ETV Bharat / state

ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿದ ಪ್ರಕರಣ: 5,500 ಸಿಮ್‌ಕಾರ್ಡ್​ಗಳ ಸಿಡಿಆರ್ ಬೆನ್ನುಬಿದ್ದ ಎಟಿಸಿ - CDR Collection of Simcards

ಕೇವಲ ಮಿಲಿಟರಿ ಬೇಸ್ ಅಷ್ಟೇ ಅಲ್ಲದೆ ಇಸ್ರೋ, ಡಿಆರ್​ಡಿಒ, ಹೆಚ್​ಎಎಲ್ ಸೇರಿದಂತೆ ಕೆಲ ಸಂಸ್ಥೆಗಳಿಂದಲೂ ನಂಬರ್  ಪಡೆಯಲು ಎಟಿಸಿ ಟೀಂ ಮುಂದಾಗಿದೆ. ಈ ಪ್ರಕರಣದಲ್ಲಿ ಇಲ್ಲಿವರೆಗೂ ಒಟ್ಟು ಏಳು ಮಂದಿ ಆರೋಪಿಗಳ ಬಂಧನವಾಗಿದೆ‌‌. ವಿದೇಶದಿಂದ ಹವಾಲ ವರ್ಗಾವಣೆ ಮತ್ತು ವಿದೇಶಿ ಖಾತೆಗಳಿಂದಲೂ ಹಣ ವರ್ಗಾವಣೆಯಾಗಿರುವ ಬಗ್ಗೆ ಕೂಡ ಎಟಿಸಿ ತನಿಖೆ ನಡೆಸುತ್ತಿದೆ.

atc-seized-5500-simcards
5,500 ಸಿಮ್‌ಕಾರ್ಡ್​ಗಳ ವಶಕ್ಕೆ ಪಡೆದ ಎಟಿಸಿ
author img

By

Published : Jul 25, 2021, 3:48 PM IST

ಬೆಂಗಳೂರು: ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತನೆ ಮಾಡುತ್ತಿದ್ದ ಜಾಲ ಪ್ರಕರಣದ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿರುವ ಭಯೋತ್ಪಾದನ ನಿಗ್ರಹ ದಳ (ಎಟಿಸಿ) ಅಧಿಕಾರಿಗಳು ಇದುವರೆಗೂ 5,500ಕ್ಕೂ ಹೆಚ್ಚು ಸಿಮ್ ಕಾರ್ಡ್ ಜಪ್ತಿ ಮಾಡಿದ್ದಾರೆ.

ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ದೇಶದ ಮಿಲಿಟರಿ ವ್ಯವಸ್ಥೆಗೆ ಅತಂಕ ತಂದಿಟ್ಟಿದ್ದ ಕೇಸ್‌ ಇದಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳು ಮಿಲಿಟರಿ ನೆಲೆಗೆ ಹಿರಿಯ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಭದ್ರತೆಯ ಬಗ್ಗೆ ಮಾಹಿತಿ ಕೇಳಿದ್ದರು. ತಕ್ಷಣವೇ ಎಚ್ಚೆತ್ತ ಮಿಲಿಟರಿ ಅಧಿಕಾರಿಗಳು ಆ ಕರೆ ಎಲ್ಲಿಂದ ಬಂದಿದೆ ಎಂದು ಪತ್ತೆ ಹಚ್ಚಿದ್ದರು.

5,500 ಸಿಮ್‌ಕಾರ್ಡ್​ಗಳ ವಶಕ್ಕೆ ಪಡೆದ ಎಟಿಸಿ

ಅದು ಬೆಂಗಳೂರಿನ ಬಿಟಿಎಂ ಲೇಔಟ್​ನಿಂದ ಬಂದಿದ್ದ ಕರೆ ಎಂಬುದು ಗೊತ್ತಾಗುತ್ತಿದ್ದಂತೆ ಸಿಸಿಬಿ ಪೊಲೀಸರು ಕೂಡಲೇ ಜಾಗೃತರಾಗಿದ್ದಾರೆ. ನಂತರ ತಮಿಳುನಾಡು ಹಾಗೂ ಕೇರಳ ಮೂಲದ ಆರೋಪಿಗಳಾದ ಇಬ್ರಾಹಿಂ ಪುಲ್ಲಟ್ಟಿ ಹಾಗೂ ಗೌತಮ್ ತುತ್ತುಕುಡಿ ಸಂತನ್ ಕುಮಾರ್, ಸುರೇಶ್ ತಂಗವೇಲು, ಜೈ ಗಣೇಶ್ ಬಂಧಿಸಿ 5500ಕ್ಕೂ ಹೆಚ್ಚು ಸಿಮ್ ಕಾರ್ಡ್ ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಮ್‌ಕಾರ್ಡ್​ಗಳ ಸಿಡಿಆರ್ ಸಂಗ್ರಹ: ಎಟಿಸಿ ಅಧಿಕಾರಿಗಳು ಎಲ್ಲಾ ಕರೆಗಳನ್ನು, ಒಳಬರುವ ಕರೆ (ಸಿಡಿಆರ್) ಬೆನ್ನು ಹತ್ತಿದ್ದಾರೆ. ಪಶ್ಚಿಮ ಬಂಗಾಳದ ಸುಕ್ನಾದಲ್ಲಿರೋ ಮಿಲಿಟರಿ ಬೇಸ್​ಗೆ ಬಂದಿದ್ದ ಕರೆಯ ಜಾಡು ಹಿಡಿದಿದ್ದ ಎಟಿಸಿ ಈಗ 5,500 ಸಿಮ್‌ಕಾರ್ಡ್​ಗಳನ್ನ ಸಿಡಿಆರ್​ಗೆ ಹಾಕಿದೆ. ಪ್ರತಿನಿತ್ಯ 250 ಸಿಮ್​ಗಳ ಸಿಡಿಆರ್ ಪಡೆಯುತ್ತಿದ್ದು, ಇದುವರೆಗೂ 2,500 ಸಿಮ್‌ಕಾರ್ಡ್​ಗಳ ಸಿಡಿಆರ್ ಕಲೆಕ್ಟ್ ಮಾಡಲಾಗಿದೆ.ವಿದೇಶಗಳಿಂದ ಯಾವ್ಯಾವ ನಂಬರ್ ನಿಂದ‌ ಕರೆ ಬಂದಿದೆ ಎಂದು ಒಂದು ವರ್ಷದ ಸಿಡಿಆರ್ ಮಾಹಿತಿಯನ್ನ ಅಧಿಕಾರಿಗಳು ಪಡೆದಿದ್ದಾರೆ. ಟೆರರಿಸ್ಟ್‌ಗಳಿಂದ ಯಾವುದಾದರೂ ಕರೆ ಆಪರೇಟ್ ಆಗಿದ್ಯಾ? ಎಂಬ ಆಯಾಮದಲ್ಲಿ ಕೂಡ ತನಿಖೆ ನಡೆಸುತ್ತಿದ್ದಾರೆ.‌

