ETV Bharat / state

ನಿದ್ರೆಗೆ ಜಾರಿದ ಮಹಿಳಾ ಪ್ರಯಾಣಿಕರ ಖಾಸಗಿ ಅಂಗ ಮುಟ್ಟಿದ ಸಹ ಪ್ರಯಾಣಿಕ: ಪ್ರಕರಣ ದಾಖಲು - ಲೈಂಗಿಕ ದೌರ್ಜನ್ಯ

ವಿಮಾನ ಪ್ರಯಾಣದ ವೇಳೆ ನಿದ್ರೆಗೆ ಜಾರಿದ ಮಹಿಳಾ ಪ್ರಯಾಣಿಕರೊಬ್ಬರ ಜೊತೆ ಸಹ ಪ್ರಯಾಣಿಕ ಅಸಭ್ಯವಾಗಿ ವರ್ತಿಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮಹಿಳಾ ಪ್ರಯಾಣಿಕರ ಖಾಸಗಿ ಅಂಗ ಮುಟ್ಟಿದ ಸಹ ಪ್ರಯಾಣಿಕ

author img

By ETV Bharat Karnataka Team

Published : Nov 8, 2023, 6:59 PM IST

Updated : Nov 8, 2023, 7:34 PM IST

ದೇವನಹಳ್ಳಿ (ಬೆಂಗಳೂರು): ಪಕ್ಕದ ಸೀಟ್​ನಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರು ನಿದ್ರೆಗೆ ಜಾರಿದ ವೇಳೆ ಅವರ ಖಾಸಗಿ ಅಂಗಗಳನ್ನು ಮುಟ್ಟಿ ಪುರುಷ ಪ್ರಯಾಣಿಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದ್ದು, ಆತನ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವೆಂಬರ್ 6ರ ರಾತ್ರಿ ಮಹಿಳಾ ಪ್ರಯಾಣಿಕರೊಬ್ಬರು ಲುಫ್ತಾನ್ಸಾ ಏರ್​ಲೈನ್ಸ್​ನ LH 0754 ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. 38ಕೆ ನಂಬರ್ ಸೀಟ್​ನಲ್ಲಿ ಕುಳಿತ್ತಿದ್ದ ಅವರು ಪ್ರಯಾಣದ ವೇಳೆ ನಿದ್ರೆಗೆ ಜಾರಿದ್ದರು. ರಾತ್ರಿ 11.45ರ ಸಮಯದಲ್ಲಿ ಎಚ್ಚರಗೊಂಡಾಗ, ಪಕ್ಕದ 38ಜೆ ಸೀಟ್​ನಲ್ಲಿ ಕುಳಿತ್ತಿದ್ದ ಸುಮಾರು 50 ವರ್ಷದ ರಂಗನಾಥ್ ಎಂಬಾತ ಮಹಿಳೆಯ ಖಾಸಗಿ ಭಾಗದಲ್ಲಿ ಕೈಯನ್ನಿಟ್ಟಿದ್ದ, ಕೈ ತೆಗೆದು ಮತ್ತೆ ನಿದ್ದೆಗೆ ಜಾರಿದ್ದಾರೆ. 12ಗಂಟೆ ಸಮಯದಲ್ಲಿ ಎಚ್ಚರವಾದಾಗ ಮತ್ತೆ ಆತ ಖಾಸಗಿ ಭಾಗದಲ್ಲಿ ಕೈಯನ್ನಿಟ್ಟಿದ್ದ, ವಿಮಾನದ ಸಿಬ್ಬಂದಿಗೆ ಈ ವಿಷಯವನ್ನ ತಿಳಿಸಿದ ಮಹಿಳೆ ಬೇರೆಯ ಸೀಟ್​ನಲ್ಲಿ ಕುಳಿತು ಪ್ರಯಾಣಿಸಿರುವುದಾಗಿ ಆರೋಪಿಸಿದ್ದಾರೆ.

ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ ರಂಗನಾಥ್ ಎಂಬ ಪ್ರಯಾಣಿಕನ ವಿರುದ್ಧ ಮಹಿಳಾ ಪ್ರಯಾಣಿಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ರಂಗನಾಥ್ ಬೆಂಗಳೂರು ಮೂಲದವರೆಂದು ತಿಳಿದು ಬಂದಿದೆ.

ಇದನ್ನೂ ಓದಿ: ಏರ್​ಲೈನ್ಸ್ ಮಹಿಳಾ ಸಿಬ್ಬಂದಿಗೆ ಎಲ್ಲೆಲ್ಲೋ ಟಚ್ ಮಾಡಿ ಅಸಭ್ಯ ವರ್ತನೆ.. ಪ್ರಯಾಣಿಕನ ವಿರುದ್ಧ ದೂರು

ಇತ್ತೀಚಿನ ಪ್ರಕರಣಗಳು: ವಿಮಾನದಲ್ಲಿ ಗಗನಸಖಿ ಜೊತೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ವಿದೇಶಿ ವ್ಯಕ್ತಿಯೊಬ್ಬನನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರು ಬಂಧಿಸಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಮಾಲ್ಡೀವ್ಸ್ ಮೂಲದ ಪ್ರಯಾಣಿಕನನ್ನು ಬಂಧಿಸಲಾಗಿತ್ತು. 33 ವರ್ಷದ ಗಗನಸಖಿ ನೀಡಿದ ದೂರಿನ ಅನ್ವಯ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದರು.

ಮಾಲೆಯಿಂದ ಬೆಂಗಳೂರಿಗೆ ಬಂದಿದ್ದ ವಿಮಾನದಲ್ಲಿ ಪ್ರಯಾಣಿಸಿದ್ದ ಆರೋಪಿ, ಕ್ಯಾಬಿನ್ ಕ್ರೂ ಯುವತಿಯನ್ನ ಕರೆದು ಬಿಯರ್ ಹಾಗೂ ಗೋಡಂಬಿ ಕೇಳಿದ್ದ. ಸರ್ವ್ ಮಾಡುವ ಸಂದರ್ಭದಲ್ಲಿ 51 ವರ್ಷಗಳಿಂದಲೂ ನಿನ್ನಂತೆ ಇರುವ ಹುಡುಗಿಯನ್ನ ಹುಡುಕುತ್ತಿದ್ದೇನೆ. 10 ಡಾಲರ್ ಬದಲು 100 ಡಾಲರ್ ಕೊಡುತ್ತೇನೆ. ಉಳಿದ ಹಣ ನೀನೆ ಇಟ್ಟುಕೋ ಎಂದು ಆಕೆಯ ದೇಹವನ್ನ ಅಸಭ್ಯವಾಗಿ ಸ್ಪರ್ಶಿಸಿದ್ದ ಎಂದು ಆರೋಪಿಸಿದ್ದರು.

ಮತ್ತೋರ್ವ ಮಹಿಳಾ ಸಿಬ್ಬಂದಿ ಜತೆಗೂ ಆರೋಪಿ ಅಸಭ್ಯವಾಗಿ ವರ್ತಿಸಿದ್ದ ಎಂದು ದೂರು ನೀಡಿದ ಮೇರೆಗೆ ಬಂಧನವಾಗಿತ್ತು.

Last Updated : Nov 8, 2023, 7:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.