ETV Bharat / state

ಸಿಲಿಕಾನ್ ಸಿಟಿಯಲ್ಲಿ ವ್ಹೀಲಿಂಗ್ ಹಾವಳಿ: ಪುಂಡನ ಶೋಕಿಗೆ ಯುವತಿ ಸಾಥ್ - ಪುಂಡನ ಶೋಕಿಗೆ ಯುವತಿ ಸಾಥ್

ಬೆಂಗಳೂರಲ್ಲಿ ಬೈಕ್​ ವ್ಹೀಲಿಂಗ್​ ಶೋಕಿ ಹೆಚ್ಚಾಗಿದೆ. ಸೈಯ್ಯದ್ ಎಂಬಾತ ವ್ಹೀಲಿಂಗ್ ಮಾಡಿ ವಿಡಿಯೋವನ್ನು ದೊಡ್ಡ ಸಾಧನೆ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಅಪ್​​ಲೋಡ್ ಮಾಡಿದ್ದಾನೆ. ಯುವತಿ ಜೊತೆ ವ್ಹೀಲಿಂಗ್ ಮಾಡಿದ ಯುವಕನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.

ಬೆಂಗಳೂರಲ್ಲಿ ಬೈಕ್​ನಲ್ಲಿ ವ್ಹೀಲಿಂಗ್
ಬೆಂಗಳೂರಲ್ಲಿ ಬೈಕ್​ನಲ್ಲಿ ವ್ಹೀಲಿಂಗ್
author img

By

Published : Aug 22, 2022, 3:03 PM IST

Updated : Aug 22, 2022, 3:19 PM IST

ಬೆಂಗಳೂರು: ನಗರದಲ್ಲಿ ಪೊಲೀಸರು ಎಷ್ಟೇ ಕಠಿಣ ಕ್ರಮ ಕೈಗೊಂಡಿದ್ದರೂ ಸಹ ಕೆಲವರು ಬುದ್ಧಿ ಕಲಿಯುತ್ತಿಲ್ಲ. ಅದರಲ್ಲೂ ಬೈಕ್​ ವ್ಹೀಲಿಂಗ್ ಶೋಕಿ ಮಾಡುವವರ ಉಪಟಳ ಹೆಚ್ಚುತ್ತಲೇ ಇದೆ. ವಾಹನ ಸವಾರರಿಗೆ ಎಷ್ಟೇ ತೊಂದರೆ ಆದರೂ ಅದಕ್ಕೆ ತಲೆಕೆಡಿಸಿಕೊಳ್ಳದ ಕೆಲ ಪುಂಡರು ವ್ಹೀಲಿಂಗ್​ ಕೃತ್ಯವನ್ನು ಮುಂದುವರಿಸಿದ್ದಾರೆ.

ಸೈಯದ್ ಎಂಬಾತ ವ್ಹೀಲಿಂಗ್ ಮಾಡಿ ವಿಡಿಯೋವನ್ನು ದೊಡ್ಡ ಸಾಧನೆ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಅಪ್​​ಲೋಡ್ ಮಾಡಿದ್ದಾನೆ. ಈತನ ಹುಚ್ಚಾಟಕ್ಕೆ ಯುವತಿಯೊಬ್ಬಳು ಬೈಕ್ ಹಿಂದೆ ಕೂತು ಸಾಥ್ ನೀಡಿದ್ದಾಳೆ. ನಗರದ ಜಕ್ಕೂರು ರಸ್ತೆ, ತುಮಕೂರು ರಸ್ತೆ, ನಗರದ ಹೊರವಲಯ ರಸ್ತೆ , ಬಿಇಎಲ್ ರಸ್ತೆಗಳಲ್ಲಿ ಹಾವಳಿ ನಡೆಸಿದ್ದಾರೆ.

ಇದೇ ಸೈಯ್ಯದ್ ಕೆಲ ಪುಂಡರ ಜೊತೆ ಸೇರಿ ಕೈಯಲ್ಲಿ ಡ್ರ್ಯಾಗರ್ ಹಿಡಿದು ವ್ಹೀಲಿಂಗ್ ಮಾಡಿದ್ದಾರೆ. ಇಷ್ಟೇ ಅಲ್ಲದೇ ರಸ್ತೆಯಲ್ಲಿ‌ ಹಾಕಿದ್ದ ಬ್ಯಾರಿಕೇಡ್​​​ಗಳನ್ನು ಒದ್ದು ಪುಂಡಾಟ ಆಟಾಟೋಪ ಮೆರೆದಿದ್ದಾರೆ‌. ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.

ಸಿಲಿಕಾನ್ ಸಿಟಿಯಲ್ಲಿ ವ್ಹೀಲಿಂಗ್ ಹಾವಳಿ

ಸದ್ಯ ಬೆಂಗಳೂರಲ್ಲಿ ಕೆಲ ಕಿಡಿಗೇಡಿಗಳು ಬೈಕ್ ನಲ್ಲಿ ಸುತ್ತುತ್ತ ರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಪೊಲೀಸರು ವ್ಹೀಲಿಂಗ್​ಗೆ ಬ್ರೇಕ್ ಹಾಕಲು ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ ಎಂಬುದೇ ವಿಪರ್ಯಾಸ ಎಂದು ಸಾರ್ವಜನಿಕರು ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ: ಗೋಲಿ ಆಡುವ ವಿಚಾರದಲ್ಲಿ ಗಲಾಟೆ: ಬೈಕ್, ಕಾರು ಜಖಂ

Last Updated : Aug 22, 2022, 3:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.