ETV Bharat / state

ಹೊಸ ವರ್ಷದಿಂದ ಸಿಎಂ ಸಚಿವಾಲಯದಲ್ಲಿ ಅಹವಾಲು ಸ್ವೀಕಾರಕ್ಕೆ ಒಂದೇ ಇ-ಮೇಲ್ - ವಿಧಾನ ಸೌಧ ಬೆಂಗಳೂರು

ಪ್ರಸ್ತುತ ಮುಖ್ಯಮಂತ್ರಿಗಳ ಸಚಿವಾಲಯವು 3 ಸಕ್ರಿಯ ಇ-ಮೇಲ್ ವಿಳಾಸಗಳನ್ನು ಹೊಂದಿದ್ದು, ಇದರಿಂದ ಅಹವಾಲು ಪುನರಾವರ್ತನೆಯಾಗುತ್ತಿದೆ ಹಾಗೂ ಅನಗತ್ಯ ಗೊಂದಲ ಉಂಟಾಗುತ್ತಿದೆ. ಈ ಹಿನ್ನೆಲೆ ಅಹವಾಲು ಸಲ್ಲಿಕೆ ಮತ್ತು ನಿರ್ವಹಣೆಯನ್ನು ಸರಳಗೊಳಿಸಲು ಏಕ ವಿಳಾಸವನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ.

Vidhanasouda Bangalore
ವಿಧಾನ ಸೌಧ ಬೆಂಗಳೂರು
author img

By

Published : Dec 28, 2020, 3:41 PM IST

ಬೆಂಗಳೂರು: ಮುಖ್ಯಮಂತ್ರಿ ಕಚೇರಿಗೆ ಅಹವಾಲು ಸಲ್ಲಿಕೆ ಹಾಗೂ ಸಂವಹನಕ್ಕಾಗಿ 2021ರ ಜನವರಿ 1ರಿಂದ cm.kar@nic.in ಇ-ಮೇಲ್ ಐಡಿಯನ್ನು ಮಾತ್ರ ಬಳಕೆ ಮಾಡಲಾಗುವುದು ಎಂದು ಸಿಎಂ ಸಚಿವಾಲಯ ತಿಳಿಸಿದೆ.

ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ 2020ರ ಆಗಸ್ಟ್ ತಿಂಗಳಿನಿಂದ ಇ-ಮೇಲ್ ಮೂಲಕ ಸ್ವೀಕೃತವಾಗುವ ಅಹವಾಲುಗಳನ್ನು ಇ-ಆಫೀಸ್​​ನಲ್ಲಿಯೇ ನಿರ್ವಹಿಸಲಾಗುತ್ತಿದೆ. ಪ್ರಸ್ತುತ ಮುಖ್ಯಮಂತ್ರಿಗಳ ಸಚಿವಾಲಯವು 3 ಸಕ್ರಿಯ ಇ-ಮೇಲ್ ವಿಳಾಸಗಳನ್ನು ಹೊಂದಿದ್ದು, ಇದರಿಂದ ಅಹವಾಲು ಪುನರಾವರ್ತನೆಯಾಗುತ್ತಿದೆ ಹಾಗೂ ಅನಗತ್ಯ ಗೊಂದಲ ಉಂಟಾಗುತ್ತಿದೆ.

ಈ ಹಿನ್ನೆಲೆ ಅಹವಾಲು ಸಲ್ಲಿಕೆ ಮತ್ತು ನಿರ್ವಹಣೆಯನ್ನು ಸರಳಗೊಳಿಸಲು ಏಕ ವಿಳಾಸವನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ. ಸಾರ್ವಜನಿಕರು ಈ ಬದಲಾವಣೆಯನ್ನು ಗಮನಿಸಿ, ಮುಂದಿನ ದಿನಗಳಲ್ಲಿ ತಮ್ಮ ಅಹವಾಲು ಮತ್ತು ಇತರ ಸಂವಹನವನ್ನು cm.kar@nic.in ಮೇಲ್ ಐಡಿ ಮೂಲಕವೇ ಮಾಡುವಂತೆ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.