ETV Bharat / state

ವಿಧಾನಸೌಧದಲ್ಲಿ ತಪಾಸಣೆ ನಡೆಸುವಾಗ ಮಹಿಳೆಯ ವ್ಯಾನಿಟಿ ಬ್ಯಾಗ್​ನಲ್ಲಿ ಚಾಕು ಪತ್ತೆ..!

ವಿಧಾನಸೌಧದ ಪೂರ್ವದ್ವಾರದಲ್ಲಿ ಮಹಿಳೆಯೊಬ್ಬರ ಬ್ಯಾಗ್​ನಲ್ಲಿ ಚಾಕು ಪತ್ತೆಯಾಗಿದೆ.

ವಿಧಾನಸೌಧ
ವಿಧಾನಸೌಧ
author img

By

Published : Jul 10, 2023, 3:18 PM IST

Updated : Jul 10, 2023, 3:23 PM IST

ಬೆಂಗಳೂರು: ಇತ್ತೀಚೆಗೆ ವ್ಯಕ್ತಿಯೊಬ್ಬರು ಅಕ್ರಮವಾಗಿ ಸದನ ಪ್ರವೇಶಿಸಿದ ಘಟನೆ ನಡೆದಿತ್ತು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಆತಂಕಕಾರಿ ಘಟನೆ ವಿಧಾನಸೌಧದ ಆವರಣದಲ್ಲಿ ನಡೆದಿದೆ. ವಿಧಾನಸೌಧದಲ್ಲಿ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್​ನಲ್ಲಿ ಚಾಕು ಪತ್ತೆಯಾಗಿದೆ.

ತಿಪ್ಪೇರುದ್ರಪ್ಪ ಎಂಬುವರು ಸದನದೊಳಗೆ ಅಕ್ರಮವಾಗಿ ಪ್ರವೇಶಿಸಿ ಭದ್ರತಾ ಲೋಪವಾದ ಹಿನ್ನೆಲೆಯಲ್ಲಿ ಇದೀಗ ವಿಧಾನಸೌಧದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ವಿಧಾನಸೌಧಕ್ಕೆ ಬರುವ ಎಲ್ಲರನ್ನೂ ತೀವ್ರವಾಗಿ ತಪಾಸಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್​ನಲ್ಲಿ ಚಾಕು ಪತ್ತೆಯಾಗಿದೆ.

ಇತ್ತೀಚೆಗೆ ನಡೆದಿದ್ದ ಭದ್ರತಾ ಲೋಪ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಒದಗಿಸಲಾಗಿದ್ದ ಬಿಗಿಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ತೀವ್ರ ತಪಾಸಣೆಗೊಳಪಡಿಸುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್​ನಲ್ಲಿ ಚಾಕು ಕಂಡುಬಂದಿದೆ. ವಿಧಾನಸೌಧದ ಪೂರ್ವ ಬಾಗಿಲಿನ ಮೂಲಕ ಈ ಮಹಿಳೆ ಒಳ ಪ್ರವೇಶಿಸಿದ್ದರು. ದ್ವಾರದಲ್ಲೇ ಇರುವ ಬ್ಯಾಗೇಜ್ ಸ್ಕ್ಯಾನಿಂಗ್ ಮಷಿನ್​ನಲ್ಲಿ ಇವರ ಬ್ಯಾಗ್​ಅನ್ನು ಸ್ಕ್ಯಾನಿಂಗ್​ಗೆ ಒಳಪಡಿಲಾಗಿತ್ತು. ಈ ವೇಳೆ ಅದರಲ್ಲಿ ಚಾಕು ಇರುವುದನ್ನು ಸ್ಕ್ಯಾನಿಂಗ್ ಸ್ಕ್ರೀನ್ ನಲ್ಲಿ ಭದ್ರತಾ ಸಿಬ್ಬಂದಿ ನೋಡುತ್ತಾರೆ. ಕೂಡಲೇ ಆ ಬ್ಯಾಗ್ ಅನ್ನು ಪರಿಶೀಲಿಸಿ, ಅದರಲ್ಲಿದ್ದ ವಸ್ತುಗಳನ್ನು ಹೊರಹಾಕಿ ಚಾಕುವನ್ನು ವಶಪಡಿಸಿಕೊಳ್ಳುತ್ತಾರೆ.

ಆ ಮಹಿಳೆ ಹೊರಗುತ್ತಿಗೆ ನೌಕರರಾಗಿದ್ದು, ವಿಧಾನಸೌಧದ ರೂಂ ನಂ.263ರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕೊನೆಗೆ ವಿಚಾರಣೆ ನಡೆಸಿ ಅವರನ್ನು ಬಿಡಲಾಯಿತು.

