ETV Bharat / state

ಬಾಲಕಿ ಜೊತೆ ಅಸಭ್ಯ ವರ್ತನೆ: ಪೋಷಕರಿಗೆ ತಿಳಿಸಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ, ಆರೋಪಿ ಆತ್ಮಹತ್ಯೆ

ಅಸಭ್ಯ ವರ್ತನೆ ತೋರಿದ ವ್ಯಕ್ತಿ ಬಗ್ಗೆ ಬಾಲಕಿ ಪೋಷಕರಿಗೆ ತಿಳಿಸಿದ್ದಕ್ಕೆ ಆಕೆಯನ್ನು ಚಾಕುವಿನಿಂದ ಇರಿದು, ಕೊಲೆ ಮಾಡಲಾಗಿದೆ. ಈ ಘಟನೆ ನೆಲಮಂಗಲ ಸಮೀಪದ ಮಾದನಾಯಕನಹಳ್ಳಿಯ ಜಿಂದಾಲ್ ಕ್ವಾಟ್ರಸ್‌ನಲ್ಲಿ ನಡೆದಿದೆ.

A man from Haryana who behaved indecently with a girl
ಬಾಲಕಿ ಜೊತೆ ಅಸಭ್ಯ ವರ್ತನೆ
author img

By

Published : Aug 22, 2022, 8:54 PM IST

ನೆಲಮಂಗಲ: ಅಸಭ್ಯ ವರ್ತನೆ ತೋರಿದ ವ್ಯಕ್ತಿಯ ಬಗ್ಗೆ ಬಾಲಕಿ ಪೋಷಕರಿಗೆ ತಿಳಿಸಿದ್ದಕ್ಕೆ, ಕೋಪಗೊಂಡ ವ್ಯಕ್ತಿ ಆಕೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಜಿಂದಾಲ್​​ ಕ್ವಾಟ್ರಸ್​ನಲ್ಲಿ ನಡೆದಿದೆ. 11 ವರ್ಷದ ಬಾಲಕಿ ಚಾಕು ಇರಿತದಿಂದ ಕೊಲೆಯಾದಳು. ಬಾಲಕಿಯನ್ನು ಕೊಂದ ನಂತರ ಹರಿಯಾಣ ಮೂಲದ ನಂದಕಿಶೋರ್ (50) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೊಲೆಯಾದ ಬಾಲಕಿಯ ತಂದೆಯು ಕಳೆದ 20 ವರ್ಷಗಳಿಂದ ಜಿಂದಾಲ್ ನಗರದಲ್ಲಿ ವಾಸವಾಗಿದ್ದರು. ಆತ್ಮಹತ್ಯೆ ಮಾಡಿಕೊಂಡ ನಂದಕಿಶೋರ್ ಮತ್ತು ಬಾಲಕಿಯ ತಂದೆ ಜಿಂದಾಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಂದಕಿಶೋರ್ ಕೊಲೆಯಾದ ಬಾಲಕಿಯ ಜೊತೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ. ಈ ಬಗ್ಗೆ ಬಾಲಕಿಯ ತಂದೆ ನಂದಕಿಶೋರ್​ಗೆ ಪ್ರಶ್ನೆ ಮಾಡಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಸಹ ಆಗಿತ್ತು.

ನಂತರ ಸಂತ್ರಸ್ತೆಯ ತಂದೆ ಜಿಂದಾಲ್ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ದೂರು ನೀಡಿದ್ದರು. ಸಂಘದ ಮುಖಂಡರು 15 ದಿನದೊಳಗೆ ಮನೆ ಖಾಲಿ ಮಾಡುವಂತೆ ನಂದಕಿಶೋರ್​​ಗೆ ನೋಟಿಸ್ ನೀಡಿದ್ರು. ಭಾನುವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಬಾಲಕಿ ಆಟ ಆಡಲೆಂದು ಹೊರಗೆ ಬಂದಾಗ, ಬಾಲಕಿಯ ಎದುರು ನಂದಕಿಶೋರ್ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೇ ಆಕೆಯ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ.

ಇದನ್ನೂಓದಿ: ತಂದೆಯೇ ಚಲಾಯಿಸುತ್ತಿದ್ದ ಆಟೋದಲ್ಲಿ ಮಗಳ ಜೊತೆ ಅಸಭ್ಯ ವರ್ತನೆ: ವ್ಯಕ್ತಿಯ ಬಂಧನ

ಬಳಿಕ ಬಾಲಕಿಯ ಚೀರಾಟ ಕೇಳಿ ಹೊರಗೆ ಬಂದ ಆಕೆಯ ಪೋಷಕರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವಿಗೀಡಾಗಿದ್ದಾಳೆ. ನಂದಕಿಶೋರ್ ಸಹ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.