುಂದೆ ನಾವುಗಳು ಹಾದಿಬೀದಿಯಲ್ಲಿ ಹೊಡೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ.

ಇದೇ ರೀತಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ವಾರ್ ರೂಮ್ ಗೆ ನೇರವಾಗಿ ನುಗ್ಗಿ ತಮಗೆ ಬೇಕಾದವರಿಗೆ ಬೆಡ್‌ಗಳನ್ನು ಬ್ಲಾಕ್ ಮಾಡುವ ದಂಧೆಯಲ್ಲಿ ತೊಡಗಿಕೊಂಡಿರುವುದು ಪ್ರತಿದಿನ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇದೆ..ಇದೇ ಹಾದಿಯಲ್ಲಿ ಬೆಂಗಳೂರಿನ ಪ್ರಮುಖ ಬಿಜೆಪಿ ಮಂತ್ರಿಗಳು ಸಹ ನಡೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.

ಈ ಎಲ್ಲಾ ಘಟನೆಗಳನ್ನು ಗಮನಿಸಿದಾಗ ಬಿಜೆಪಿಯ ಮಂತ್ರಿಗಳು ಶಾಸಕರುಗಳ ಆಡಳಿತ ಯಂತ್ರದಲ್ಲಿನ ಹಸ್ತಕ್ಷೇಪ ಧಮ್ಕಿ ಬೆದರಿಕೆ ಮುಂತಾದವುಗಳಿಂದಾಗಿ ಕೊರೊನಾ ಸಾವು ನೋವುಗಳಲ್ಲಿ ತೀವ್ರ ಪರಿಣಾಮ ಬೀರುತ್ತಿದೆ.. ರಾಜ್ಯದಲ್ಲಿ ಇಂದು ಅಮಾಯಕ 592 ಜನ ಬಲಿಯಾಗಿದ್ದು, ತೀವ್ರ ಕಳವಳವನ್ನು ಉಂಟು ಮಾಡುತ್ತಿದೆ.. ಈ ರೀತಿಯ ರಾಜಕಾರಣಿಗಳ ಹಸ್ತಕ್ಷೇಪಗಳಿಂದಾಗಿ ರೆಮ್ಡೆಸಿವಿರ್​ ಇತ್ಯಾದಿ ಔಷಧಗಳು, ಆಕ್ಸಿಜನ್ ಗಳು ಇಂದು ಕಾಳಸಂತೆ ಕೋರರ ಪಾಲಾಗುತ್ತಿದೆ.

ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳನ್ನ ಕಾರ್ಯನಿರ್ವಹಿಸಲು ಬಿಟ್ಟು ಅವರನ್ನು ಹೆದರಿಸಿ ಬೆದರಿಸಿ ತಮ್ಮ ರಾಜಕಾರಣಕ್ಕೆ ಈ ಮಹಾ ದುರಂತ ಸಮಯವನ್ನು ಉಪಯೋಗಿಸಿಕೊಳ್ಳುತ್ತಿರುವುದು ಬಿಜೆಪಿಗರ ದಿವಾಳಿತನದ ಸಂಕೇತವಾಗಿದೆ.. ಕಳೆದ ಬಾರಿಯೂ ಸಹ ಇದೇ ರೀತಿ ಕಾರ್ಮಿಕ ಇಲಾಖೆಯ ಆಹಾರದ ಕಿಟ್‌ಗಳ ಮೇಲೆ ತಮ್ಮ ನಾಮ ಫಲಕಗಳನ್ನು ಹಾಕಿಕೊಂಡು ವಿತರಣೆ ಮಾಡಿದ್ದಾರೆ..‌ ಈ ಬಾರಿಯೂ ತಮ್ಮ ರಾಜಕೀಯ ತೆವಲಿಗಾಗಿ ಈ ರೀತಿಯ ಚಿಲ್ಲರೆ ಕೆಲಸಗಳಲ್ಲಿ ತೊಡಗಿರುವುದು ದುರದೃಷ್ಟಕರ ಸಂಗತಿ.

ಸರ್ಕಾರವು ಈ ಕೂಡಲೇ ಯಾವುದೇ ರಾಜಕಾರಣಿಯು ಸರ್ಕಾರದ ಆಡಳಿತ ಯಂತ್ರದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವುದು ಶಿಕ್ಷಾರ್ಹ ಅಪರಾಧ ಎಂಬ ಆದೇಶವನ್ನು ಹೊರಡಿಸಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.