ಸ್ಪೀಕರ್ ಖಾದರ್ ವಿಧಾನಸೌಧ ರೌಂಡ್ಸ್: ವ್ಯಕ್ತಿಯೊಬ್ಬರು ಸದನದ ಒಳಗೆ ಅಕ್ರಮ ಪ್ರವೇಶದ ಹಿನ್ನೆಲೆ ಸ್ಪೀಕರ್ ಯು ಟಿ ಖಾದರ್ ವಿಧಾನಸೌಧದ ಭದ್ರತಾ ಪರಿಶೀಲನೆ ನಡೆಸಿದರು. ಇತ್ತ ವಿಧಾನಸೌಧದಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ವಿಧಾನಸೌಧಕ್ಕೆ ಮುಂಚಿತವಾಗಿ ಆಗಮಿಸಿ ಪೊಲೀಸ್ ಆಯುಕ್ತ ದಯಾನಂದ್ ಭದ್ರತೆ ಪರಿಶೀಲಿಸಿದರು.

ವಿಧಾನಸೌಧದ ಭದ್ರತೆ ಪರಿಶೀಲನೆ ‌ನಡೆಸಿದ ಬಳಿಕ ಮಾತನಾಡಿದ ಸ್ಪೀಕರ್ ಯು ಟಿ ಖಾದರ್, ವಿಧಾನಸೌಧದ ಸುತ್ತಮುತ್ತ ಭದ್ರತಾ ವ್ಯವಸ್ಥೆ ಯಾವ ರೀತಿ ಮಾಡಬಹುದು?. ಹೊಸ ಟೆಕ್ನಾಲಜಿ ಮೂಲಕ ಮತ್ತಷ್ಟು ರಕ್ಷಣೆ ಕೊಡುವ ಕೆಲಸವನ್ನು ಹೇಗೆ? ಮಾಡಬಹುದು ಎಂದು ಪರಿಶೀಲನೆ ನಡೆಸಿದ್ದೇವೆ ಎಂದರು.

ವಿಧಾನಸೌಧಕ್ಕೆ ಅಗತ್ಯಕ್ಕಿಂತ ಹೆಚ್ಚಿನವರ ಆಗಮನ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ವಿಧಾನಸೌಧ ಇರೋದೆ ಜನಸಾಮಾನ್ಯರ ಆಗಮನಕ್ಕೆ. ಆಗಮನಕ್ಕೆ ತಕ್ಕ ಭದ್ರತಾ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಸೂಚನೆ ನೀಡಿದ್ದೇನೆ. ಮೊನ್ನೆಯ ಪ್ರಕರಣ ಯಾಕೆ ಆಯ್ತು, ಏನಾಯ್ತು ಅಂತ ಅಧಿಕಾರಿಗಳು ತನಿಖೆ ಮಾಡ್ತಾರೆ. ಜನಸಾಮಾನ್ಯರು, ಜನಪ್ರತಿನಿಧಿಗಳು ಸುರಕ್ಷಿತವಾಗಿ ವಿಧಾನಸೌಧಕ್ಕೆ ಬಂದು ಹೋಗುವಂತಹ ವಾತವರಣ ಸೃಷ್ಟಿ ಮಾಡಲಿದ್ದೇವೆ ಎಂದರು.

ಬಜೆಟ್ ಅಧಿವೇಶನದಲ್ಲಿ‌ ಶಾಸಕಿಯ ಸ್ಥಾನದಲ್ಲಿ ಕುಳಿತ ಅನಾಮಿಕ : ಬಜೆಟ್ ಮಂಡನೆ ವೇಳೆ ಅನಾಮಿಕ ವ್ಯಕ್ತಿಯೊಬ್ಬ ಭದ್ರತಾ ಸಿಬ್ಬಂದಿಯನ್ನ ಯಾಮಾರಿಸಿ ಸದನದ ಒಳಗೆ ಪ್ರವೇಶಿಸಿದ ಘಟನೆ ವಿಧಾನಸಭೆಯಲ್ಲಿ (8-7-2023)ರಂದು ನಡೆದಿತ್ತು. ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದ ವೇಳೆ ತಿಪ್ಪೇರುದ್ರಪ್ಪ ವಿಧಾನಸಭೆ ಪ್ರವೇಶಿಸಿದ್ದರು. ಈ ವ್ಯಕ್ತಿಯನ್ನು ಮೊಳಕಾಲ್ಮೂರು ಕ್ಷೇತ್ರದ ನಿವಾಸಿ ಎಂದು ಗುರುತಿಸಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ವಿಧಾನಸೌಧ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಇದನ್ನೂ ಓದಿ: ಬಜೆಟ್ ಅಧಿವೇಶನದಲ್ಲಿ‌ ಶಾಸಕಿಯ ಸ್ಥಾನದಲ್ಲಿ ಕುಳಿತ ಅನಾಮಿಕ : ಪೊಲೀಸ್ ಭದ್ರತಾ ವೈಫಲ್ಯವೇ..? ವರದಿ‌ ಕೇಳಿದ ಹೋಮ್ ಮಿನಿಸ್ಟರ್

Last Updated : Jul 10, 2023, 3:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.