ಬೆಂಗಳೂರು: ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಹಾಡಹಗಲೇ ಕಳ್ಳತನ ಮಾಡುತ್ತಿದ್ದ ದಂಪತಿಯನ್ನು ಜ್ಞಾನಭಾರತಿ ಪೊಲೀಸರು ಸೆರೆ ಹಿಡಿದಿದ್ದಾರೆ. ನಾಗರಾಜ್ ಹಾಗೂ ರಮ್ಯ ಬಂಧಿತರು. ಇವರಿಂದ 65 ಗ್ರಾಂ ಚಿನ್ನ, 50 ಗ್ರಾಂ ಬೆಳ್ಳಿ, ಎರಡು ಬೈಕ್ ಹಾಗೂ ಮೊಬೈಲ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಮೈಸೂರು ಮೂಲದ ರಮ್ಯ ಹಾಗೂ ಉತ್ತರಹಳ್ಳಿಯ ನಾಗರಾಜ್ ಕೆಲ ವರ್ಷಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಈ ನಡುವೆ ರಮ್ಯ ಹಾಗೂ ನಾಗರಾಜ್ ಸ್ನೇಹಿತರು ಕಳ್ಳತನದ ಹಾದಿ ಹಿಡಿದಿದ್ದನ್ನು ಗಮನಿಸಿದ ದಂಪತಿ, ತಾವೂ ಸಹ ಅಡ್ಡಹಾದಿ ಹಿಡಿದಿದ್ದಾರೆ. ಹಾಡಹಾಗಲೇ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿ, ಮನೆಯೊಳಗೆ ನಾಗರಾಜ್ ಹೋದರೆ ಹೊರಗಡೆ ರಮ್ಯ ಗಸ್ತು ಕಾಯುತ್ತಿದ್ದಳು. ಯಾರಾದರು ಬಂದರೆ ಸಿಗ್ನಲ್ ಕೊಟ್ಟು ಇಬ್ಬರೂ ಪರಾರಿ ಆಗುತ್ತಿದ್ದರು. ಇದೇ ರೀತಿ ಮಾದನಾಯಕಹಳ್ಳಿ, ಆರ್.ಆರ್.ನಗರ ಹಾಗೂ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಾಲ್ಕು ಕಳ್ಳತನ ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮನೆ ಕಳ್ಳತನ: ಬೆಂಗಳೂರು ನಗರ ಪೊಲೀಸ್ ಇಲಾಖೆಯಿಂದ ಕಿರುಚಿತ್ರದ ಮೂಲಕ ಜಾಗೃತಿ