ಸದ್ಯ ರಕ್ಷಣಾ ಇಲಾಖೆಯ ನಂಬರ್ ಪಡೆದು ತಾಳೆ ಮಾಡಲು ಮುಂದಾಗಿರುವ ಅಧಿಕಾರಿಗಳು‌, ದೆಹಲಿಯ ಸಿಮ್ ಕಾರ್ಡ್ ಪ್ರಮುಖ ಕಚೇರಿಗಳಿಗೆ ಪತ್ರ ಬರೆದು ಮಾಹಿತಿ ಕೇಳಿದ್ದಾರೆ. ಕೇರಳ, ಬೆಂಗಳೂರು, ಚೆನ್ನೈ, ತಮಿಳುನಾಡಿನಿಂದ ಸಿಮ್​ಗಳನ್ನು ಖರೀದಿಸಿ ಬಳಕೆ ಮಾಡಿರುವ ಅತಂಕಕಾರಿ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೆಚ್ಚು ಸಿಮ್​ಗಳು ಮದ್ರಾಸ್​ನಿಂದ ಮಾರಾಟವಾಗಿರುವ ಬಗ್ಗೆ ಮಾಹಿತಿಯಿದೆ. ಫೇಕ್ ಐಡಿ ಕ್ರಿಯೇಟ್ ಮಾಡಿ ಅಪರಿಚಿತರ ಹೆಸರಿನಲ್ಲಿ ಸಿಮ್ ಕಾರ್ಡ್ ರಿಜಿಸ್ಟ್ರೇಷನ್ ಮಾಡಲಾಗಿದೆಯಂತೆ. ಹೀಗಾಗಿ, ಯಾರು ಯಾರ ಹೆಸರಿನಲ್ಲಿ ಎಷ್ಟು ಸಿಮ್​ಗಳು ಸೇಲ್ ಆಗಿವೆ ಎಂದು ಅಧಿಕಾರಿಗಳು ಮಾಹಿತಿ ಕೇಳಿ ತನಿಖೆ ನಡೆಸುತ್ತಿದ್ದಾರೆ.

ಕೇವಲ ಮಿಲಿಟರಿ ಬೇಸ್ ಅಷ್ಟೇ ಅಲ್ಲದೆ ಇಸ್ರೋ, ಡಿಆರ್​ಡಿಒ, ಹೆಚ್​ಎಎಲ್ ಸೇರಿದಂತೆ ಕೆಲ ಸಂಸ್ಥೆಗಳಿಂದಲೂ ನಂಬರ್ ಪಡೆಯಲು ಎಟಿಸಿ ಟೀಂ ಮುಂದಾಗಿದೆ. ಈ ಪ್ರಕರಣದಲ್ಲಿ ಇಲ್ಲಿವರೆಗೂ ಒಟ್ಟು ಏಳು ಮಂದಿ ಆರೋಪಿಗಳ ಬಂಧನವಾಗಿದೆ‌‌. ವಿದೇಶದಿಂದ ಹವಾಲ ವರ್ಗಾವಣೆ ಮತ್ತು ವಿದೇಶಿ ಖಾತೆಗಳಿಂದಲೂ ಹಣ ವರ್ಗಾವಣೆಯಾಗಿರುವ ಬಗ್ಗೆ ಕೂಡ ಎಟಿಸಿ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: ಬಿಎಸ್‌ವೈ ಸರ್ಕಾರಕ್ಕೆ 2 ವರ್ಷ: ಆಂತರಿಕ ಬೇಗುದಿ ಜೊತೆ ಪ್ರತಿಪಕ್ಷಗಳ ಹೋರಾಟದ ಕಿರಿಕಿರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.