ಬೆಂಗಳೂರು: ಆಮ್ ಆದ್ಮಿ ಪಕ್ಷದ ಸ್ಥಳೀಯ ನಾಯಕರು ಸಂಘಟನೆಗೆ ಶ್ರಮಿಸುತ್ತಿದ್ದಾರೆ. ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿ ಅಧಿಕಾರ ಹಿಡಿದು ಬೆಂಗಳೂರಿನ ಅಭಿವೃದ್ಧಿ ಮಾಡಲಿದ್ದಾರೆ ಎಂದು ಡೆಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದರು.
ನಗರದ ಶಾಂತಿನಗರ ಬಡಾವಣೆಯ ಬಸಪ್ಪ ರಸ್ತೆಯಲ್ಲಿನ ಆಮ್ ಆದ್ಮಿ ಕ್ಲಿನಿಕ್ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಕೇವಲ ಸ್ಪರ್ಧೆಗಾಗಿ ಚುನಾವಣೆಗೆ ಇಳಿಯುವುದಿಲ್ಲ, ಗೆಲ್ಲುವುದಕ್ಕಾಗಿ ಸ್ಪರ್ಧಿಸುತ್ತೇವೆ ಎಂದರು.
ಇನ್ನು ದೆಹಲಿಯಲ್ಲಿ ಏರುತ್ತಿರುವ ಕೊರೊನಾ ಪ್ರಕರಣಗಳ ಕುರಿತು ಉತ್ತರಿಸಿದ ಅವರು, ಹೆಚ್ಚಿನ ಸಮುದಾಯ ಮಹಾಮಾರಿಗೆ ತುತ್ತಾಗುತ್ತಿದ್ದಾರೆ. ಜೊತೆಗೆ ಸರ್ಕಾರ ದೇಶದ ಸರಾಸರಿ 3 ಗಿಂತ 4 ಪಟ್ಟು ಹೆಚ್ಚಿನ ಟೆಸ್ಟಿಂಗ್ ನಡೆಸುತ್ತಿರುವ ಹಿನ್ನಲೆ ಹೆಚ್ಚಿನ ಪ್ರಕರಣಗಳು ಕಂಡುವರುತ್ತಿವೆ ಎಂದು ಸಮರ್ಥಿಸಿಕೊಂಡರು.