ಬೆಂಗಳೂರು: ಏಕಕಾಲದಲ್ಲೇ ಅನ್ನನಾಳ ಕ್ಯಾನ್ಸರ್ ಹಾಗೂ ಮೂತ್ರಪಿಂಡದ ಕ್ಯಾನ್ಸರ್ ಹೊಂದಿದ್ದ 74 ವರ್ಷದ ವ್ಯಕ್ತಿಗೆ ರೋಬೋಟ್ ಸಹಾಯದ ಮೂಲಕ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಇದು ವಿಶ್ವದಲ್ಲೇ ಅಪರೂಪದ ಪ್ರಕರಣಗಳಲ್ಲಿ ಒಂದಾಗಿದೆ ಎನ್ನಲಾಗಿದೆ.
ಬಹುವಿಭಾಗಿ ವೈದ್ಯರುಗಳಾದ ಆಂಕೋಲಜಿ ಮತ್ತು ಹೆಮಟೋ ಆಂಕೋಲಾಜಿ, ಫೊರ್ಟಿಸ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ನಿರ್ದೇಶಕಿ ಡಾ.ನೀತಿ ರೈಝಾದ್, ಮೂತ್ರಶಾಸ್ತ್ರ ನಿರ್ದೇಶಕ ಡಾ. ಮೋಹನ್ ಕೇಶವಮೂರ್ತಿ, ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿ ಹಿರಿಯ ಸಲಹೆಗಾರ ಡಾ. ಮನೀಶ್ ಜೋಶಿ ತಂಡ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಮಹಾಮಾರಿ ಕ್ಯಾನ್ಸರ್ ರೋಗಕ್ಕೂ ಈ ಅಣಬೆಯೇ ಮದ್ದು.. ಔಷಧ ಲಕ್ಷಣವುಳ್ಳ ಅಣಬೆಗೆ ಇನ್ನಿಲ್ಲದ ಬೇಡಿಕೆ!
ಆಘ್ಘಾನಿಸ್ತಾನ ಮೂಲದ 74 ವರ್ಷದ ಇಳಿ ವಯಸ್ಸಿನ ವ್ಯಕ್ತಿಗೆ ಪ್ರಾರಂಭದಲ್ಲಿ ಆಹಾರ ಸೇವನೆ ಕಷ್ಟವಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಅನ್ನನಾಳದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ವಿವಿಧ ಪರೀಕ್ಷೆಗಳ ನಂತರ ಅವರಿಗೆ ಎಡ ಮೂತ್ರ ಪಿಂಡದಲ್ಲಿಯೂ ಗಡ್ಡೆಯೊಂದಿಗೆ 'ಓಸೋಪೇಜಿಲ್ ಕ್ಯಾನ್ಸರ್' ಇರುವುದು ತಿಳಿದು ಬಂದಿತ್ತು. ಅತ್ಯಂತ ಅಪಾಯಕಾರಿ ಕ್ಯಾನ್ಸರ್ ಆಗಿತ್ತು ಎಂದು ಆಸ್ಪತ್ರೆ ತಿಳಿಸಿದೆ.
ಸಾಮಾನ್ಯವಾಗಿ ಒಮ್ಮೆಲೆ ಎರಡೂ ರೀತಿಯ ಕ್ಯಾನ್ಸರ್ ಕಾಣಿಸಿಕೊಳ್ಳುವುದೇ ಅಪರೂಪದ ಪ್ರಕರಣವಾಗಿದೆ. ಎರಡು ರೀತಿಯ ಕ್ಯಾನ್ಸರ್ ಇರುವ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಮಾಡಿದರೂ ಬದುಕುಳಿಯುವ ಸಾಧ್ಯತೇ ಶೇ.90ರಷ್ಟು ಕಡಿಮೆ. ಈ ವ್ಯಕ್ತಿಗೆ ಅನ್ನನಾಳ ಹಾಗೂ ಮೂತ್ರಪಿಂಡದಲ್ಲಿ ಕ್ಯಾನ್ಸರ್ ಇದ್ದ ಕಾರಣ ಕಿಮೋರೇಡಿಯೇಷನ್ ಚಿಕಿತ್ಸೆಯಿಂದ ಪ್ರಾರಂಭಿಸಿ, ನಂತರದಲ್ಲಿ ರೋಬೋಟ್ ನೆರವಿನ ಮೂಲಕ ಏಕಕಾಲದಲ್ಲಿಯೇ ಎರಡೂ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಇದನ್ನೂ ಓದಿ: ಸ್ತನ ಕ್ಯಾನ್ಸರ್ - ಮಧುಮೇಹವಿದ್ದರೂ ಕೊರೊನಾ ಜಯಿಸಿದ 58 ವರ್ಷದ ಗಟ್ಟಿಗಿತ್ತಿ
ವಯಸ್ಸಾದ ಕಾರಣ ಇವರಿಗೆ ಒಂದು ಶಸ್ತ್ರಚಿಕಿತ್ಸೆ ನಡೆಸುವುದೇ ಅಪಾಯಕಾರಿ. ಅದರಲ್ಲೂ ಎರಡೆರಡು ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಡೆಸುವುದು ಸವಾಲಿನ ಕೆಲಸವೇ ಆಗಿತ್ತು ಎಂದು ಕ್ಯಾನ್ಸರ್ ಸಂಸ್ಥೆ ವೈದ್ಯಕೀಯ ಆಂಕೋಲಕಜಿ ಮತ್ತು ಹೆಮಟೋ ಆಂಕೋಲಜಿ ನಿರ್ದೇಶಕಡಾ.ನೀತಿ ರೈಝಾದ, ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.