ಬೆಂಗಳೂರು : ಗಣರಾಜ್ಯೋತ್ಸವದ ಅಂಗವಾಗಿ ಕುವೈತ್ ದೇಶದಿಂದ ಬೆಂಗಳೂರಿಗೆ ಆಗಮಿಸಿದ ಬಬಳಿಕ ಧ್ವಜದ ಯಾತ್ರೆ ಕೈಗೊಂಡಿದ್ದ ವ್ಯಕ್ತಿ ನಾಪತ್ತೆಯಾಗಿದ್ದು, ಇದೀಗ ಅವರ ಕುಟುಂಬ ಆತಂಕಕ್ಕೆ ಒಳಗಾಗಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ ನಸ್ರೀನ್ ತಾಜ್ ಎಂಬುವರ ಪತಿ ನೂರ್ ಮಹಮ್ಮದ್ ಶೇಕ್ ನಾಪತ್ತೆಯಾದವರು. ಈ ಸಂಬಂಧ ಗೋವಾದ ಕಲಂಗುಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪತ್ನಿ ನಸ್ರೀನ್ ತಾಜ್, ಕಳೆದ 19 ವರ್ಷಗಳಿಂದ ಪತಿ ನೂರ್ ಮಹಮ್ಮದ್ ಶೇಕ್ ಅವರೊಂದಿಗೆ ಜೀವನ ಸಾಗಿಸುತ್ತಿದ್ದು, ಹಲವು ವರ್ಷಗಳಿಂದ ಕುವೈತ್ ನಗರದಲ್ಲಿ ನಾವು ವಾಸವಾಗಿದ್ದೆವು ಎಂದು ತಿಳಿಸಿದ್ದಾರೆ.
ವಿಧಾನಸೌಧ ಮುಂಭಾಗದಿಂದ ಕಲ್ಬುರ್ಗಿಗೆ : ಕಳೆದ ಜನವರಿಯಲ್ಲಿ ಪತಿ ನೂರ್ ಮಹಮ್ಮದ್ ಶೇಕ್ ಅವರು ಭಾರತಕ್ಕೆ ವಾಪಸಾಗಿ ಗಣರಾಜ್ಯೋತ್ಸವ ಅಂಗವಾಗಿ ಬೈಕ್ನಲ್ಲಿ ಯಾತ್ರೆ ಕೈಗೊಂಡಿದ್ದರು. ಈ ಬಾರಿ ವಿಧಾನಸೌಧ ಮುಂಭಾಗದಿಂದ ಯಾತ್ರೆ ಆರಂಭಿಸಿ ಸುಮಾರು 700 ಕಿಲೋಮೀಟರ್ ಪ್ರಯಾಣಿಸಿ ಕಲ್ಬುರ್ಗಿಗೆ ಹೋಗಿದ್ದರು. ಅಲ್ಲಿಂದ ಗೋವಾಕ್ಕೆ ತೆರಳಿರುವ ಮಾಹಿತಿ ಇತ್ತು. ಆದರೆ, ಇದುವರೆಗೂ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕುಟುಂಬಸ್ಥರಿಂದ ಶೋಧ ಕಾರ್ಯ: ಸ್ಕೂಟರ್ನಲ್ಲಿ ಭಾರತದ ಧ್ವಜ, ಅಗತ್ಯ ವಸ್ತುಗಳು, ಬಟ್ಟೆ ಸೇರಿದಂತೆ ಇನ್ನಿತರ ವಸ್ತುಗಳನ್ನು ತೆಗೆದುಕೊಂಡು ಪ್ರಯಾಣ ಬೆಳೆಸಿದ್ದರು. ಗೋವಾ ಪೊಲೀಸರಿಗೆ ಈಗಾಗಲೇ ಮನವಿ ಮಾಡಿ, ಹುಡುಕಾಟ ನಡೆಸಲು ಕೋರಿದ್ದೇವೆ. ಜೊತೆಗೆ ಕುಟುಂಬಸ್ಥರು ಶೋಧ ಕಾರ್ಯ ಕೈಗೊಂಡಿದ್ದೇವೆ. ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಬೇಕು ಎಂದು ನಸ್ರೀನ್ ತಾಜ್ ಮನವಿ ಮಾಡಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ವರ್ತಕನಿಗೆ ವಂಚಿಸಿದ ಮಹಿಳೆ (ಮೈಸೂರು): ಜಾಲತಾಣಗಳಲ್ಲಿ ಯಾರ ಯಾರನ್ನೋ ಪರಿಚಯ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಬೇಕು. ಏಕೆಂದರೆ ಫ್ರೆಂಡ್ ರಿಕ್ವೆಸ್ಟ್ ನೆಪದಲ್ಲಿ ಮೋಸ ಮಾಡುವವರು ಹೆಚ್ಚಿದ್ದಾರೆ. ರಾಜಸ್ಥಾನದ ಮೂಲದ ವರ್ತಕರಾದ ಅಮರ್ ಸಿಂಗ್ ಎಂಬುವರಿಗೆ ಫೇಸ್ಬುಕ್ ಮೂಲಕ ಪರಿಚಯವಾದ ಮಹಿಳೆಯೊಬ್ಬಳು, ವರ್ತಕನಿಗೆ ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಆಸೆ ತೋರಿಸಿ 10.29 ಲಕ್ಷ ರೂಪಾಯಿ ಹಣ ಹಾಗೂ 19 ಗ್ರಾಂ ಚಿನ್ನ ಪಡೆದು ವಂಚಿಸಿರುವ ಘಟನೆ ನಡೆದಿದೆ. ಈ ಸಂಬಂಧ ಜಿಲ್ಲಾ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಜಾಲಾತಾಣದ ಪರಿಚಯ: ನಂಜನಗೂಡು ಪಟ್ಟಣದಲ್ಲಿ ರಾಜಸ್ಥಾನ ಮೂಲದ ಅಮರ್ ಸಿಂಗ್ ಕಳೆದ ಮೂರೂವರೆ ವರ್ಷದಿಂದ ತಮ್ಮ ದೊಡ್ಡಪ್ಪನ ಮಗನಾದ ಅಶೋಕನ ಬಳಿ ಪಾತ್ರೆ ವ್ಯಾಪಾರ ಮಾಡಿಕೊಂಡಿದ್ದಾರೆ. ಅಮರ್ ಸಿಂಗ್ ಉತ್ತಮ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದರು. ಇವರಿಗೆ ಆಗ ವಿಜಯ ರಜಿನಿ ಎಂಬ ಮಹಿಳೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದಳು.
ಮೊಬೈಲ್ನಲ್ಲಿ ಚಾಟಿಂಗ್ ಮಾಡುತ್ತಿದ್ದ ಅಮರ್ ಸಿಂಗ್ ಮಹಿಳೆ ಕೇಳಿದ ವಸ್ತುಗಳನ್ನೆಲ್ಲ ಕೊಡಿಸಿದ್ದರು ಎನ್ನಲಾಗ್ತಿದೆ. ಅಮರ್ ಸಿಂಗ್ ಜೊತೆ ಚೆನ್ನಾಗಿಯೇ ಇದ್ದ ಮಹಿಳೆ ಮದುವೆಯಾಗುತ್ತೇನೆ ಎಂದು ಸಹ ನಂಬಿಸಿದ್ದಳು. ನಂಬಿಸಿ ಆತನ ಜೊತೆಗೆ ಹಲವಾರು ಕಡೆ ಸುತ್ತಾಡುತ್ತಿದ್ದಳು. ಕೆಲವು ದಿನಗಳ ನಂತರ ಆಕೆಯು ಅಮರ್ ಸಿಂಗ್ ಜೊತೆ ಚಾಟಿಂಗ್ ಮಾಡುವುದನ್ನು ನಿಲ್ಲಿಸಿದ್ದಾಳೆ. ಚಾಟ್ ಮಾಡುವುದನ್ನು ನಿಲ್ಲಿಸಿರುವ ವಿಜಯ ರಂಜಿನಿ ಕೊನೆಗೆ ಇವರ ಮೆಸ್ಸೇಜ್ ಬಾರದಂತೆ ಫೇಸ್ಬುಕ್ನಲ್ಲಿ ಬ್ಲಾಕ್ ಮಾಡಿದ್ದಾಳೆ ಎಂದು ದೂರಿನಲ್ಲಿ ದಾಖಲಾಗಿದೆ.
ಓದಿ: ಫೇಸ್ಬುಕ್ನಲ್ಲಿ ಪರಿಚಯ: ಮದುವೆಯಾಗುವುದಾಗಿ ನಂಬಿಸಿ ವರ್ತಕನಿಗೆ ವಂಚಿಸಿದ ಮಹಿಳೆ